ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ಸಮಾಜಘಾತುಕ ಶಕ್ತಿಗಳ ಹೆಚ್ಚಳ: ಆರೋಪ

Share Below Link

ಶಿಕಾರಿಪುರ: ಸಾರ್ವಜನಿಕರ ಹಿತ ಕಾಪಾಡಬೇಕಾದ ಪೋಲೀಸ್ ಇಲಾಖೆ ಜತೆಗೆ ಕೆಲ ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದ ತಾಲೂಕು, ಪಟ್ಟಣದಲ್ಲಿ ಸಮಾಜಘಾತುಕ ಶಕ್ತಿ ಹೆಚ್ಚಾಗು ತ್ತಿದ್ದು ಸಾರ್ವಜನಿಕರ ಶಾಂತಿ ನೆಮ್ಮದಿಗೆ ಭಂಗ ಉಂಟಾಗುತ್ತಿದೆ ಇಲ್ಲಿನ ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಯುವ ಘಟಕದ ಅದ್ಯಕ್ಷ ಗೋಕುಲ್ ರಾಜ್ ಗಂಭೀರವಾಗಿ ಆರೋಪಿಸಿದರು.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ.೬ ರಂದು ಪಟ್ಟಣದ ದೊಡ್ಡಪೇಟೆ ಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಅನ್ಯಕೋಮಿನ ಯುವಕರಿಗೆ ಸ್ಥಳೀಯ ಸುಶೀಲ್ ಎಂಬಾತನು ಬುದ್ದಿಮಾತು ಹೇಳಿದ ಪರಿಣಾಮ ವಾಗಿ ಆತನ ಮೇಲೆ ನಡೆದಂತಹ ಹ ಹಾಗೂ ಚಾಕು ಇರಿತ ಇಲ್ಲಿನ ಬೀಟ್ ಪೋಲೀಸರ ದಿವ್ಯ ನಿರ್ಲಕ್ಷ್ಯದಿಂದ ನಡೆದಿದೆ. ಪಟ್ಟಣದಲ್ಲಿ ವಿವಿಧ ಬೀಟ್ ಗಳಲ್ಲಿದ್ದು ಕರ್ತವ್ಯ ನಿರ್ವಹಿಸ ಬೇಕಿದ್ದ ಪೋಲೀಸರು ಇತ್ತೀಚೆಗೆ ಬೀಟ್‌ನಲ್ಲಿರುವುದು ಅಪರೂಪ ವಾಗಿದೆ.ಕಳೆದ ಕೆಲವು ವರ್ಷಗಳ ಹಿಂದೆ ಪಟ್ಟಣ ಪೋಲೀಸ್ ಠಾಣೆಯಲ್ಲಿದ್ದ ಪಿಎಸ್‌ಐ ರಾಜು ರೆಡ್ಡಿಯ ಸಂದರ್ಭದಲ್ಲಿದ್ದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಅವರ ವರ್ಗಾವಣೆ ನಂತರ ಇತ್ತೀಚೆಗೆ ಕಾಣುತ್ತಿಲ್ಲ. ಫೆ ೬ ರಂದು ನಡೆದ ಘಟನಾವಳಿಯಲ್ಲಿ ಆರೋಪಿಗಳು ಗಾಂಜ ಸೇವಿಸಿದ್ದರು ಎಂದು ಪೋಲೀಸ್ ಇಲಾಖೆಯ ಮಾಹಿತಿ ಯಿಂದ ತಾಲೂಕಿನಲ್ಲಿ ಗಾಂಜ ಹಾವಳಿ ಹೆಚ್ಚಾಗಿರುವುದಕ್ಕೆ ಸಾಕ್ಷಿ ಯಾಗಿದೆ ಎಂದು ಗಂಭೀರವಾಗಿ ಆರೋಪಿಸಿದರು.
ಅಪಘಾತ ಮತ್ತಿತರ ಆರೋಗ್ಯ ಸಮಸ್ಯೆಯಿಂದ ತುರ್ತು ಚಿಕಿತ್ಸೆಗಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳು ಹೋದರೆ, ಆಸ್ಪತ್ರೆಗಳಲ್ಲಿನ ವೈದ್ಯರುಗಳು ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಿಗೆ ಕಳಿಸುತ್ತಾರೆ. ಇಲ್ಲಿ ಜಿಮಟ್ಟದ ಆಸ್ಪತ್ರೆ ಹಾಗೂ ಎ ರೀತಿಯ ಸೌಲಭ್ಯಗಳಿದ್ದರೂ, ರೋಗಿಗಳಿಗೆ ಶಿವಮೊಗ್ಗಕ್ಕೆ ಕಳಿಸಲಾಗುತ್ತಿದೆ. ಇಲ್ಲಿನ ಅನೇಕ ವೈದ್ಯರು ಆಸ್ಪತ್ರೆಯ ಸಮಯ ಆಗುತ್ತಿದ್ದಂತೆಯೇ ತಮ್ಮ ಖಾಸಗಿ ಕ್ಲಿನಿಕ್‌ಗಳಿಗೆ ರೋಗಿಗಳಿಗೆ ಬರಲು ತಿಳಿಸುತ್ತಾರೆ ಇದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸಂಬಂದಿಸಿದ ಜನಪ್ರತಿನಿಧಿಗಳ ಜಣಕುರುಡಿನಿಂದ ಜನಸಾಮಾನ್ಯರು ನೆಮ್ಮದಿಯನ್ನು ಕಳೆದುಕೊಂಡಿದ್ದು ಈ ಕೂಡಲೇ ಎಚ್ಚೆತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನು ಕ್ರಮದ ಮೂಲಕ ಜನತೆಯಲ್ಲಿನ ಆತಂಕ ಭಯ ದೂರಪಡಿಸುವಂತೆ ಆಗ್ರಹಿಸಿದರು.
ಗೋಷ್ಟಿಯಲ್ಲಿ ಸಮಿತಿಯ ಪಥ್ವಿ ರಾಜ್ ಸಿಂಗ್, ಮಾರುತಿ ಇದ್ದರು.