ನಾರಾಯಣ ಹೃದಯಾಲಯದಲ್ಲಿ ವೈದ್ಯರಿಂದ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ …
ಶಿವಮೊಗ್ಗ : ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಅಪರೂಪದ ಹೃದಯ ಶಸ್ತ್ರಚಿಕಿತ್ಸೆ ಯನ್ನು ಯಶಸ್ವಿಯಾಗಿ ನಡೆಸಿ, ಸಾಧನೆ ಮಾಡಿzರೆ ಎಂದು ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ತಜ್ಞ ಡಾ|| ಬಾಲಸುಬ್ರಹ್ಮಣಿ ಆರ್. ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಈ ಶಸ್ತ್ರಚಿಕಿತ್ಸೆಯು ತುಂಬಾ ಅಪರೂಪ ವಾಗಿದ್ದು, ದೇಶದಲ್ಲಿಯೇ ಎರಡನೇಯ ಅಥವಾ ಮೂರನೇ ಯದ್ದು ಇರ ಬಹುದು. ಇದೊಂದು ಸವಾಲಿನ ಶಸ್ತ್ರಚಿಕಿತ್ಸೆಯಾಗಿದ್ದು, ಅಪರೂಪ ದಲ್ಲಿ ಅಪರೂಪ ವಾಗಿತ್ತು. ಆಸ್ಪತ್ರೆಯ ವೈದ್ಯರು ೬೬ ವರ್ಷದ ಪುರುಷ ರೋಗಿಗೆ ಅತ್ಯಂತ ಸಂಕೀರ್ಣ ಕೊರೋನರಿ ಆರ್ಟರಿ ಬೈಪಾಸ್ ಗ್ರಾಫ್ಟ್ (ಸಿಎಬಿಜಿ) ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿzರೆ ಎಂದರು.

ಇದೊಂದು ಬೆನ್ನುಮೂಳೆ ಮುಂದಕ್ಕೆ ಬಾಗಿರುವ ಸಂಕೀರ್ಣ ಸಮಸ್ಯೆಯನ್ನು ಎದುರಿಸಲಾಗು ತ್ತಿತ್ತು. ಬೆನ್ನುಮೂಳೆ ಮುಂದಕ್ಕೆ ಬಾಗಿ ವಕ್ರವಾಗಿರುವವರಿಗೆ ಈ ಆಪರೇಷನ್ ಮಾಡುವುದು ತುಂಬಾ ಕಷ್ಟಕರವಾಗುತ್ತದೆ. ಇವರಿಗೆ ಅರವಳಿಕೆ ಕೊಡಲೂ ಕೂಡ ಬಹಳ ಕಷ್ಟ. ಹೃದಯದ ಮೇಲೆ ಶಸ್ತ್ರಚಿಕಿತ್ಸೆ ಮಾಡಬೇಕಾದರೆ ರೋಗಿಯ ಎದೆ ಮತ್ತು ತಲೆಯನ್ನು ಹೆಚ್ಚುವರಿ ಬೆಂಬಲ ನೀಡಿ, ಎತ್ತಿ ಹಿಡಿಯ ಬೇಕು. ರೋಗಿಯ ವಿಶಿಷ್ಟ ದೇಹ ರಚನೆಗೆ ತಕ್ಕಂತೆ ಶಸ್ತ್ರಚಿಕಿತ್ಸೆಯನ್ನು ಹೊಂದಿಸಿಕೊಳ್ಳಬೇಕಾಗುತ್ತದೆ. ಆದರೆ ತಮ್ಮ ಆಸ್ಪತ್ರೆಯ ವೈದ್ಯರ ತಂಡ ಇದನ್ನು ಯಶಸ್ವಿಯಾಗಿ ಪೂರೈಸಿದೆ. ಆಪರೇಷನ್ ಆದ ೪ ದಿನಗಳಲ್ಲಿಯೇ ರೋಗಿ ಎದ್ದು ಓಡಾಡುವಂತ್ತಾಗಿzರೆ ಎಂದರು.
ರೋಗಿಗಳಿಗೆ ಶಸ್ತ್ರಚಿಕಿತ್ಸೆ ಆದರೆ ಮಾತ್ರ ಸಾಲದು, ಸೂಕ್ತವಾದ ಹೃದಯ ಆರೈಕೆ ಕೂಡ ಅಗತ್ಯವಾಗಿ ರುತ್ತದೆ. ಇದನ್ನು ಕೂಡ ರೋಗಿಗೆ ತಿಳಿಸಲಾಗಿದೆ. ಒಟ್ಟಾರೆ ಇದೊಂದು ಅಪರೂಪದ, ಸವಾಲಿನ ಹೃದಯ ಶಸ್ತ್ರಚಿಕಿತ್ಸೆ ಯಾಗಿದ್ದು, ನಾರಾಯಣ ಆಸ್ಪತ್ರೆಯ ವೈದ್ಯರ ತಂಡ ಇದನ್ನು ಯಶಸ್ವಿಯಾಗಿ ಪೂರೈಸಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ|| ಶರತ್, ಬಸಯ್ಯ, ಶೈಲೇಶ್, ಶ್ರೀಷ್ಮ ಇದ್ದರು.
