ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಗಾಂಧೀಜಿ ಅವರ ವಿಚಾರ ಧಾರೆಗಳನ್ನು ಅಳವಡಿಸಿಕೊಳ್ಳಿ…

Share Below Link

ಶಿವಮೊಗ್ಗ : ಗಾಂಧೀಜಿ ಯವರ ವಿಚಾರಧಾರೆಗಳನ್ನು ಎನ್‌ಎಸ್‌ಎಸ್ ಸ್ವಯಂ ಸೇವಕರು ಅಳವಡಿಸಿಕೊಳ್ಳಬೇಕು ಎಂದು ರಾಷ್ಟ್ರಪ್ರಶಸ್ತಿ ಪುರಸ್ಕತ ಪ್ರೊ.ಕುಂದನ್ ಬಸವರಾಜ್ ಹೇಳಿದರು.


ಅವರು ಇತ್ತೀಚೆಗೆ ಸಹ್ಯಾದ್ರಿ ವಿeನ ಕಾಲೇಜಿನ ರಾಸೇಯೋ ಘಟಕ ೧ ಮತ್ತು ೨, ಇವರ ಸಹಯೋಗದೊಂದಿಗೆ ಶೈಕ್ಷಣಿಕ ವರ್ಷದ ರಾಸೇಯೋ ಕಾರ್ಯಕ್ರಮಗಳ ಉದ್ಘಾಟಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ವಿಚಾರಧಾರೆಗಳನ್ನು ಸ್ವಯಂಸೇವಕರು ಅಳವಡಿಸಿಕೊಳ್ಳಬೇಕು ಆ ಮೂಲಕ ದೇಶಕಟ್ಟುವ ಕೆಲಸ ಮಾಡಬೇಕು, ದೇಶ ಸೇವೆಯಲ್ಲಿ ರಾಸೇಯೋ ಸ್ವಯಂಸೇವಕರ ಪಾತ್ರ ಹಿರಿದಾದದು ಅದನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಸೇಯೋ ಅಧಿಕಾರಿ ಪ್ರೊ.ಹಾ.ಮ. ನಾಗಾರ್ಜುನ ಎನ್‌ಎಸ್‌ಎಸ್ ಶೈಕ್ಷಣಿಕ ವರ್ಷದ ಸಾಂಕೇತಿಕವಾಗಿ ಉದ್ಘಾಟನೆಯಾಗಿದೆ. ಆದರೆ ಎನ್‌ಎಸ್‌ಎಸ್ ಎನ್ನುವುದು ನಿರಂತರವಾದುದು ಎಂಬುದನ್ನು ಪಠ್ಯದೊಂದಿಗೆ ಪಠ್ಯೇತರವಾಗಿ ತೊಡಗಿಸಿಕೊಳ್ಳಬೇಕೆಂದರು.


ಕಾಲೇಜಿನ ಪ್ರಾಚಾರ್ಯ ಪ್ರೊ.ರಾಜೇಶ್ವರಿ ಎನ್. ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಾರ್ಷಿಕ ಯೋಜನೆಯ ಕರಡು ರೂಪಿಸಿಕೊಂಡು ಕಾರ್ಯಕ್ರಮ ರೂಪಿಸಿದರೆ ನಮ್ಮ ಕ್ಯಾಂಪಸ್ಸಿನ ಕಾಂಪೌಂಡ್ ಇದಕ್ಕೆ ಸಾಕ್ಷಿಯಾಗಿದೆ ಎಂಬುದನ್ನು ಶ್ಲಾಘಿಸಿದರು.
ಕಾರ್ಯಕ್ರಮದ ನಂತರ ನೆಹರು ಯುವಕೇಂದ್ರದ ಜಿ ಯುವ ಅಧಿಕಾರಿಗಳಾದ ಸ್ನೇಹಲತ ಮತ್ತು ಕಾರ್ಯಕ್ರಮಾಧಿಕಾರಿಗಳಾದ ಎಂ. ರಮೇಶ್ ಅವರು ಭಾರತ ಸರ್ಕಾರದ ಯುವ ಕಾರ್ಯಕ್ರಮ ಮತ್ತು ಕ್ರೀಡಾ ಸಚಿವಾಲಯದ ವತಿಯಿಂದ `ವಿಕಸಿತ್ ಭಾರತ ಕ್ವಿಜ್-೨೦೨೫? ಕುರಿತು ನೋಂದಣಿ ಹಾಗೂ ಸಮಗ್ರ ಮಾಹಿತಿಯನ್ನು ನೀಡಿದರು.
ಸಹ್ಯಾದ್ರಿ ಕಾಲೇಜಿನ ಎಸ್ಟೇಟ್ ಅಧಿಕಾರಿಗಳಾದ ಪ್ರೊ.ಡಾ.ಕೆ.ಎನ್. ಮಂಜುನಾಥ, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರೊ ಅರುಣಕುಮಾರ ಎನ್.ಸಿ. ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಯುವರಾಜ್ ಉಪಸ್ಥಿತರಿದ್ದರು.
ಕಾಲೇಜಿನ ರಾಸೇಯೋ ಘಟಕದ ಇನ್ನೂರು ಸ್ವಯಂಸೇವಕರು ಭಾಗವಹಿಸಿದ್ದರು. ಯೂತ್ಪಾರ್ ಸೇವಾದ ಸಂಚಾಲಕರಾದ ಆಶ್ರೀತ್ ಉಪಸ್ಥಿತರಿದ್ದರು. ಕು ಸುಮಿತ್ ಪ್ರಾರ್ಥಿಸಿದರು, ಕು ವೈಷ್ಣವಿ, ಶಾಂಭವಿ, ಕಾರ್ತಿಕ್, ಶಶಾಂಕ್, ಸಿಂಧು, ಪೃಥ್ವಿ, ನವೀನ್ ಕಾರ್ಯಕ್ರಮ ನಿರ್ವಹಿಸಿ ನಿರೂಪಿಸಿದರು.