ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಬಸವಣ್ಣನವರ ತತ್ವಾದರ್ಶಗಳನ್ನು ನಾವೆಲ್ಲ ಪಾಲನೆಮಾಡಬೇಕಿದೆ: ಶಾಸಕ ಶಾಂತನಗೌಡ

Share Below Link

ನ್ಯಾಮತಿ ಃ ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ ಕೇವಲ ಸರಕಾರಿ ಕಾರ್ಯಕ್ರಮವಾಗಿ ಸೀಮಿತ ವಾಗದೆ ಅವರ ತತ್ವ ಆದರ್ಶಗಳನ್ನು ನಾವೆಲ್ಲ ಪಾಲನೆ ಮಾಡಬೇಕು ಎಂದು ಶಾಸಕ ಡಿ.ಜಿ.ಶಾಂತನಗೌಡ ತಿಳಿಸಿದರು.


ಅವರು ನ್ಯಾಮತಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಮುಂಭಾ ಗದಲ್ಲಿ ಆಯೋಜಿಸಿದ್ದ ಸರಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣ ನವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಗೊಳಿಸಿ ಮಾತನಾಡಿದರು.
ರಾಜ್ಯ ಸರಕಾರವು ಸರಕಾರಿ ಕಚೇರಿಗಳಲ್ಲಿ ಇಂತಹ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅಳವಡಿ ಸುವಂತೆ ಆದೇಶಿಸಿದ್ದು ಇದರ ಅನ್ವಯ ಇಂದು ಭಾವಚಿತ್ರ ಅನಾವರಣ ಮಾಡಲಾಗಿದೆ. ಬಸವಣ್ಣವರ ಭಾವಚಿತ್ರವನ್ನು ಕಚೇರಿಗಳಲ್ಲಿ ಹಾಕಿಕೊಳ್ಳುವುದಕ್ಕೆ ಮಾತ್ರ ಸೀಮಿತ ವಾಗದೆ ಅಧಿಕಾರಿ ಗಳು, ಸಾರ್ವಜನಿಕರು ಅವರ ವಚನಗಳಲ್ಲಿನ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗೆ ಮಾಡುವ ಮೂಲಕ ರಾಜ್ಯ ದಲ್ಲಿ ಈ ಕಾರ್ಯಕ್ರಮ ಹೊಸ ಇತಿಹಾಸ ನಿರ್ಮಾಣಕ್ಕೆ ಸಾಕ್ಷಿಯಾ ಗಲಿ ಹಾಗೂ ವಿಶ್ವಗುರು ಬಸವಣ್ಣ ನವರ ತತ್ವ ಆದರ್ಶಗಳು ಜಗತ್ತಿನಲ್ಲಿ ಪ್ರಸಾರವಾಗಲಿ ಎಂದರು.
ಹೊನ್ನಾಳಿ ಉಪವಿಭಾಗದ ಎಸಿ ಹುಲ್ಲುಮನಿ ತಿಮ್ಮಣ್ಣ ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪ, ಮಾಜಿಶಾಸಕ ಡಿ.ಬಿ.ಗಂಗಪ್ಪ , ಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡೇರಿ ವಿಶ್ವನಾಥ್ , ನಿವತ್ತ ಉಪನ್ಯಾಸಕ ಗಂಜೀನಹಳ್ಳಿ ಬಸವರಾಜಪ್ಪ ಬಸವಣ್ಣನವರನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ. ಗಣೇಶ್‌ರಾವ್ , ಸಾಧು ವೀರಶೈವ ಸಮಾಜದ ನ್ಯಾಮತಿ ತಾಲೂಕು ಅಧ್ಯಕ್ಷ ಕೋಡಿಕೊಪ್ಪ ಶಿವಣ್ಣ , ಆಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಅಧ್ಯಕ್ಷ ಹವಳದ ಲಿಂಗರಾಜ್, ಸಮಾಜದ ಮುಖಂಡ ಗೂಂಡೂರು ಲೋಕೇಶ್, ಕೋಡುತಾಳು ರುದ್ರೇಶ್ ಇತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.