ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಆರ್ಥಿಕ ಚಟುವಟಿಕೆ ಕುರಿತು ಉನ್ನತ ತನಿಖೆಗೆ ಒತ್ತಾಯ…

Share Below Link

ಶಿವಮೊಗ್ಗ : ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ಆಗಿರುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಸರ್ಕಾರ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸಬೇಕು. ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿಯನ್ನು ನೇಮಿಸ ಬೇಕು ಎಂದು ಶಿವಮೊಗ್ಗದ ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯರುಗಳು ಆಗ್ರಹಿಸಿzರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹೊನ್ನಾಳ್ಳಿ ಚಂದ್ರಶೇಖರ್, ಕನ್ನಡ ಸಾಹಿತ್ಯ ಪರಿಷತ್‌ನ ಸರ್ವಸದಸ್ಯರ ವಿಶೇಷ ಸಭೆ ಜೂ.೨೨ರಂದು ನಡೆಯಲಿದೆ. ಈ ಸಭೆಯಲ್ಲಿ ಬೈಲಾ ತಿದ್ದುಪಡಿಯ ಬಗ್ಗೆ ಚರ್ಚೆಯಾಗಲಿದೆ. ಅದನ್ನು ಈಗಿರುವ ಯಥಾ ಸ್ಥಿತಿಯಲ್ಲಿ ಮಂಡಿಸದೇ ಎಲ್ಲರೂ ಒಪ್ಪುವ ಸ್ಥಿತಿಯಲ್ಲಿ ಮಂಡಿಸಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ರಾಜಧ್ಯಕ್ಷರು ಸರ್ವಾಧಿಕಾರಿ ಯಾಗಿ ವರ್ತಿಸುತ್ತಿzರೆ. ಬೈಲಾ ತಿದ್ದುಪಡಿಯ ಬಗ್ಗೆ ಅವೈeನಿಕ ವಾಗಿ ಮಾತನಾಡುತ್ತಿzರೆ. ನಮ್ಮ ಸಂವಿಧಾನದಲ್ಲಿ ಆನಂದ ಸಿದ್ಧಾಂತ ಅನ್ವಯವಾಗುವುದು. ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮಾತ್ರ, ಆದರೆ ಈ ಸಿzಂತ ತಮಗೂ ಅನ್ವಯವಾಗುತ್ತೆ ಎಂದು ಕೊಂಡಿzರೆ. ಈ ಅಧಿಕಾರವನ್ನು ರಾಜಧ್ಯಕ್ಷರಿಗೆ ನೀಡಬಾರದು ಎಂದರು.
ಹೊಸ ಬೈಲಾ ಜರಿಗೆ ಬಂದರೆ ಅಧಿಕಾರವೆಲ್ಲ ಕೇಂದ್ರಿಕೃತ ವಾಗುತ್ತದೆ. ಅಧ್ಯಕ್ಷರದ್ದೇ ಕಾರ್‌ಬಾರು ಆಗುತ್ತದೆ ಮತ್ತು ಸರ್ವಾಧಿಕಾರಕ್ಕೆ ಒತ್ತುಕೊಟ್ಟಂತಾಗು ತ್ತದೆ. ಜಿ ಕೇಂದ್ರಗಳಿಗೆ, ಹೋಬಳಿ ಕೇಂದ್ರಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ, ಸ್ಥಳೀಯ ನೇಮಕಾತಿಗಳನ್ನು ಅಧ್ಯಕ್ಷರೇ ಮಾಡಬೇಕಾಗುತ್ತದೆ. ಘಟಕಗಳು ಸ್ವಾತಂತ್ರ್ಯ ಕಳೆದುಕೊಳ್ಳುತ್ತವೆ. ಇದು ಅಪಾಯದ ಸಂಕೇತವಾಗಿದೆ ಎಂದು ಎಚ್ಚರಿಸಿದರು.
ಅನೇಕ ವಿಷಯಗಳು ಬೈಲಾದಲ್ಲಿ ತಿದ್ದುಪಡಿಯಾಗಲಿದೆ. ಸಭೆಗೆ ಗೈರು ಹಾಜರಾದರೆ ಅದನ್ನು ಕಿತ್ತು ಹಾಕುವ ಬದಲು ಅಂತಿಮ ತೀರ್ಮಾನ ಕೈಗೊಳ್ಳುವ ಅಧಿಕಾರ ವನ್ನು ಆಯಾ ಘಟಕಕ್ಕೆ ನೀಡಬೇಕು. ಇಲ್ಲಿ ರಾಜಧ್ಯಕ್ಷರ ಪ್ರವೇಶ ಇರಬಾರದು ಎಂದರು.
ಮತ್ತೋರ್ವ ಪ್ರಮುಖರಾದ ಕೆ.ಪಿ.ಶ್ರೀಪಾಲ್ ಮಾತನಾಡಿ, ಗೌರವ ಪದವಿಗಳನ್ನು ರಾಜ್ಯ ಸರ್ಕಾರ ಬಳಸಿಕೊಳ್ಳಬಾರದು ಎಂದಿದ್ದರು ಕೂಡ ರಾಜಧ್ಯಕ್ಷರು ನಾಡೋಜ ಎಂಬ ಪದವನ್ನು ಬಳಸುತ್ತಿzರೆ. ಕೂಡಲೇ ಅದನ್ನು ನಿಲ್ಲಿಸಬೇಕು ಮತ್ತು ಈ ಹಿಂದೆ ರಾಜಧ್ಯಕ್ಷರು ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅನೇಕ ಭ್ರಷ್ಟಚಾರ ನಡೆದಿದೆ ಎಂದು ತಿಳಿದು ಬಂದಿದೆ. ಅವುಗಳನ್ನು ತನಿಖೆ ಮಾಡಬೇಕು ಮತ್ತು ಸಾಹಿತ್ಯ ಕಾರ್ಯಕ್ರಮಗಳಿಗೆ ಕೇಂದ್ರ ಪರಿಷತ್ ಆದ್ಯತೆ ನೀಡಬೇಕು ಎಂದರು.
ಬಿ.ಚಂದ್ರೇಗೌಡ ಅವರು ಮಾತನಾಡಿ, ಮಹೇಶ್ ಜೋಷಿ ಕನ್ನಡ ಸಾಹಿತ್ಯ ಪರಿಷತ್‌ಗೆ ಬಂದ ಮೇಲೆ ಸಮಸ್ಯೆಗಳು ಹೆಚ್ಚಿವೆ. ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚವನ್ನೇ ಇವರು ಕೊಟ್ಟಿಲ್ಲ. ಅಲ್ಲಿ ಬಿಡುಗಡೆ ಯಾಗಿದ್ದು ೩೩ ಕೋಟಿ, ವಿವಿಧೆಡೆ ಯಿಂದ ಬಂದ ಹಣ ೨.೫ ಕೋಟಿ ಆ ಲೆಕ್ಕದ ಬಗ್ಗೆ ಮಾತೇ ಇಲ್ಲ. ಸರ್ವಾಧಿಕಾರಿಯಂತೆ ಅವರು ವರ್ತಿಸುತ್ತಿzರೆ. ತಮ್ಮನ್ನು ವಿರೋಧಿಸಿದ ಜಿ ಅಧ್ಯಕ್ಷರು ಗಳಿಗೆ ನೋಟೀಸ್ ಕೊಡುವ ಮೂಲಕ ಬೆದರಿಕೆ ಹಾಕುತ್ತಿzರೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಸಂಗಮೇಶ್, ಪ್ರಕಾಶ್, ಕೃಷ್ಣಮೂರ್ತಿ, ಮಂಜಪ್ಪ, ಗಣೇಶ್, ಪುಟ್ಟಯ್ಯ, ಶೇಖರ್ ಗೌಳೇರ್ ಇದ್ದರು.