ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿ

ಸೆ.೨೮: ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವತಿಯಿಂದ ವಾಕಾಥಾನ್

Share Below Link

ಶಿವಮೊಗ್ಗ : ವಿಶ್ವ ಹೃದಯ ದಿನದ ಅಂಗವಾಗಿ, ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೆ. ೨೮ರ ಭಾನುವಾರ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ.
ಹೃದಯದ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಈ ವಾಕಾಥಾನ್‌ಗೆ ಅಂದು ಬೆಳಿಗ್ಗೆ ೭ ಗಂಟೆಗೆ ನೆಹರು ಮೈದಾನದಲ್ಲಿ ಬಿ.ವೈ. ರಾಘವೇಂದ್ರ ಅವರು ಚಾಲನೆ ನೀಡಲಿದ್ದಾರೆ.
ಈ ಜಗೃತಿ ಜಥಾವೂ ನೆಹರು ಮೈದಾನದಿಂದ ಮಹಾವೀರ ಸರ್ಕಲ್, ಗೋಪಿ ಸರ್ಕಲ್, ಅಮೀರ ಅಹ್ಮದ್ ಸರ್ಕಲ್ ಮಾರ್ಗವಾಗಿ ನೆಹರೂ ರಸ್ತೆ, ಗೋಪಿ ಸರ್ಕಲ್, ಜೈಲ್ ಸರ್ಕಲ್, ಮಹಾವೀರ ಸರ್ಕಲ್ ತಲುಪಿ ತದನಂತರ ಕುವೆಂಪು ರಸ್ತೆಯ ನಾರಾಯಣ ಸೂಪರ್ ಸ್ಪೆಷಾಲಿಟಿ ಕ್ಲಿನಿಕ್‌ನ ಆವರಣದಲ್ಲಿ ಅಂತ್ಯಗೊಳ್ಳಲಿದೆ.
ಶಿವಮೊಗ್ಗ ನಗರದ ನಾಗರಿಕರು, ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಥಾವನ್ನು ಯಶಸ್ವಿಗೊಳಿಸುವಂತೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ ಜನ್ ಅವರು ಪ್ರಕಟಣೆಯಲ್ಲಿ ವಿನಂತಿಸಿzರೆ.