ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಸೆ.7: ಅಚೀವರ್ಸ್ ಕೋಚಿಂಗ್ ಸೆಂಟರ್‌ನಿಂದ ಉಚಿತ ಕಾರ್ಯಾಗಾರ…

Share Below Link

ಶಿವಮೊಗ್ಗ : ಸರ್ಕಾರದ ವಿವಿಧ ಇಲಾಖೆಯ ಖಾಲಿಯಿರುವ ಸಾವಿರಾರು ಹುzಗಳಿಗೆ ಅಧಿಸೂಚನೆ ಹೊರಡಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೆ.೭ರ ಬೆಳಿಗ್ಗೆ ೧೦.೩೦ಕ್ಕೆ ತಿಲಕ್‌ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿರುವ ಅಚೀವರ್‍ಸ್ ಕೋಚಿಂಗ್ ಸೆಂಟರ್‌ನಲ್ಲಿ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಒಂದು ದಿನದ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಅಚೀವರ್‍ಸ್ ಕೋಚಿಂಗ್ ಸೆಂಟರ್‌ನ ಮುಖ್ಯಸ್ಥ ವರುಣ್‌ನಾಯ್ಕ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಲಿzರೆ. ಯಾವುದೇ ಪದವಿ ಓದುತ್ತಿರುವ ಅಥವಾ ಪದವಿ ಮುಗಿಸಿರುವ ವಿದ್ಯಾರ್ಥಿಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ. ಉನ್ನತಮಟ್ಟದ ಗುರಿ ಇಟ್ಟುಕೊಂಡು ಅಧ್ಯಯನ ಮಾಡುವುದರಿಂದ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗಲಿದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸವನ್ನು ತಪ್ಪಿಸಿ ಈ ತರಬೇತಿಯಿಂದ ಮಾನಸಿಕವಾಗಿ, ದೈಹಿಕವಾಗಿ ಮತ್ತು ನೈತಿಕವಾಗಿ ಪರಿಪೂರ್ಣತೆ ಹೊಂದಲು ಸಹಕಾರಿಯಾಗುತ್ತದೆ ಎಂದರು.


ಉತ್ತಮ ವಿಷಯ ತಜ್ಞರು, ಪರಿಣಿತರಿಂದ ತರಗತಿಗಳನ್ನು ಆಯೋಜಿಸುತ್ತಿದ್ದು, ಉತ್ತಮ ಅಧ್ಯಯನ ಸಾಮಾಗ್ರಿ, ಅತ್ಯುತ್ತಮ ಅಣುಕು ಪರೀಕ್ಷೆಗಳನ್ನು ಹಾಗೂ ಅಣುಕು ಸಂದರ್ಶನಗಳನ್ನು ಮತ್ತು ಸ್ವಯಂ ಮಲ್ಯಮಾಪನ ಇತ್ಯಾದಿ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದರು.
ಸೆಂಟರ್‌ನ ಮಹೇಶ್ ಅವರು ಮಾತನಾಡಿ, ವಿವಿಧ ಬ್ಯಾಂಕುಗಳಲ್ಲಿ ಕ್ಲರ್ಕ್ ಸಾವಿರಾರು ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ್ದು ಇದಕ್ಕಾಗಿ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ೮೦೦ಕ್ಕೂ ಹೆಚ್ಚು ಬ್ಯಾಂಕಿಂಗ್ ಹುzಗಳಿಗೆ ಅರ್ಜಿ ಆಹ್ವಾನಿಸಿದ್ದು, ಕ್ರಮಬದ್ಧವಾಗಿ ಓದಿದರೆ ಆರು ತಿಂಗಳ ಒಳಗೆ ಹುz ಪಡೆದು ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು.
ಪವಿತ್ರ ಅವರು ಮಾತನಾಡಿ, ರೈಲ್ವೆ, ಸಿಬಿಐ, ಐಬಿ, ಕೆಎಎಸ್, ಪಿಎಸ್‌ಐ, ಎಸ್‌ಡಿಎ, ಕೆಪಿಎಸ್ಸಿ, ಪಿಡಿಓ, ಪಿಸಿ, ಇನ್ನಿತರ ಹುzಗಳಿಗೆ ನಮ್ಮ ಸೆಂಟರ್‌ನಲ್ಲಿ ಉತ್ತಮ ತರಬೇತಿ ನೀಡಲಾಗುತ್ತಿದ್ದು, ಬೆಳಗಿನ ಬ್ಯಾಚ್ ಅಲ್ಲದೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು, ಗೃಹಿಣಿಯರು, ಕಛೇರಿ ಕೆಲಸ ಮಾಡುವವರಿಗೆ ಸಂಜೆ ೬ರಿಂದ ೭.೩೦ರ ವರೆಗೆ ತರಬೇತಿ ನೀಡಲಾಗುತ್ತಿದೆ ಎಂದರಲ್ಲದೇ, ಹೆಚ್ಚಿನ ವಿವರಗಳಿಗೆ ಮೊ. ೭೮೧೨೯೨೬೭೦೨ರಲ್ಲಿ ಸಂಪರ್ಕಿಸಲು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಹೇಶ್, ಎಜಜ್ ಉಪಸ್ಥಿತರಿದ್ದರು.