ಇತರೆಜಿಲ್ಲಾ ಸುದ್ದಿತಾಜಾ ಸುದ್ದಿ

ನಿವೃತ್ತ ಶ್ಯಾನುಭೋಗರಿಂದ ಪ್ರತಿಭಟನೆಯ ಎಚ್ಚರಿಕೆ…

Share Below Link

ಸಾಗರ : ಸರ್ಕಾರ ನಿವೃತ್ತ ಶ್ಯಾನುಭೋಗರ ಪಿಂಚಣಿ ಹಣ ವನ್ನು ಬಿಡುಗಡೆ ಮಾಡದೆ ಹೋದಲ್ಲಿ ಜಿಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆ ಸುವುದಾಗಿ ನಿವೃತ್ತ ಶ್ಯಾನು ಭೋಗರಾದ ವಿ.ಎಂ. ನಾಡಿಗೇರ್ ಎಚ್ಚರಿಕೆ ನೀಡಿzರೆ.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಧುನಿಕ ತಂತ್ರeನ ಇಲ್ಲದ ಕಾಲದಲ್ಲಿ ಕಾಡುಮೇಡು ಸುತ್ತಿ ಸರ್ಕಾರಕ್ಕೆ ಕಂದಾಯ ಸೇರಿದಂತೆ ಇನ್ನಿತರೆ ತೆರಿಗೆಗಳನ್ನು ವಸೂಲಿ ಮಾಡುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ನಮ್ಮ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಖೇದಕರ ಎಂದು ತಿಳಿಸಿದರು.
೧೯೫೪ರಿಂದ ೧೯೬೩ರವರೆಗೆ ನಮ್ಮನ್ನು ಡೀಮ್ಡ್ ವಿಲೇಜ್ ಅಕೌಂಟೆಂಟ್ ಆಗಿ ನೇಮಕ ಮಾಡಿಕೊಳ್ಳಲಾಗಿತ್ತು. ೧೯೬೪ರ ನಂತರ ಅಂದಿನ ಸರ್ಕಾರ ಹೊಸ ಹುz ಸೃಷ್ಟಿ ಮಾಡಿತ್ತು. ನಾವು ೨೦೦೩ರವರೆಗೆ ಅತ್ಯಂತ ಪ್ರಾಮಾ ಣಿಕವಾಗಿ ಶ್ಯಾನುಭೋಗರಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಆದರೆ ನಮ್ಮ ಸೇವೆಗೆ ನೀಡಬೇಕಾದ ಪಿಂಚಣಿಯನ್ನು ಈತನಕ ನೀಡದೆ ಸತಾಯಿಸಲಾಗುತ್ತಿದೆ. ಪಿಂಚಣಿ ನೀಡದಿರುವ ಕ್ರಮದ ವಿರುದ್ದ ನಾವು ಹತ್ತು ಜನರು ೨೦೦೮ರಲ್ಲಿ ಕರ್ನಾಟಕ ಅಡ್ಮೀರಲ್ ಟ್ರಿಬ್ಯು ನಲ್‌ನಲ್ಲಿ ದಾವೆ ಹೂಡಿದ್ದೇವು. ನ್ಯಾಯಾಲಯ ನಮಗೆ ಪಿಂಚಣಿ ನೀಡಲು ದಿನಾಂಕ ೧೮-೦೮- ೨೦೨೨ರಲ್ಲಿ ಆದೇಶ ಮಾಡಿತ್ತು ಎಂದು ಹೇಳಿದರು.
ನಮಗೆ ಪಿಂಚಣಿ ನೀಡಲು ನ್ಯಾಯಾಲಯದ ಆದೇಶವಿದ್ದರೂ ನಮ್ಮನ್ನು ಸತಾಯಿಸಲಾಗುತ್ತಿದೆ. ಒಂದರ್ಥದಲ್ಲಿ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಉಲ್ಲಂಘಿಸಿ ನ್ಯಾಯಾಂಗ ನಿಂದನೆಗೆ ಗುರಿಯಾಗಿzರೆ. ಸರ್ಕಾರದ ಕೆಲವು ಅಧಿಕಾರಿಗಳು ನಾವು ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದೇವೆ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿzರೆ. ನಾವೆ ೭೦ ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಾಗಿದ್ದೇವೆ. ನಮ್ಮನ್ನು ಕಚೇರಿಕಚೇರಿಗೆ ಅಲೆಸುವುದು ಅಧಿಕಾರಿಗಳಿಗೆ ಶೋಭೆ ತರುವುದಿಲ್ಲ. ಈ ಹಿನ್ನೆಲೆಯಲ್ಲಿ ಜಿಧಿಕಾರಿಗಳ ಸಮ್ಮುಖದಲ್ಲಿ ನಮ್ಮ ದುಃಖ ದುಮ್ಮಾನ ತೋಡಿಕೊಳ್ಳಲು ಪ್ರತಿಭಟನೆ ನಡೆಸುವುದು ಅನಿವಾ ರ್ಯವಾಗಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ನಿವೃತ್ತ ಶ್ಯಾನು ಭೋಗರಾದ ಲಕ್ಷ್ಮೀನಾರಾಯಣ ಭಟ್, ಸುಬ್ರಾವ್ ಹಾಜರಿದ್ದರು.