ಇತರೆತಾಜಾ ಸುದ್ದಿದೇಶವಿದೇಶ

ಕುಂದಾಪುರ ಕಟ್ಕರೆ ಬಾಲ ಯೇಸುವಿನ ಆಶ್ರಮದಲ್ಲಿ ಭಕ್ತಿಪೂರ್ವಕವಾಗಿ ಜರುಗಿದ ಕಾರ್ಮೆಲ್ ಮಾತೆಯ ಉತ್ಸವ

Share Below Link

ಕುಂದಾಪುರ: ಕೊಟೇಶ್ವರ ಕಟ್ಕರೆ ಕಾರ್ಮೆಲ್ ಮೇಳದ ಧರ್ಮ ಗುರುಗಳ ಬಾಲ ಯೇಸುವಿನ ಆಶ್ರಮದಲ್ಲಿ ತಮ್ಮ ಮೇಳದ ಪಾಲಕಿಯಾದ ಕಾರ್ಮೆಲ್ ಮಾತೆಯ ಹಬ್ಬವನ್ನು ಜು. ೧೫ ರಂದು ಭಕ್ತಿಪೂರ್ವಕವಾದ ಪೂಜಾವಿಧಿಗಳ ಮೂಲಕ ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಅ|ವಂ| ಮೊನ್ಸಿಂಜೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಇವರ ನೇತ್ರತ್ವದಲ್ಲಿ ಸಂಭ್ರಮದ ಧಾರ್ಮಿಕ ಆಚರಣೆಗಳು ನಡೆಯಿತು.
ಕಾರ್ಮೆಲ್ ಮಾತೆಯ ವಿಶೇಷತೆಯನ್ನು ತಿಳಿಸಿದ ಅವರು, ಕಾರ್ಮೆಲ್ ಮೇಳದ ಧರ್ಮ ಗುರುಗಳಿಗೆ ಕಾರ್ಮೆಲ್ ಗುಡ್ಡೆ ಯಲ್ಲಿ ಮೇರಿ ಮಾತೆ ಕಾರ್ಮೆಲ್ ಮಾತೆಯ ರೂಪದಲ್ಲಿ ಪ್ರತ್ಯೆಕ್ಷೆಯಾಗಿ, ಧರ್ಮಗುರುಗಳಿಗೆ ರಕ್ಷಣೆ ನೀಡುತ್ತೇನೆಂದು, ಪವಿತ್ರವಾದ ಉತ್ತರಿಕೆಯನ್ನು ಧರಿಸಲು ನೀಡಿದಳು, ಇದನ್ನು ನೀವು ಧರಿಸಿದರೆ ನೀವು ರಕ್ಷಣೆಗೆ ಪಾತ್ರರಾಗುತ್ತೀರಿ, ನಿಮ್ಮ ಆತ್ಮವು ನಾಶವಾಗಲಾರದು ಎಂದು ಹೇಳಿದಳು. ಅಂದು ಅದು ದೊಡ್ಡ ಉತ್ತರಿಕೆಯಾಗಿತ್ತು, ಇಂದಿಗೂ ನಾವು ಅದನ್ನು ಕೊರಳಲ್ಲಿ ಧರಿಸುತ್ತಿzವೆ, ನಾವು ಕಾರ್ಮೆಲ್ ಮಾತೆಯನ್ನು ಪ್ರೀತಿಸೋಣ, ಕಾರ್ಮೆಲ್ ಮಾತೆಯ ಸಾಂಗಾತ್ಯ ನಮಗೆ ಶಕ್ತಿ ನೀಡಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದರು.
ಕುಂದಾಪುರ ವಲಯ ಪ್ರಧಾನ ಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ವಂ|ಧರ್ಮಗುರು ಸುನೀಲ್ ವೇಗಸ್, ವಂ| ಧರ್ಮಗುರು ಎಡ್ವಿನ್ ಡಿಸೋಜ, ವಂ| ಧರ್ಮಗುರು ಆಲ್ಬರ್ಟ್ ಕ್ರಾಸ್ತಾ, ವಂ|ಧರ್ಮಗುರು ರೆಜಿನಾಲ್ಡ್ ಪಿಂಟೊ, ವಂ| ಧರ್ಮಗುರು ಅನಿಲ್ ಕರ್ನೇಲಿಯೊ. ಕುಂದಾಪುರದ ಸಹಾಯಕ ಧರ್ಮಗುರು ವಂ| ಅಶ್ವಿನ್ ಅರನ್ನಾ, ಕಟ್ಕೆರೆ ಬಾಲ ಯೇಸುವಿನ ಕಾರ್ಮೆಲ್ ಆಶ್ರಮದ ಧರ್ಮಗುರುಗಳಾದ ವಂ| ಧರ್ಮಗುರು ಜೋನ್ ಸಿಕ್ವೇರಾ, ವಂ|ಧರ್ಮಗುರು ಜೋ ತಾವ್ರೊ, ವಂ|ಧರ್ಮಗುರು ಫ್ರಾನ್ಸಿಸ್ ಡಿಸೋಜ ಮತ್ತು ಹಲವಾರು ಅತಿಥಿ ಧರ್ಮಗುರುಗಳು ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದರು.
ಕೊಟೇಶ್ವರ ಇಗರ್ಜಿ ಮತ್ತು ಕಟ್ಕರೆ ಬಾಲಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಧರ್ಮಗುರು ಪ್ರವೀಣ್ ಪಿಂಟೊ ಸ್ವಾಗತಿಸಿ ಕೊನೆಗೆ ವಂದಿಸಿದರು.