ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಸೇವೆಗಳಿಗೆ ಚಾಲನೆ…
ಶಿವಮೊಗ್ಗ: ನಗರದ ಪ್ರತಿಷ್ಠಿತ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್ನಲ್ಲಿ ನೂತನವಾಗಿ ಆರಂಭಿಸಲಾದ ಎಂಡೋಸ್ಕೋಪಿ ಮತ್ತು ಕೀಮೋಥೆರಪಿ ಡೇ-ಕೇರ್ ಸೇವೆಗಳಿಗೆ ಸಂಸದ ಬಿ ವೈ ರಾಘವೇಂದ್ರ ಅವರು ಇಂದು ಅಽಕೃತವಾಗಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿವೈಆರ್, ಪ್ರಸ್ತುತ ದಿನಗಳಲ್ಲಿ ದೇಶದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರಾಸರಿ ಪ್ರತಿ ಕುಟುಂಬದಲ್ಲೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಕೀಮೋಥೆರಪಿ ಚಿಕಿತ್ಸೆ ಪಡೆಯುವ ರೋಗಿಗಳು ನಿಯಮಿತವಾಗಿ ಆಸ್ಪತ್ರೆಗೆ ಭೇಟಿ ನೀಡಬೇಕಿರುವುದರಿಂದ, ನಗರದ ಮಧ್ಯಭಾಗದಲ್ಲಿಯೇ ಡೇ-ಕೇರ್ ಸೆಂಟರ್ ಆರಂಭಿಸಿರುವುದು ರೋಗಿಗಳಿಗೆ ತ್ವರಿತ ಹಾಗೂ ಸುಲಭ ಚಿಕಿತ್ಸೆ ಪಡೆಯಲು ಹೆಚ್ಚು ಅನುಕೂಲಕರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕ್ಯಾನ್ಸರ್ ರೋಗಿಗಳಿಗೆ ಕೇವಲ ವೈದ್ಯಕೀಯ ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಅವರಲ್ಲಿ ಮಾನಸಿಕ ಧೈರ್ಯ ಮತ್ತು ಜೀವನದ ಬಗ್ಗೆ ವಿಶ್ವಾಸ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕು ಎಂದರಲ್ಲದೇ, ಸಾರ್ವಜನಿಕರು ವೈದ್ಯರನ್ನು ದೇವರಂತೆ ಕಾಣುತ್ತಾರೆ. ಆ ಪವಿತ್ರ ನಂಬಿಕೆ ಮತ್ತು ಸ್ಥಾನಮಾನವನ್ನು ಉಳಿಸಿಕೊಂಡು ಹೋಗುವ ದೊಡ್ಡ ಜವಾಬ್ದಾರಿ ವೈದ್ಯಕೀಯ ತಂಡದ ಮೇಲಿದೆ ಎಂದರು.
ನಾರಾಯಣ ಹೆಲ್ತ್ ಸಂಸ್ಥಾಪಕ ಡಾ. ದೇವಿ ಶೆಟ್ಟಿ ಅವರ ಸೇವೆಯನ್ನು ಶ್ಲಾಘಿಸಿದ ಸಂಸದರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಇಡೀ ದೇಶಕ್ಕೆ ಮತ್ತು ಸರ್ಕಾರಕ್ಕೆ ಅವರು ನೀಡಿದ ಮಾರ್ಗದರ್ಶನವನ್ನು ಸ್ಮರಿಸಿದರು. ಇದೇ ವೇಳೆ, ಈ ಹೊಸ ಸೇವೆಗಳ ವಿಸ್ತರಣೆಗೆ ಕಾರಣರಾದ ಕರ್ನಾಟಕ ಕ್ಲಸ್ಟರ್ನ ನಿರ್ದೇಶಕ ಡಾ. ವಿಜಯ್ ಸಿಂಗ್ ಮತ್ತು ಫೆಸಿಲಿಟಿ ನಿರ್ದೇಶಕ ಡಾ. ಉತ್ತಮ ಶರ್ಮ ಅವರನ್ನು ಸಂಸದರು ಅಭಿನಂದಿಸಿದರು.
ಹಿಂದೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೂ ಚಿಕಿತ್ಸೆಗಾಗಿ ಬೆಂಗಳೂರು ಅಥವಾ ಮಣಿಪಾಲಕ್ಕೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಇಂದು ಗುಣಮಟ್ಟದ ಯುವ ವೈದ್ಯರ ದಕ್ಷತೆಯಿಂದಾಗಿ ಶಿವಮೊಗ್ಗವು ಇಡೀ ಮಧ್ಯ ಕರ್ನಾಟಕದ ಜನರನ್ನು ಆಕರ್ಷಿಸುವ ಪ್ರಮುಖ ಹೆಲ್ತ್ಕೇರ್ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ಅವರಿಗೆ ನೂತನ ಸೇವೆ ಸಮರ್ಪಣೆ: ಇಂದು ನೂತನವಾಗಿ ಉದ್ಘಾಟನೆಗೊಂಡ ಈ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸಂಸದರು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಮರ್ಪಿಸಿದರು. ಪ್ರಧಾನಿ ಮೋದಿಯವರ ‘ಸ್ವಸ್ಥ ಭಾರತ’ ಪರಿಕಲ್ಪನೆ ಹಾಗೂ ಪ್ರತಿಯೊಬ್ಬ ಜನಸಾಮಾನ್ಯನಿಗೂ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವೆಗಳು ದೊರೆಯಬೇಕು ಎಂಬ ಅವರ ಮಹತ್ವಾಕಾಂಕ್ಷೆಯ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ನೂತನ ಕೇಂದ್ರವು ಒಂದು ಮಹತ್ವದ ಹೆಜ್ಜೆಯಾಗಿದೆ. ದೇಶದ ಮೂಲೆಮೂಲೆಗೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳನ್ನು ತಲುಪಿಸುವ ಪ್ರಧಾನಿಯವರ ದೂರದೃಷ್ಟಿಯ ಗುರಿಗೆ ಪೂರಕವಾಗಿ ಈ ನೂತನ ಕೀಮೋಥೆರಪಿ ಮತ್ತು ಎಂಡೋಸ್ಕೋಪಿ ಡೇ-ಕೇರ್ ಕ್ಲಿನಿಕ್ ಜನಸೇವೆಗೆ ಮುಡಿಪಾಗಿರಲಿದೆ ಎಂದರು.
ಕರ್ನಾಟಕ ಕ್ಲಸ್ಟರ್ ಹಾಗೂ ಗ್ರೋಥ್ ಇನಿಷಿಯೇಟಿವ್ ನಿರ್ದೇಶಕರಾದ ಡಾ. ವಿಜಯ್ ಸಿಂಗ್ ಅವರು ಮಾತನಾಡಿ, ನಗರದಲ್ಲಿ ನಾರಾಯಣ ಹೆಲ್ತ್ ಸಂಸ್ಥೆಯು ಕಳೆದ ೧೩ ವರ್ಷಗಳಿಂದ ಯಶಸ್ವಿಯಾಗಿ ವೈದ್ಯಕೀಯ ಸೇವೆ ನೀಡುತ್ತಾ ಬಂದಿದ್ದು, ಪ್ರಸ್ತುತ ಈ ಭಾಗದ ಶೇ.೪೦ರಷ್ಟು ಆರೋಗ್ಯ ಅಗತ್ಯತೆಗಳನ್ನು ಸಂಸ್ಥೆಯು ಯಶಸ್ವಿಯಾಗಿ ಪೂರೈಸುತ್ತಿದೆ ಎಂದು ತಿಳಿಸಿದರು.
ನಾವು ೨೦೧೨ರಲ್ಲಿ ಶಿವಮೊಗ್ಗಕ್ಕೆ ಬಂದು ನೆಲೆಸಲು ಮತ್ತು ಇಲ್ಲಿ ವೈದ್ಯಕೀಯ ಸೇವೆ ಆರಂಭಿಸಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ಬಿ. ವೈ. ರಾಘವೇಂದ್ರ ಅವರ ದೂರದೃಷ್ಟಿ, ಅಪಾರ ನಂಬಿಕೆ ಮತ್ತು ಆಶಯವೇ ಪ್ರಮುಖ ಕಾರಣ. ಅವರ ಇಚ್ಛೆಯ ಫಲವಾಗಿ ನಾರಾಯಣ ಹೃದಯಾಲಯಕ್ಕೆ ಇಲ್ಲಿ ಸೇವೆ ಸಲ್ಲಿಸಲು ಉತ್ತಮ ಅವಕಾಶ ಸಿಕ್ಕಿತು ಎಂದರು.

ಪ್ರಸ್ತುತ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮುಲ್ಟಿಸ್ಪೆಷಲಿಟಿ ಆಸ್ಪತ್ರೆ ೧೦೦ಕ್ಕೂ ಹೆಚ್ಚು ನುರಿತ ವೈದ್ಯರ ಬೃಹತ್ ತಂಡ ರೋಗಿಗಳ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದೆ. ವರ್ಷಕ್ಕೆ ಸರಾಸರಿ ೫,೦೦೦ ಕ್ಕೂ ಹೆಚ್ಚು ಕೀಮೋಥೆರಪಿ ಇನ್ಯೂಷನ್ ಹಾಗೂ ೫,೦೦೦ ಕ್ಕೂ ಅಽಕ ಎಂಡೋಸ್ಕೋಪಿ ಪ್ರೊಸೀಜರ್ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ ಎಂದರು.
ಮಾತನಾಡಿದ ಮೆಡಿಕಲ್ ಅಂಕಾಲಜಿಸ್ಟ್ ಡಾ. ಅಪರ್ಣ ಶ್ರೀವತ್ಸ ಅವರು ಮಾತನಾಡಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಈಗ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಹೊಸ ಹೊಸ ತಂತ್ರeನಗಳು ನವೀನ ಆವಿಷ್ಕಾರಗಳು ತುಂಬಾ ಪರಿಣಾಮಕಾರಿಯಾದ ಔಷಽಗಳು ಲಭ್ಯವಿರುವುದರಿಂದ ಕ್ಯಾನ್ಸರ್ ರೋಗಿಗಳು ಗುಣಮುಖವಾಗುವ ಸಾಧ್ಯತೆಗಳು ಅತಿ ಹೆಚ್ಚು ಆಗಿವೆ ಎಂದರಲ್ಲದೇ, ಇದೀಗ ಕಿಮೋ ತೆರಪಿ ಜೊತೆ ಜೊತೆಗೆ ಇಮಿನೋಥೆರಪಿ ಹಾಗು ಟಾರ್ಗೆಟ್ ಥೇರಪಿ ಲಭ್ಯವಿದೆ ಎಂದರು.

ಸಮಾರಂಭದಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮ, ಮೆಡಿಕಲ್ ಸೂಪರ್ಡೆಂಟ್ ಡಾ. ಚಕ್ರವರ್ತಿ ಸೊಂಡೂರು, ಪ್ರಮುಖರಾದ ಡಾ| ಗೋಪಾಲ್, ಡಾ| ವಿವೇಕ್, ಡಾ| ಪೂಜಾ, ಡಾ| ಶ್ರೀವತ್ಸ, ಡಾ| ರವಿ, ಡಾ| ಶಿವಕುಮಾರ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶೈಲೇಶ್ ಎಸ್. ಎನ್. ಸೇರಿದಂತೆ ಪ್ರಮುಖ ವೈದ್ಯರ ತಂಡ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

