ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಎಸ್ಸೆಸ್ಸೆಲ್ಸಿಯಿಂದ ಪದವಿವರೆಗೆ ಡಿವಿಎಸ್ ಪ್ರತಿಭೆಗಳ ರಾಜ್ಯಮಟ್ಟದ ಸಾಧನೆ…

Share Below Link

ಶಿವಮೊಗ್ಗ: ಶಿವಮೊಗ್ಗದ ಪ್ರತಿಷ್ಠಿತ ಡಿವಿಎಸ್ ಶಿಕ್ಷಣ ಸಂಸ್ಥೆ ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಸಾಬೀತು ಪಡಿಸಿದ್ದು, ೨೦೨೫-೨೬ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ರಾಜ್ಯ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿ ಸಂಸ್ಥೆಗೆ ಕೀರ್ತಿ ತಂದಿzರೆ.
ಸಂಸ್ಥೆಯ ವಿವಿಧ ವಿಭಾಗಗಳಲ್ಲಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಕೆ. ಬಸಪ್ಪಗೌಡ, ೮೩ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಡಿವಿಎಸ್ ಸಂಸ್ಥೆ ನಿರಂತರ ಉತ್ತಮ ಫಲಿತಾಂಶಗಳ ಮೂಲಕ ರಾಜ್ಯದಾದ್ಯಂತ ಖ್ಯಾತಿ ಗಳಿಸಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವುದು ನಮ್ಮ ಹೆಮ್ಮೆ ಎಂದರು.
ಸಂಸ್ಥೆಯ ವಿವಿಧ ಅಂಗಸಂಸ್ಥೆಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದ ಹೆಗ್ಗಳಿಕೆ ಡಿವಿಎಸ್‌ಗೆ ಸಲ್ಲುತ್ತದೆ ಎಂದು ಹೇಳಿದರು.


ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಮಟ್ಟದ ಸಾಧನೆ: ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ವಿಭಾಗದ ವಿದ್ಯಾರ್ಥಿನಿ ಶಾಂಭವಿ ಕೆ.ಪಿ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೧ ಅಂಕ ಪಡೆದು ರಾಜ್ಯ ಮಟ್ಟದಲ್ಲಿ ೫ನೇ ರ್‍ಯಾಂಕ್ ಗಳಿಸಿzಳೆ. ಮತ್ತೊಬ್ಬ ವಿದ್ಯಾರ್ಥಿನಿ ಲಕ್ಷ್ಮೀ ಪಿ.ಎ. ೬೦೨ ಅಂಕಗಳೊಂದಿಗೆ ಗಮನಾರ್ಹ ಸಾಧನೆ ಮಾಡಿzರೆ. ಶಾಲೆಯು ಒಟ್ಟಾರೆ ಶೇ.೯೫.೪೫ ಫಲಿತಾಂಶ ದಾಖಲಿಸಿದೆ.
ವಿನೋಬನಗರದ ಡಿವಿಎಸ್ ಪ್ರೌಢಶಾಲೆ ಶೇ.೧೦೦ ಫಲಿತಾಂಶ ಸಾಧಿಸಿ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ದ್ವಿತೀಯ ಪಿಯುಸಿಯಲ್ಲಿ ೮ರ್‍ಯಾಂಕ್: ಡಿವಿಎಸ್ ಪದವಿಪೂರ್ವ ಸ್ವತಂತ್ರ ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶ ದಲ್ಲಿ ಜಿಯ ಹೊಸ ದಾಖಲೆ ನಿರ್ಮಿಸಿದ್ದು, ವಾಣಿಜ್ಯ ವಿಭಾಗದಲ್ಲಿ ೫, ವಿeನ ವಿಭಾಗದಲ್ಲಿ ೧ ಹಾಗೂ ಕಲಾ ವಿಭಾಗದಲ್ಲಿ ೨ ರ್‍ಯಾಂಕ್‌ಗಳನ್ನು ಪಡೆದು ಒಟ್ಟು ೮ ರ್‍ಯಾಂಕ್ ಗಳಿಸಿದ್ದು, ಈ ಸಾಧನೆ ಮಾಡಿದ ಜಿಯ ಏಕೈಕ ಪದವಿ ಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದೇ ವೇಳೆ ಡಿವಿಎಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿeನ ವಿಭಾಗ ಶೇ.೧೦೦ ಫಲಿತಾಂಶ ದಾಖಲಿಸಿ ಮತ್ತೊಂದು ಮೈಲಿಗಲ್ಲು ನಿರ್ಮಿಸಿದೆ.


ಪದವಿ ವಿಭಾಗಕ್ಕೂ ಕುವೆಂಪು ವಿವಿಯಲ್ಲಿ ಕೀರ್ತಿ ಹೆಚ್ಚಿದ ಪ್ರತಿಭೆಗಳು: ಸಮಿತಿಯ ಕಾರ್ಯದರ್ಶಿ ಎಸ್.ಪಿ. ದಿನೇಶ್ ಅವರು ಮಾತನಾಡಿ, ೨೦೨೪-೨೫ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಕುವೆಂಪು ವಿಶ್ವವಿದ್ಯಾಲಯ ಮಟ್ಟದಲ್ಲಿಯೂ ಸಾಧನೆ ಮೆರೆದಿರುವುದಾಗಿ ತಿಳಿಸಿದರು.
ಬಿಎ ವಿಭಾಗದಲ್ಲಿ ಪೂಜ ಎಸ್.ಜಿ. ದ್ವಿತೀಯ ರ್‍ಯಾಂಕ್, ಬಿಎಸ್ಸಿಯಲ್ಲಿ ಗುಣಶ್ರೀ ಹೆಚ್.ಎಂ ೫ನೇ ರ್‍ಯಾಂಕ್, ಯಶಸ್ವಿನಿ ಜಿ. ೭ನೇ ಹಾಗೂ ಬಿಂದುಶ್ರೀ ಆರ್. ೮ನೇ ರ್‍ಯಾಂಕ್ ಪಡೆದಿzರೆ. ಬಿಸಿಎ ವಿಭಾಗದಲ್ಲಿ ಸಂಜನಾ ಆರ್. ೫ನೇ ಮತ್ತು ಪುನೀತ್ ಡಿ.ಯು. ೯ನೇ ರ್‍ಯಾಂಕ್ ಪಡೆದಿದ್ದು, ಒಟ್ಟು ೬ ರ್‍ಯಾಂಕ್ ಹಾಗೂ ೩ ಚಿನ್ನದ ಪದಕಗಳನ್ನು ಕಾಲೇಜು ತನ್ನದಾಗಿಸಿಕೊಂಡಿದೆ ಎಂದರು.
ಪ್ರತಿ ವರ್ಷವೂ ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತರುತ್ತಿರುವುದು ಶಿಕ್ಷಕರ ಸಮರ್ಪಿತ ಸೇವೆ ಹಾಗೂ ವಿದ್ಯಾರ್ಥಿಗಳ ಪರಿಶ್ರಮದ ಫಲ ಎಂದು ಶ್ಲಾಘಿಸಿದರು.
ಡಾ. ಸತೀಶ್ ಕುಮಾರ್ ಶೆಟ್ಟಿ, ನಿತಿನ್, ಡಾ. ಎಂ. ವೆಂಕಟೇಶ್, ಜಿ. ಮಧು ಸೂದನ್, ಸಿ.ಕೆ. ಶ್ರೀಧರ್, ಡಾ. ಸವಿತಾ ಎನ್. ರಾವ್, ಉಮೇಶ್ ಇನ್ನಿತರರಿದ್ದರು.

Leave a Reply

Your email address will not be published. Required fields are marked *