ಸೋಶಿಯಲ್ ಮೀಡಿಯಾ ಯುಗದಲ್ಲಿ ಸಂಪರ್ಕ ಹೆಚ್ಚಿದರೂ ಪ್ರೀತಿಸುವ ಹೃದಯಗಳು ದೂರವಾಗುತ್ತಿವೆಯೇ…?!
ಇಂದಿನ Gen Z, Gen Alpha ಯುಗದಲ್ಲಿ ಪ್ರೀತಿ ಎಂದರೆ ಕೇವಲ ಹೃದಯದ ಸಂಬಂಧವಲ್ಲ, ಅದು Digital ಸಂಪರ್ಕಗಳ ಜಾಲದಲ್ಲಿ ಸಿಲುಕಿಕೊಂಡಿರುವ ಒಂದು ಭಾವನೆ . ಒಂದೆಡೆ ನಾವು ದಿನಪೂರ್ತಿ ಸಂಪರ್ಕದಲ್ಲಿರುತ್ತೇವೆ.whatsApp messages, instagram story, facebook post… ಎಲ್ಲವೂ ನಮ್ಮ ಪ್ರೀತಿಯನ್ನು ಜೀವಂತವಾಗಿಟ್ಟುಕೊಳ್ಳುತ್ತಿರುವಂತೆ ಕಾಣುತ್ತದೆ.
but,, ನಿಜವಾಗಿಯೂ ಪ್ರೀತಿಸುವ ಹೃದಯಗಳು ಹತ್ತಿರವಾಗುತ್ತಿವೆಯೇ? ಅಥವಾ ಕೇವಲ ಫೋನ್ಗಳಷ್ಟೇ ಸೀಮಿತವಾಗುತ್ತಿವೆಯೇ?!
ಮೊದಲ ಬಾರಿ ಅವಳು ಅವನನ್ನು ನೋಡಿದ್ದು ಕಾಲೇಜಿನ ಆ ಹಸಿರು ಮೈದಾನದಲ್ಲಿ… ಆಕಾಶದ ನೀಲಿ ನೆರಳಲ್ಲಿ…, ಗಾಳಿಯ ಹನಿಗಳ ನಡುವೆ..,
ಹದಿಹರೆಯದ ಪ್ರೀತಿ, ಅದು ಒಂದು ಚಿಕ್ಕ ನೋಟದಿಂದ ಶುಭಾರಂಭವಾಗುವ ಒಂದು ಕನಸು. ಒಂದು cute smile…, ಒಂದು ಕಣ್ಣಂಚಿನ ಮಾತು. ಹೃದಯದಲ್ಲಿ ಮನವಾಗಿ ಮೂಡುವ ಮಧುರ ರಾಗ. ಅದೇ ಅವಳ ಹೃದಯದಲ್ಲಿ ಮೃದುವಾದ ಪ್ರೇಮ ರಾಗವನ್ನು ಮೂಡಿಸಿತು.
ಆದರೆ, ಆ ನೋಟವೇ ಪ್ರೀತಿಯಾಗಿ ಬೆಳೆದು ಹೃದಯಕ್ಕೆ ಹತ್ತಿರವಾಗುವ ಮುನ್ನ, ಅದು mobile screenನೊಳಗೆ ನೆಲೆ ಕಂಡುಕೊಂಡಿತು. ಇಂದಿನ ಪ್ರೀತಿ ಕೇವಲ ಕಣ್ಣುಗಳಲ್ಲಿ ಮಾತ್ರ ಹುಟ್ಟುವುದಿಲ್ಲ, ಅದು mobile screenನಲ್ಲೂ ಚಿಗುರೊಡೆಯುತ್ತದೆ.
Hi… ಅನ್ನೋ ಒಂದು ಮೆಸೇಜ್ ಬಂದಾಗ, ಹೃದಯದ ಬಡಿತ ಏಕಾಏಕಿ ವೇಗವಾಗುತ್ತದೆ. typing… ಅನ್ನೋ ಮೂರು ಅಕ್ಷರಗಳು ಕಾಣಿಸಿದಾಗ, ಮನಸ್ಸು ಸಾವಿರ ಕನಸುಗಳತ್ತ ಓಡುತ್ತದೆ. Seenನಲ್ಲಿ reply… ಬರದೇ ಇzಗ, ಹೃದಯವೇ ನಿಶ್ಶಬ್ದವಾಗುತ್ತದೆ.
fraction of secondನಲ್ಲಿ ನಾನು ಏನಾದ್ರೂ ತಪ್ಪು ಹೇಳ್ದೇನಾ ಅನ್ನೋ ಪ್ರಶ್ನೆ ಮನದೊಳಗೆ ಮಳೆ ಹನಿಗಳಂತೆ ಬೀಳುತ್ತದೆ. ಹದಿಹರೆಯದ ಪ್ರೀತಿ ಅಷ್ಟು ನಾಜೂಕು. ಅಬ್ಬಾ… ಮನಸ್ಸಿನಲ್ಲಿ ಅದೆಷ್ಟು ಪ್ರಶ್ನೆಗಳು ಹುಟ್ಟುತ್ತವೆ? ಯಾರ ಜೊತೆ ಮಾತನಾಡ್ತಿದ್ದಾನೋ?, ನನ್ನನ್ನು ಕಡೆಗಣಿಸಿದ್ನಾ? ಇಂತಹ ಅನುಮಾನಗಳು ಪ್ರೀತಿಯನ್ನೇ ನಿಧಾನವಾಗಿ ಕಿತ್ತುಕೊಳ್ಳುತ್ತವೆ. ಹಿಂದೆ ಪ್ರೀತಿಯಲ್ಲಿ ಕಾಯುವಿಕೆ ಇತ್ತು, ಸಹನೆ ಇತ್ತು, ಆದರೆ ಈಗ ಕ್ಷಣ ಕ್ಷಣಕ್ಕೂ ಉತ್ತರ ಬೇಕು ಎಂಬ ಆತುರ ಹೆಚ್ಚಾಗಿದೆ!
ಇಂದಿನ ಪ್ರೀತಿಯಲ್ಲಿlike ಮತ್ತು commentಗಳು ಪ್ರೀತಿಯ ಮಾಪಕಗಳಾಗಿಬಿಟ್ಟಿವೆ. ನನ್ನphotoಗೆ ಅವನುlike ಹಾಕ್ಲಿಲ್ಲ…, ಅವಳು ನನ್ನ statusಗೆreply ಮಾಡ್ಲಿಲ್ಲ…. ಇವುಗಳು ಸಂಬಂಧದ ಮಲ್ಯವನ್ನು ನಿರ್ಧರಿಸುವ ಮಟ್ಟಕ್ಕೆ ಬಂದಿವೆ. ಆದರೆ ನಿಜವಾದ ಪ್ರೀತಿ ಎಂದರೆ ಈ ಎಲ್ಲ digital ಗುರುತುಗಳಿಗಿಂತ ಹೆಚ್ಚಿನದು ಅಲ್ಲವೇ…?
ಇನ್ನು ಮತ್ತೊಂದು ವಿಚಾರ online intimacy.. ದಿನಪೂರ್ತಿ chatt ಮಾಡುತ್ತಾ, ಹೃದಯದ ಮಾತುಗಳನ್ನು ಹಂಚಿಕೊಳ್ಳುತ್ತಾ ಇದ್ದರೂ, ಎದುರುface to face ಕುಳಿತು ಮಾತನಾಡುವ ಸಮಯ ಕಡಿಮೆಯಾಗುತ್ತಿದೆ. ಹೃದಯದ ಸ್ಪರ್ಶಕ್ಕಿಂತ mobile screen ಸ್ಪರ್ಶವೇ ಹೆಚ್ಚಾಗುತ್ತಿದೆ.
ಈ ರೀತಿಯಲ್ಲಿ ಸಂಬಂಧಗಳು ಗಾಢವಾಗುತ್ತಿವೆಯೇ ಅಥವಾ ಕೇವಲ ತೋರಿಕೆಗೆ ಮಾತ್ರ ಉಳಿಯುತ್ತಿವೆಯೇ? ಪ್ರೈವಸಿ ಮತ್ತು ಟ್ರಸ್ಟ್ ನಡುವಿನ ಹೋರಾಟವೂ ಹೆಚ್ಚಾಗಿದೆ. ನಾನು ಫೋನ್ ನೋಡ್ಬೇಕು, password ಹೇಳು… ಇವುಗಳು ಪ್ರೀತಿಯ ಹೆಸರಿನಲ್ಲಿ ಕೇಳಲಾಗುತ್ತಿವೆ. ಆದರೆ ನಿಜವಾದ ಪ್ರೀತಿ ಎಂದರೆ ನಂಬಿಕೆಯೇ ಹೊರತು ಅನುಮಾನವಲ್ಲ…!
ಒಂದು Good Morning… ಮಿಸ್ ಆದರೂ ದಿನ ದೂಡುವುದೇ ಕಷ್ಟವಾಗುತ್ತದೆ. ಒಂದು Take Care ಹೇಳಿದರೆ, ಹೃದಯವೇ ಹೂವಿನಂತೆ ಅರಳುತ್ತದೆ.
ಆದರೆ…
ಈ ಡಿಜಿಟಲ್ ಪ್ರೀತಿಯಲ್ಲಿ ಒಂದು ಅeತ ಖಾಲಿತನ ಇರುವುದು ಮಾತ್ರ ಸತ್ಯ. ಒಮ್ಮೆ ಎದುರು ಎದುರಿಗೆ ಕುಳಿತು ಮಾತನಾಡಿದಾಗ, screen ಹಿಂದೆ ಹರಿದ ಮಾತುಗಳು ಎ ಕಳೆದು ಹೋಗುತ್ತವೆ. ನಿಜವಾದ ಕಣ್ಣುಗಳ ಸಂಪರ್ಕದಲ್ಲಿ chattನ emogiಗಳು ಅರ್ಥ ಕಳೆದುಕೊಳ್ಳುತ್ತವೆ.
ಒಬ್ಬಳು ಹುಡುಗಿ ಪ್ರತಿದಿನ ಅವನ ಮೆಸೇಜ್ಗಾಗಿ ಕಾಯುತ್ತಿದ್ದಳು. ರಾತ್ರಿGood Night ಹೇಳುವ ಮುನ್ನ ಅವನ Typing… ನೋಡಿದರೆ ಅವಳಿಗೆ ಅದು ಪ್ರೀತಿಯ ಪದ್ಯದಂತೆ ತೋರುತ್ತಿತ್ತು.
ಒಂದು ದಿನ..
ಅವನು ಮೆಸೇಜ್ ಮಾಡಲಿಲ್ಲ. ಆ ರಾತ್ರಿ ಅವಳಿಗೆ ನಿದ್ರೆಯೇ ಬಂದಿಲ್ಲ, ಮೊಬೈಲ್ screen ಕತ್ತಲಾಗಿ ಇದ್ದರೂ, ಅವಳ ಹೃದಯದಲ್ಲಿ ಪ್ರಶ್ನೆಗಳ ಬೆಳಕು ಮಿಂಚುತ್ತಿತ್ತು.
ಇದು ಕೇವಲ ಅವಳ ಕಥೆಯಲ್ಲ. ಇದು ಇಂದಿನ ಹದಿಹರೆಯದ ಪ್ರೀತಿಯ ಪ್ರತಿಬಿಂಬ. ಪ್ರೀತಿ ಈಗ Onlineನಲ್ಲಿ ಆರಂಭವಾಗುತ್ತದೆ, ಆದರೆ ಅದು Offlineನಲ್ಲಿ ಮಾತ್ರ ಉಸಿರಾಡುತ್ತದೆ. ಹೃದಯದ ಮಾತುಗಳುscreen ಒಳಗೆ ಸಿಕ್ಕಿಹಾಕಿಕೊಂಡಾಗ ಭಾವನೆಗಳು ನಿಧಾನವಾಗಿ ಮನವಾಗುತ್ತವೆ.
ಹೃದಯದಿಂದ ಹೃದಯಕ್ಕೆ ಸಾಗುವ ಭಾವನೆಗೆ internet ಬೇಕಾಗಿಲ್ಲ; ಅದಕ್ಕೆ ಬೇಕಾಗಿರುವುದು ಸಮಯ, ನಂಬಿಕೆ ಮತ್ತು ನಿಷ್ಕಲ್ಮಷ ಹೃದಯದ ಸಂಪರ್ಕ. ಪ್ರೀತಿ ಎಂದರೆ ಕೇವಲTyping… ಅಲ್ಲ, ಅದು ಹೃದಯದಿಂದ ಹೃದಯಕ್ಕೆ ಹರಿಯುವ ಒಂದು ಜೀವಂತ ಸ್ಪಂದನೆ.
