ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಕಳೆದುಹೋದ ನಂಬಿಕೆಗೆ ಬೆಳಕಾದ ಸಂತ ಅಂತೋನಿ…

Share Below Link

ಜೂನ್ ೧೩ ಬಂತೆದರೆ ವಿಶ್ವದಾದ್ಯಂತ ಕೋಟ್ಯಂತರ ಕ್ರೈಸ್ತ ಭಕ್ತರ ಮನಸ್ಸಿನಲ್ಲಿ ವಿಶೇಷ ಭಕ್ತಿಭಾವ – ಸಂಭ್ರಮ ಮನೆಮಾಡುತ್ತದೆ. ಆ ದಿನವು ಕೇವಲ ಒಬ್ಬ ಸಂತರ ಸ್ಮರಣಾ ದಿನವಲ್ಲ ಅದು ಪ್ರೀತಿ, ವಿನಯ, ದೇವರ ಮೇಲಿನ ಅಚಲ ವಿಶ್ವಾಸ ಮತ್ತು ಮಾನವಸೇವೆಯ ಆದರ್ಶಗಳನ್ನು ನೆನಪಿಸಿಕೊಳ್ಳುವ ಪವಿತ್ರ ಕ್ಷಣವಾಗಿದೆ. ಅಂತಹ ಮಹಾನ್ ವ್ಯಕ್ತಿತ್ವವೇ ಪಡುವಾದ ಪರಮ ಪೂಜ್ಯ ಸಂತ ಅಂತೊನಿಯವರು.
ದೈವಸೇವೆಗೆ ಅರ್ಪಿತವಾದ ಜೀವನ:
ಸಂತ ಅಂತೊನಿ ಅವರು ಕ್ರಿ.ಶ. ೧೧೯೫ರಲ್ಲಿ ಪೋರ್ಚುಗಲ್‌ನ ಲಿಸ್ಬನ್ ನಗರದಲ್ಲಿ ಜನಿಸಿದರು. ಅವರ ಮೂಲ ಹೆಸರು ಫೆರ್ನಾಂಡೋ ಮಾರ್ಟಿನ್ಸ್. ಧಾರ್ಮಿಕ ವಾತಾವರಣದಲ್ಲಿ ಬೆಳೆದ ಅವರು ಬಾಲ್ಯದಿಂದಲೇ ಪವಿತ್ರ ಗ್ರಂಥಗಳ ಅಧ್ಯಯನ, ಪ್ರಾರ್ಥನೆ ಮತ್ತು ದೇವರ ಸೇವೆಯತ್ತ ಆಕರ್ಷಿತರಾಗಿದ್ದರು. ಆಗಸ್ಟೀನ್ ಧರ್ಮಸಂಘದಲ್ಲಿ ಶಿಕ್ಷಣ ಪಡೆದ ನಂತರ ಅವರು ಫ್ರಾನ್ಸಿಸ್ಕನ್ ಧರ್ಮಸಭೆಗೆ ಸೇರಿ ತಮ್ಮ ಹೆಸರನ್ನು ಅಂತೊನಿ ಎಂದು ಬದಲಾಯಿಸಿಕೊಂಡರು. ಈ ಹೆಸರು ಕೇವಲ ಹೊಸ ಗುರುತಲ್ಲ ಬದಲಿಗೆ ಸಂಪೂರ್ಣವಾಗಿ ದೇವರ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡ ಸಂಕೇತವೂ ಆಗಿತ್ತು.
ಸಂತ ಅಂತೊನಿ ಅವರ ಉಪದೇಶಗಳಲ್ಲಿ ಕೇವಲ ಧಾರ್ಮಿಕ ಬೋಧನೆ ಮಾತ್ರ ಇರಲಿಲ್ಲ. ಅವುಗಳಲ್ಲಿ ಮಾನವೀಯತೆ, ಕರುಣೆ, ನ್ಯಾಯ, ಕ್ಷಮೆ ಮತ್ತು ಪ್ರೀತಿಯ ಸಂದೇಶಗಳು ಅಡಗಿದ್ದವು. ಅವರ ಮಾತುಗಳು ಜನರ ಹೃದಯವನ್ನು ಸ್ಪರ್ಶಿಸುತ್ತಿದ್ದವು. ಬಡವರು, ನಿರ್ಗತಿಕರು ಮತ್ತು ನಿರಾಶೆಯಲ್ಲಿದ್ದವರಿಗೆ ಅವರು ಆಶಾಕಿರಣವಾಗಿದ್ದರು.
ಇಟಲಿಯ ಪಡುವಾ ನಗರದಲ್ಲಿ ಅವರು ನೀಡಿದ ಪ್ರಭಾವಶಾಲಿ ಪ್ರವಚನಗಳು ಸಾವಿರಾರು ಜನರನ್ನು ದೇವರ ಮಾರ್ಗದತ್ತ ಸೆಳೆದವು. eನ ಮತ್ತು ವಿನಯ ಒಂದಾಗಿzಗ ವ್ಯಕ್ತಿಯ ಮಾತು ಸಮಾಜವನ್ನು ಬದಲಾಯಿಸಬಲ್ಲದು ಎಂಬುದಕ್ಕೆ ಅವರ ಜೀವನವೇ ಸಾಕ್ಷಿಯಾಗಿದೆ.
ಕ್ರಿ.ಶ. ೧೨೩೧ರಲ್ಲಿ ಕೇವಲ ೩೬ನೇ ವಯಸ್ಸಿನಲ್ಲಿ ಸಂತ ಅಂತೊನಿ ಅವರು ಪಡುವಾದಲ್ಲಿ ನಿಧನರಾದರು. ಅವರ ಅಸಾಮಾನ್ಯ ಪವಿತ್ರ ಜೀವನವನ್ನು ಗುರುತಿಸಿ, ಮುಂದಿನ ವರ್ಷವೇ ಪೋಪ್ ಗ್ರೆಗರಿ ಐಗಿ ಅವರು ಅವರನ್ನು ಸಂತರ ಪಟ್ಟಕ್ಕೆ ಏರಿಸಿದರು.
೧೨೬೩ರಲ್ಲಿ ಅವರ ಪಾರ್ಥಿವ ಶರೀರವನ್ನು ಮರುಸ್ಥಾಪಿಸುವ ವೇಳೆ ಅವರ ನಾಲಿಗೆ ಅಕ್ಷುಣ್ಣವಾಗಿರುವುದು ಕಂಡುಬಂದಿತು ಎಂಬ ಪ್ರಸಂಗವು ಕ್ರೈಸ್ತ ಪರಂಪರೆಯಲ್ಲಿ ವಿಶೇಷ ಮಹತ್ವ ಪಡೆದಿದೆ. ದೇವರ ವಾಕ್ಯವನ್ನು ನಿಷ್ಠೆಯಿಂದ ಸಾರಿದ ಅವರ ನಾಲಿಗೆ ದೇವರ ಕೃಪೆಯ ಸಂಕೇತವೆಂದು ಅನೇಕ ಭಕ್ತರು ಭಾವಿಸುತ್ತಾರೆ. ಈ ಘಟನೆ ವಿಶ್ವಾಸಿಗಳಲ್ಲಿ ಅವರ ಮೇಲಿನ ಭಕ್ತಿಯನ್ನು ಇನ್ನಷ್ಟು ಗಟ್ಟಿಗೊಳಿಸಿತು.
ಸಂತ ಅಂತೊನಿ ಅವರನ್ನು ವಿಶ್ವದಾದ್ಯಂತ ಕಳೆದುಹೋದ ವಸ್ತುಗಳ ಪೋಷಕ ಸಂತ ಎಂದು ಭಕ್ತಿಯಿಂದ ಸ್ಮರಿಸಲಾಗುತ್ತದೆ. ಅಮೂಲ್ಯ ವಸ್ತು, ದಾಖಲೆ ಅಥವಾ ಕೆಲವೊಮ್ಮೆ ಜೀವನದ ದಿಕ್ಕೇ ಕಳೆದುಹೋದಾಗಲೂ ಜನರು ಅವರ ಮಧ್ಯಸ್ಥಿಕೆಯನ್ನು ಕೋರಿ ಪ್ರಾರ್ಥಿಸುತ್ತಾರೆ. ಭಕ್ತರ ಅನುಭವಗಳಲ್ಲಿ ಅನೇಕರು ತಮ್ಮ ಕಳೆದುಹೋದ ವಸ್ತುಗಳು ದೊರೆತಿವೆ ಎಂದು ಸಾಕ್ಷ್ಯ ನೀಡುತ್ತಾರೆ. ಆದರೆ ಈ ನಂಬಿಕೆಯ ಆಳವಾದ ಅರ್ಥ ಇನ್ನೂ ವಿಶಾಲವಾಗಿದೆ. ಸಂತ ಅಂತೊನಿ ನಮ್ಮ ಜೀವನದಲ್ಲಿ ಕಳೆದುಹೋದ ನಂಬಿಕೆ, ಶಾಂತಿ, ಪ್ರೀತಿ, ಕುಟುಂಬದ ಐಕ್ಯತೆ ಮತ್ತು ದೇವರೊಂದಿಗಿನ ಸಂಬಂಧವನ್ನು ಮರುಪಡೆಯಲು ಪ್ರೇರೇಪಿಸುವ ಆಧ್ಯಾತ್ಮಿಕ ಮಾರ್ಗದರ್ಶಕರಾಗಿzರೆ.
ಮಂಗಳವಾರದ ವಿಶೇಷ ಭಕ್ತಿ:
ವಿಶ್ವದ ಅನೇಕ ಚರ್ಚುಗಳಲ್ಲಿ ಪ್ರತಿ ಮಂಗಳವಾರ ಸಂತ ಅಂತೊನಿಯವರ ವಿಶೇಷ ನವೇನಾ ಮತ್ತು ಪ್ರಾರ್ಥನೆಗಳು ನಡೆಯುತ್ತವೆ. ಭಕ್ತರು ಮೇಣದ ಬತ್ತಿಗಳನ್ನು ಬೆಳಗಿಸಿ, ತಮ್ಮ ಜೀವನದ ಸಂಕಷ್ಟಗಳನ್ನು ದೇವರ ಸನ್ನಿಽಯಲ್ಲಿ ಅರ್ಪಿಸಿ, ಸಂತ ಅಂತೊನಿಯವರ ಮಧ್ಯಸ್ಥಿಕೆಯನ್ನು ಕೋರುತ್ತಾರೆ. ಭಾರತದಲ್ಲಿಯೂ ಗೋವಾ, ಕರ್ನಾಟಕ, ಕೊಚ್ಚಿ ಹಾಗೂ ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಅವರ ಭಕ್ತಿ ಅಪಾರವಾಗಿ ಬೆಳೆದಿದೆ.
ಇಂದಿನ ಆಧುನಿಕ ಬದುಕಿನಲ್ಲಿ ಮನುಷ್ಯನು ಹಣ, ಹುz ಮತ್ತು ಸ್ಪರ್ಧೆಯ ನಡುವೆ ಆಂತರಿಕ ಶಾಂತಿಯನ್ನು ಕಳೆದುಕೊಳ್ಳುತ್ತಿzನೆ. ಇಂತಹ ಸಂದರ್ಭದಲ್ಲಿ ಸಂತ ಅಂತೊನಿಯವರ ಜೀವನ ನಮಗೆ ಕೆಲ ಮಹತ್ವದ ಪಾಠಗಳನ್ನು ಕಲಿಸುತ್ತದೆ. ಅವುಗಳೆಂದರೆ,

ದೇವರ ಮೇಲಿನ ವಿಶ್ವಾಸ ಎಂದಿಗೂ ವ್ಯರ್ಥವಾಗುವುದಿಲ್ಲ. eನವು ವಿನಯದೊಂದಿಗೆ ಸೇರಿದಾಗ ಮಾತ್ರ ಅದು ಜನಹಿತಕ್ಕೆ ಬಳಕೆಯಾಗುತ್ತದೆ. ಬಡವರು, ದುರ್ಬಲರು ಮತ್ತು ಅಗತ್ಯವಿರುವವರ ಸೇವೆಯೇ ನಿಜವಾದ ದೇವಸೇವೆ.
ಅವರ ಜೀವನವು ಅದ್ಭುತಗಳ ಕಥೆಯಷ್ಟೇ ಅಲ್ಲ. ಅದು ಪ್ರೀತಿ, ದಯೆ, ಸತ್ಯ ಮತ್ತು ತ್ಯಾಗದ ಮೂಲಕ ಲೋಕವನ್ನು ಬದಲಾಯಿಸಬಹುದೆಂಬ ಪ್ರೇರಣಾದಾಯಕ ಸಾಕ್ಷಿಯಾಗಿದೆ.
ಸಂತ ಅಂತೊನಿಯವರನ್ನು ಸ್ಮರಿಸುವುದೆಂದರೆ ಕೇವಲ ಕಳೆದುಹೋದ ವಸ್ತುಗಳನ್ನು ಹುಡುಕುವ ಪ್ರಾರ್ಥನೆ ಮಾಡುವುದು ಮಾತ್ರವಲ್ಲ. ನಮ್ಮೊಳಗಿನ ಕಳೆದುಹೋದ ಸತ್ಪ್ರವೃತ್ತಿಗಳನ್ನು ದಯೆ, ಕ್ಷಮೆ, ವಿಶ್ವಾಸ, ಪ್ರಾಮಾಣಿಕತೆ ಮತ್ತು ಪರೋಪಕಾರದ ಮನೋಭಾವವನ್ನು ಮತ್ತೆ ಕಂಡುಕೊಳ್ಳುವ ಆತ್ಮಪರಿಶೀಲನೆಯ ಕ್ಷಣವೂ ಆಗಿದೆ. ಜೀವನದಲ್ಲಿ ಸಂಕಷ್ಟಗಳು ಬಂದಾಗ ನಿರಾಶೆಗೆ ಮಣಿಯದೆ, ಪ್ರಾರ್ಥನೆ ಮತ್ತು ಸತ್ಕಾರ್ಯಗಳ ಮೂಲಕ ದೇವರ ಕೃಪೆಯತ್ತ ಸಾಗುವಂತೆ ಸಂತ ಅಂತೊನಿಯವರ ಬದುಕು ನಮಗೆ ಆಹ್ವಾನ ನೀಡುತ್ತದೆ. ಅವರ ಜೀವನದ ಬೆಳಕು ಪ್ರತಿಯೊಬ್ಬರ ಹೃದಯದಲ್ಲೂ ನಂಬಿಕೆಯ ದೀಪವಾಗಿ ಹೊಳೆಯಲಿ. ಪ್ರೀತಿ, ಶಾಂತಿ ಮತ್ತು ಸೇವೆಯ ದಾರಿಯಲ್ಲಿ ಮುನ್ನಡೆಯುವ ಶಕ್ತಿ ದೊರಕಲಿ ಎಂಬುದೇ ಈ ಪವಿತ್ರ ದಿನದ ಸಂದೇಶವಾಗಿದೆ.

ರಾಕೇಶ್ ಡಿಸೋಜ – 9482482182

Leave a Reply

Your email address will not be published. Required fields are marked *