ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಪರಿಸರ ಮಾರಕ ಯೋಜನೆ ಜಾರಿಗೆ ಅನುಮತಿ ನೀಡಬೇಡಿ: ಈಶ್ವರಪ್ಪ ಆಗ್ರಹ

Share Below Link

ಶಿವಮೊಗ್ಗ: ಪಶ್ಚಿಮ ಘಟ್ಟದ ಅತೀಸೂಕ್ಷ್ಮ ಪ್ರದೇಶ ವಾದ ಶರಾವತಿ ಕಣಿವೆಯಲ್ಲಿ ಯಾವುದೇ ಪರಿಸರ ಮಾರಕ ಯೋಜನೆಗಳನ್ನು ಜಾರಿಗೊಳಿಸಲು ಅನುಮತಿ ನೀಡಬಾರದು ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದರು.
ಅವರು ಇಂದು ರಾಷ್ಟ್ರಭಕ್ತರ ಬಳಗ, ಪರಿಸರಕ್ಕಾಗಿ ನಾವು ಸೇರಿ ದಂತೆ ವಿವಿಧ ಪರಿಸರ ಹೋರಾಟ ಸಂಘಟನೆಗಳ ಸಹಯೋಗ ದೊಂದಿಗೆ ಪ್ರಸ್ತಾವಿತ ಸುಮಾರು ೧೦,೫೦೦ ಕೋಟಿ ರೂ. ವೆಚ್ಚದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಆಯೋಜಿ ಸಿದ್ದ ಬೃಹತ್ ಸೈಕಲ್, ಬೈಕ್, ಕಾರುಗಳ ಪ್ರತಿಭಟನಾ ರ್‍ಯಾಲಿ ಯನ್ನುದ್ದೇಶಿಸಿ ಮಾತನಾಡುತ್ತಿ ದ್ದರು.


ಒಂದು ಜನವಿರೋಽ ಯೋಜನೆಯ ವಿರುದ್ಧ ಇಷ್ಟೊಂದು ದೊಡ್ಡ ಪ್ರಮಾಣ ದಲ್ಲಿ ಪ್ರತಿಭಟನಾ ರ್‍ಯಾಲಿ ಆಗಿದ್ದು ಇಂದೇ ಎಂದ ಅವರು, ನಾಗರೀಕರಿಗೆ ಯಾವುದೇ ತೊಂದರೆ ಆಗದ ಹಾಗೆ ಈ ರ್‍ಯಾಲಿ ನಡೆದಿದೆ. ರಾಜ್ಯ ಸರ್ಕಾರ ಈ ಮಾರಕ ಯೋಜನೆಗೆ ಶತಾಯ- ಗತಾಯ ಮುಂದಾಗಿದೆ. ಈ ಯೋಜನೆಯಿಂದ ಅಪಾರ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಯಾಗಲಿದೆ. ಈ ಭಾಗದ ಜನ- ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಜೀವನವೇ ದುಸ್ತರವಾಗಲಿದೆ. ಯಾವುದೇ ಕಾರಣಕ್ಕೂ ಈ ಯೋಜನೆ ಜಾರಿಯಾಗ ಕೂಡದು ಒಂದು ವೇಳೆ ಈ ಯೋಜನೆ ಜಾರಿಯಾದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಇಂಧನ ಸಚಿವರಿಗೆ ಮುತ್ತಿಗೆಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗು ವುದು. ಮುಂದಿನ ಉಗ್ರ ಹೋರಾ ಟದ ರೂಪು-ರೇಷೆ ಚರ್ಚಿಸಲು ಏ.೨೨ರಂದು ಪರಿಸರಾಸಕ್ತರ ಸಭೆಯನ್ನು ಆಯೋಜಿಸಲಾಗಿದೆ ಎಂದರು.


ಪ್ರತಿಭಟನಾ ರ್‍ಯಾಲಿಯನ್ನು ಉದ್ಘಾಟಿಸಿದ ಖ್ಯಾತ ನರರೋಗ ತಜ್ಞ ಡಾ.ಶಿವರಾಮಕೃಷ್ಣ ಮಾತ ನಾಡಿ, ಪರಿಸರ ಮಾರಕ ಯೋಜನೆ ಗೆ ರಾಜ್ಯ ಸರ್ಕಾರ ಕೈ ಹಾಕಿರುವುದು ತಪ್ಪು. ಪ್ರಕೃತಿ ನಮಗೆ ಗಾಳಿ, ಮಳೆ, ಬೆಳಕನ್ನು ನೀಡಿದೆ. ವೈದ್ಯರಾದ ನಾವು ಕಾಯಿಲೆ ಬರುವುದರೊಳಗೆ ಅವುಗಳನ್ನು ತಡೆಗಟ್ಟಿ ಎಂದು ರೋಗಿಗಳಿಗೆ ಸಲಹೆ ನೀಡುತ್ತೇವೆ. ಇದಕ್ಕೆ ಪೂರಕವಾಗಿ ಪ್ರಕೃತಿ ಇರಬೇಕಾಗಿದೆ. ಅದನ್ನು ನಾವು ಸಂರಕ್ಷಿಸಬೇಕಾಗಿದೆ. ಈ ಯೋಜನೆ ಕೈಬಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳುವಂತೆ ಸಲಹೆ ನೀಡಿದರಲ್ಲದೇ, ಪರಿಸರ ಮೇಲಿನ ದಾಳಿಯನ್ನು ತಡೆಯಲು ಎಲ್ಲರೂ ಸಂಘಟಿತರಾಗಬೇಕು ಎಂದರು.
ಪರಿಸರ ಹೋರಾಟಗಾರ ಪ್ರೊ| ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಮಳೆಗಾಲ ಬರಲು ಇನ್ನೂ ಮೂರು ತಿಂಗಳು ಇದೆ. ಇಂತಹ ಸಂದರ್ಭದಲ್ಲಿಯೇ ಈಗಾಗಲೇ ನಾವು ೩೮-೪೦ ಡಿಗ್ರಿ ಉಷ್ಣತಾ ಮಾನವನ್ನು ಅನುಭವಿಸು ತ್ತಿದ್ದೇವೆ. ಭೀಕರ ಬಿಸಿಲು ಹೆಚ್ಚಾಗು ತ್ತಿದೆ. ಮಳೆ ಕಡಿಮೆಯಾಗುತ್ತಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ೧೬,೦೦೦ ಮರಗಳನ್ನು ಕಡಿಯಲಾಗುತ್ತಿದ್ದು ಇದು ಮುನುಷ್ಯರು ಸಹಿಸಿಕೊಳ್ಳಲು ಸಾಧ್ಯವಾಗದ ಸಂಗತಿಯಾಗಿದೆ. ಬುಧವಾರ ಪ್ರಧಾನಿ ಮೋದಿ ಯವರು ಆದಿಚುಂಚನಗಿರಿ ಮಠದ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರಾಜ್ಯದ ೧೮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ನೀಡಿzರೆ. ಆ ಮನವಿಯಲ್ಲಿ ಈ ಪರಿಸರ ಮಾರಕ ಯೋಜನೆಯ ಅಂಶವೂ ಇದೆ. ಕೇಂದ್ರ ಪರಿಸರ ಇಲಾಖೆಯ, ಕೇಂದ್ರ ಹವಾಮಾನ ಇಲಾಖೆ ತಜ್ಞರು ಈ ಯೋಜನೆ ಯನ್ನು ವಿರೋಧಿಸಿzರೆ. ತುಂಗಾ-ಭದ್ರಾ, ಶರಾವತಿ ನದಿಗಳು ತುಂಬಿ ಹರಿಯಲು ಅರಣ್ಯ ಮುಖ್ಯವಾಗಿದೆ ಎಂಬುದನ್ನು ಮುಖ್ಯಮಂತ್ರಿ ತಿಳಿದುಕೊಳ್ಳದೆ ಈ ಮನೆಹಾಳು ಯೋಜನೆಗೆ ಅನುಮತಿ ನೀಡಿ ಎಂ ದಿದ್ದು ಪರಿಸರ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ ಎಂದರು.


ಯುವ ಮುಖಂಡ ಕೆ.ಈ.ಕಾಂತೇಶ್ ಮಾತನಾಡಿ, ಸಚಿವ ಜಾರ್ಜ್ ಅವರೇ ಶಿವಮೊಗ್ಗ ಜನರಾದ ನಾವು ಯಾರೂ ಬಳೆತೊಟ್ಟಿಲ್ಲ. ನೀವು ಹೇರುವ ಯಾವುದೇ ಯೋಜನೆಯನ್ನು ನಾವು ಒಪ್ಪುವುದಿಲ್ಲ. ನೀವು ಯೋಜನೆ ಜಾರಿಗೊಳಿಸಿದರೆ ಶಿವಮೊಗ್ಗ ಪ್ರವೇಶಕ್ಕೆ ನಿಮಗೆ ಪ್ರವೇಶ ನೀಡುವುದಿಲ್ಲ. ಯಾವುದೇ ಕಾರಣಕ್ಕೂ ಯೋಜನೆಯನ್ನು ಜಾರಿಮಾಡಲು ಅವಕಾಶ ಕೊಡಬೇಡಿ ಎಂದು ಗುಡುಗಿದರು.
ಇದಕ್ಕೂ ಮುನ್ನ ಅಲ್ಲಮಪ್ರಭು ಮೈದಾನದಿಂದ ಪ್ರತಿಭಟನಾ ರ್‍ಯಾಲಿ ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ ಮಹಾವೀರ ವೃತ್ತದಲ್ಲಿ ಕೊನೆಗೊಂಡಿತು.
ಪ್ರಮುಖರಾದ ಡಾ.ಪಿ.ನಾರಾ ಯಣ, ಡಾ. ಶ್ರೀಪತಿ ಎಲ್.ಕೆ., ಡಾ.ಶೇಖರ್ ಗೌಳೇರ್, ಮಹಾ ಲಿಂಗಯ್ಯ ಶಾಸ್ತ್ರೀ, ಮೋಹನ್ ಜಾಧವ್, ಜನಾರ್ಧನ್ ಪೈ, ವಿಶ್ವೇಶ್ವರಯ್ಯ, ರಾಮಾಚಾರ್, ರಮೇಶ್ ಜಾದವ್, ಸುವರ್ಣಾ ಶಂಕರ್, ಸೀತಾಲಕ್ಷ್ಮೀ, ಪ್ರಕಾಶ್ ಮೊದಲಾದವರಿದ್ದರು.