ಶಾಸಕ ಐವನ್ ಡಿಸೋಜಾಗೆ ಪ್ರತಿಷ್ಠಿತ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್….
ಬೆಂಗಳೂರು : ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜಾ ಅವರಿಗೆ ಪ್ರತಿಷ್ಠಿತ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಲಾಗುತ್ತದೆ. ನ.೪ರಂದು ಪ್ಯಾರಿಸ್‌ನಲ್ಲಿ ನಡೆಯುವ ಅದ್ಧೂರಿ ಸಮಾರಂಭದಲ್ಲಿ ಐವನ್ ಡಿಸೋಜಾ ಅವರು ಈ ಪ್ರಶಸ್ತಿ ಸ್ವೀಕರಿಸಲಿದ್ದು, ಭಾರತ ಮತ್ತು ಫ್ರಾನ್ಸ್‌ನ ಹಲವಾರು ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿzರೆ.
ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಐವನ್ ಡಿಸೋಜ ಅವರು ಕರಾವಳಿ ಕರ್ನಾಟಕದ ಪ್ರಬುದ್ಧ ರಾಜಕಾರಣಿಗಳಲ್ಲಿ ಒಬ್ಬರು. ಆರಂಭದಲ್ಲಿ ಅವರು ಜನತಾಪಕ್ಷ, ಜನತಾದಳದಲ್ಲಿ ಗುರುತಿಸಿ ಕೊಂಡಿದ್ದು, ಬಳಿಕ ಕಾಂಗ್ರೆಸ್ ಸೇರಿ ಸಮಾಜಸೇವೆ ಮುಂದುವರಿಸಿರುವ ಐವನ್ ಡಿಸೋಜ್ ಅವರು, ಈಗ ಹಾಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆಸಲ್ಲಿಸುತ್ತಿದ್ದಾರೆ.

ಮಂಗಳೂರು ಮೂಲದ ಐವನ್ ಡಿಸೋಜಾ ಅವರನ್ನು ಎರಡನೇ ಬಾರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿದೆ. ಉಡುಪಿ ಜಿಯ ಮುದರಂಗಡಿ ಐವನ್ ಡಿಸೋಜಾ ಇವg ಹುಟ್ಟೂರು.
ಐವನ್ ಡಿಸೋಜಾ ಅವರು ಎ.ಐ.ಸಿ.ಸಿ ಸದಸ್ಯರಾಗಿ ಮತ್ತು ಎ.ಐ.ಸಿ.ಸಿ ಕಾರ್ಯದರ್ಶಿಯಾಗಿ ಕೇರಳ ರಾಜ್ಯದ ಉಸ್ತುವಾರಿಯಾಗಿ ಲೋಕಸಭಾ ಚುನಾವಣೆಗೆ ೧೨ ರಾಜ್ಯಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿzರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ೨೦೦೩ರಲ್ಲಿ ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ೨೦೧೩ರಲ್ಲಿ ಇವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ವಿಧಾನ ಪರಿಷತ್‌ನ ಸದಸ್ಯತ್ವಕ್ಕೆ ಆಯ್ಕೆ ಮಾಡಲಾಗಿದೆ. ವಿಧಾನಸಭೆಗೂ ಅವರು ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸ್ ಪಕ್ಷ ಅಂಗೀಕರಿಸಿದೆ.
ವೃತ್ತಿಯಿಂದ ವಕೀಲರಾದ ಐವನ್ ಡಿಸೋಜ ಅವರು, ಶಾಸನಸಭೆಯಲ್ಲಿ ಸಮರ್ಥವಾಗಿ ವಾದ ಮಂಡಿಸುತ್ತಾರೆ. ಮೊದಲ ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾಗಲೂ ಅವರಿಗೆ ವಿಧಾನ ಪರಿಷತ್ ಮುಖ್ಯಸಚೇತಕ ಹುzಯನ್ನು, ಮುಖ್ಯಮಂತ್ರಿಗ ಕಾರ್ಯದರ್ಶಿ ಹುzಯನ್ನು ನೀಡಲಾಗಿತ್ತು.
ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ೬ ಕೊಟಿರೂ.ಗೂ ಹೆಚ್ಚಿನ ಪರಿಹಾರವನ್ನು ಸಂತ್ರಸ್ತರಿಗೆ ನೀಡಲು ಕಾರಣಕರ್ತರಾಗಿದ್ದರು. ಅವರ ಪ್ರತಿಭೆಯನ್ನು ಗುರುತಿಸಿ ಐವನ್ ಡಿಸೋಜ ಅವರಿಗೆ ಸದನ ವೀರಪ್ರಶಸ್ತಿ ನೀಡಲಾಗಿತ್ತು. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿಯಾಗಿ, ಈಶಾನ್ಯ ರಾಜ್ಯದ ಚುನಾವಣೆ ಜವಾಬ್ದಾರಿಯನ್ನೂ ಕೂಡ ಐವಾನ್ ಡಿಸೋಜ ಅವರು ಯಶಸ್ವಿಯಾಗಿ ನಿರ್ವಹಿಸಿದ್ದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಮಂಗಳೂರು ವಿಶ್ವವಿದ್ಯಾಲಯ ಸಿಂಡಿಕೇಟ್, ಸೆನೆಟ್ ಮತ್ತು ಅಕಾಡೆಮಿ ಕೌನ್ಸಿಲ್, ಕ್ಯಾಂಪ್ಕೋ ಲಿ., ಮ್ಯಾಕೋ ಕೋ-ಆಪರೇಟಿವ್ ಸೊಸೈಟಿ ಲಿ., ರಚನಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ದಕ್ಷಿಣ ಕನ್ನಡ ಜಿ ಕಾರ್ಮಿಕ ಪರಿಷತ್, ದಕ್ಷಿಣ ಕನ್ನಡ ಜಿ ಅಮೆಚ್ಯುರ್ ಬಾಡಿಬಿಲ್ಡಿಂಗ್ ಅಸೋಸಿಯೇಷನ್ ಮುಂತಾದ ಸಂಸ್ಥೆಗಳ ಅಧ್ಯಕ್ಷರು, ಸದಸ್ಯರಾಗಿ ಐವನ್ ಡಿಸಜೋ ಅವರು ಕಾರ್ಯನಿರ್ವಹಿಸಿzರೆ.
ಹಾಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀಯುತ ಐವನ್ ಡಿಸೋಜ ಅವರು ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ನ.೩ ರಿಂದ ನ.೧೦ರವರೆಗೆ ವಿದೇಶಿ ಪ್ರವಾಸದಲ್ಲಿ ಇರುತ್ತಾರೆ. ಅವರ ಈ ವಿದೇಶ ಪ್ರವಾಸವು ಸುಖಕರವಾಗಿರಲಿ ಹಾಗೂ ಮತ್ತಷ್ಟು ಪ್ರಶಸ್ತಿಗಳೊಂದಿಗೆ ಅತ್ಯುನ್ನತ ಸ್ಥಾನಗಳು ಅವರಿಗೆ ಲಭಿಸಲಿ ಎಂದು ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಪ್ರಧಾನ ಸಂಚಾಲಕರಾದ ಎಂಪಿಎಂ ಷಣ್ಣುಖಯ್ಯ ಹಾಗೂ ಜಿಲ್ಲಾ ಸಂಚಾಲಕರು ಹಾಗೂ ಇನ್ನಿತರ ಪ್ರಮುಖರು ಶುಭಹಾರೈಸಿದ್ದಾರೆ.

