ಅನ್ನದಾತರು ಆಧುನಿಕ ತಂತ್ರಜ್ಞಾನ ಲಾಭದಾಯಕವಾಗಿ ಬಳಿಕೊಳ್ಳಿ…
ಶಿವಮೊಗ್ಗ : ಚಿನ್ನಿಕಟ್ಟೆ ಗ್ರಾಮೀಣ ಪ್ರದೇಶದ ರೈತರು ಆಧುನಿಕ ತಂತ್ರeನವನ್ನು ಹಾಗೂ ವಿeನಿಗಳ ಸಲಹೆಯನ್ನು ಬಳಸಿಕೊಂಡು ಲಾಭದಾಯಕವಾಗಿ ಮಾಡಿಕೊಳ್ಳಿ ಎಂದು ಶಾಸಕ ಡಿ.ಜಿ. ಶಾಂತನಗೌಡ ಸಲಹೆ ನೀಡಿದರು.
ತಾಲ್ಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿeನಿಗಳ ಇರುವೆಕ್ಕಿ,ಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗ್ರಾಮದಲ್ಲಿ ಇತ್ತೀಚೆಗೆ ಬೆಳಿಗ್ಗೆ ಕೃಷಿ ಮಾಹಿತಿ ಕೇಂದ್ರ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೃಷಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಉತ್ತಮ ತರಬೇತಿ ಮತ್ತು ಅಭ್ಯಾಸ ಮಾಡಿ ಗ್ರಾಮದಲ್ಲಿ ಕೃಷಿ ಚಟುವಟಿಕೆ ಗಳನ್ನು ಅಭಿವೃದ್ಧಿಪಡಿಸುವುದರ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ. ಜಗದೀಶ್ ರವರು ಕೈತೋಟ ಮತ್ತು ಬೆಳೆ ಸಂಗ್ರಹಾಲಯ (ಮಧುವನ) ಉದ್ಘಾಟಿಸಿ ವಿದ್ಯಾರ್ಥಿಗಳು ಹಡ್ಡಿ ಜೀವನದ ಸೊಬಗು ಅಷ್ಟೇ ಅಲ್ಲದೆ ಅವರ ಕಷ್ಟ ಸುಖದಲ್ಲೂ ಭಾಗಿಯಾಗಲು ತಿಳಿಸಿದರು ರೈತರ ಜೊತೆ ಜೋಳ ಕೊಯ್ಯುವುದು ಹಾಲು ಕರೆಯುವುದು ನೀವು ಕೊಯ್ಯುವುದು ಹಾಗೂ ರೊಟ್ಟಿ ತಟ್ಟುವುದನ್ನು ಮುಂತಾದವುಗಳಲ್ಲಿ ಭಾಗಿಯಾಗಲು ತಿಳಿಸಿದರು ರೈತರು ತಮ್ಮ ಹೊಲ ಅಥವಾ ತೋಟಗಳಿಗೆ ತಾವೇ ಸರಿಯಾದ ಕೀಟನಾಶಕ ಔಷಧಿಗಳನ್ನು ಗುರುತಿಸಿ ಕೇಳಿ ಖರೀದಿಸುವಷ್ಟು ನಿಪುಣರಾಗ ಬೇಕೆಂದು ಹೇಳಿದರು.

ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ| ಹೇಮ್ಲಾನಾಯ್ಕ್ ಡೀನ್ ಡಾ. ತಿಪ್ಪೇಶ್ ಸಂಯೋಜಕರಾದ ಡಾ||ಟಿ. ಹೆಚ್. ಗಜೇಂದ್ರ ಸಹ ಸಂಯೋಜಕರಾದ ಡಾ| ಗಣಪತಿ. ಯಂ ಸಹಾಯಕ ಸಂಯೋಜಕ ಡಾ| ರವಿಶಂಕರ್ ಹಾಗೂ ಡಾ| ಬ್ರಿಜೇಶ್ ಮತ್ತು ಕೀಠ ಶಾಸ್ತ್ರ ವಿಭಾಗದ ಡಾ| ಶರಣಬಸ್ಸಪ್ಪ ರವರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಡಾ| ಸುದೀಪರವರು ಅಡಿಕೆಯಲ್ಲಿ ಬೇಸಾಯ ಪದ್ಧತಿ ಅಂತರಬೆಳೆ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುವುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಡಾ. ಪ್ರವೀಣ್‌ರವರು ಅಡಿಕೆ ಯಲ್ಲಿ ಬರುವ ಕೀಟ ಪೀಡೆಗಳು ಹಾಗೂ ರೋಗಗಳು ಅವುಗಳ ಗುಣಲಕ್ಷಣವನ್ನು ಹಾಗೂ ಅದರ ಹತೋಟಿ ಕ್ರಮಗಳನ್ನು ತಿಳಿಸಿ, ಡಾ. ಉಸ್ ಅವರು ಭತ್ತದ ಆಧುನಿಕ ಬೇಸಾಯ ಪದ್ಧತಿಯ ಮೇಲೆ ವಿಚಾರ ಸಂಕಿರಣ ಮಾಡಿದರು.
ಪ್ರಮುಖರಾದ ಎಂ.ಹೆಚ್. ಕುಮಾರ್, ಚೇತನ್, ಬಿ.ಕೆ. ಮೂರ್ತಿ, ಪರಶುರಾಮ, ಶ್ರೀಮತಿ ಪ್ರತಿಮಾ, ಮುರುಗೇಶಯ್ಯ, ಸಿದ್ದಪ್ಪ, ನಂಜುಂಡಪ್ಪ, ನಂಜಪ್ಪ ಇನ್ನಿತರರಿದ್ದರು.

