ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯಶಿಕ್ಷಣ

ಕ್ರಿಕೆಟ್ ಪಂದ್ಯಾವಳಿ ಮೂಲಕ ಮತದಾನ ಜಾಗೃತಿ…

Share Below Link

ಶಿವಮೊಗ್ಗ : ಜಿಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಸ್ವೀಪ್ ವತಿಯಿಂದ ಹಲವಾರು ಚಟುವಟಿಕೆಗಳನ್ನು ಕೈಗೊಳ್ಳಲಾಗು ತ್ತಿದ್ದು, ಸ್ವೀಪ್ ಕಪ್ ವಿಭಿನ್ನವಾದ ಪ್ರಯತ್ನವಾಗಿದೆ. ಎಲ್ಲ ಕ್ರೀಡಾ ಪಟುಗಳು ಸ್ಮರ್ಧಾತ್ಮಕವಾಗಿ ಪಾಲ್ಗೊಳ್ಳುವ ಮೂಲಕ ಪಂದ್ಯಾ ವಳಿಯನ್ನು ಯಶಸ್ವಿಗೊಳಿಸಬೇ ಕೆಂದು ಜಿ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದರು .
ಜಿ ಸ್ವೀಪ್ ಸಮಿತಿ ವತಿ ಯಿಂದ ಇಂದು ನಗರದ ಎನ್‌ಇ ಎಸ್ ಮೈದಾನದಲ್ಲಿ ವಿವಿಧ ಇಲಾ ಖೆಗಳ ತಂಡಗಳಿಗೆ ಆಯೋಜಿಸಲಾ ಗಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂ ದ್ಯಾವಳಿ-ಸ್ವೀಪ್ ಕಪ್ ನ್ನು ಉದ್ಘಾ ಟಿಸಿ ಅವರು ಮಾತನಾಡಿದರು.
ಮತದಾನ ಜಗೃತಿಗಾಗಿ ಜಿ ಯಲ್ಲಿ ವಾಕಥಾನ್, ಜಥಾಗಳು, ರ್ಯಾಲಿಗಳು, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಕ್ರೀಡಾ ಮನೊ ಭಾವದ ಮೂಲಕ ಜಗೃತಿ ಮೂಡಿಸುವ ಸ್ವೀಪ್ ಕಪ್ ಒಂದು ವಿಭಿನ್ನ ಚಟುವಟಿಕೆಯಾಗಿದ್ದು ಎಲ್ಲರೂ ಉತ್ಸಾಹದಿಂದ ಪಾಲ್ಗೊ ಂಡು ಪಂದ್ಯಾವಳಿಯನ್ನು ಯಶಸ್ವಿ ಗೊಳಿಸಬೇಕು. ಜಿಯಲ್ಲಿ ಎಲ್ಲ ಮತದಾರರು ಕಡ್ಡಾಯವಾಗಿ ಮತ ದಾನ ಮಾಡುವ ಮೂಲಕ ಶೇ. ೧೦೦ ಮತದಾನ ಆಗಬೇಕು ಎಂದರು.
ಜಿ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಮಾತ ನಾಡಿ, ಮತದಾನ ಜಗೃತಿ ಕುರಿತು ಜಿಯಲ್ಲಿ ಅತ್ಯಂತ ಕ್ರಿಯಾಶೀಲ ವಾಗಿ ಚಟುವಟಿಕೆಗಳನ್ನು ಕೈಗೊ ಳ್ಳುತ್ತಿದ್ದು ಅದರಲ್ಲಿ ಸ್ವೀಪ್ ಕಪ್ ಕೂಡ ಒಂದಾಗಿದೆ. ಸ್ಪರ್ಧಾಳು ಗಳೆಲ್ಲ ಸ್ಪರ್ಧಾ ಮನೋಭಾವ ದಿಂದ ಪಂದ್ಯಾವಳಿಯಲ್ಲಿ ಪಾಲ್ಗೊ ಂಡು ಮತದಾನ ಕುರಿತು ಜಗೃತಿ ಮೂಡಿಸಬೇಕು. ಎಲ್ಲ ಮತದಾ ರರು ಮತದಾನ ಮಾಡುವ ಮೂಲಕ ಜಿಯು ಮಾದರಿಯಾ ಗಬೇಕೆಂದು ಆಶಿಸಿದರು.
ಮಹಾನಗರಪಾಲಿಕೆ ಆಯುಕ್ತ ರಾದ ಮಾಯಣ್ಣಗೌಡ ಮಾತ ನಾಡಿ, ಮತದಾನ ಜಗೃತಿ ಕುರಿತು ಸ್ವೀಪ್ ವತಿಯಿಂದ ವಿಶಿಷ್ಟ, ವಿಭಿನ್ನ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದ್ದು, ಮೇ ೭ ರಂದು ಎಲ್ಲ ಮತದಾರರು ಕಡ್ಡಾ ಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿ ಸಬೇಕು. ಸದೃಢ ಪ್ರಜಪ್ರಭು ತ್ವಕ್ಕಾಗಿ ನಾವೆಲ್ಲರೂ ಮತದಾನ ಮಾಡಬೇಕು. ಎಂದರು.
ಎ ವಿಭಾಗದಲ್ಲಿ ಗ್ರಾಮೀಣಾ ಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಗಳ ಇಲಾಖೆ ನಡುವೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಹಾಗೂ ಕಂದಾಯ ಇಲಾಖೆ ಮತ್ತು ವಾರ್ತಾ ಮತ್ತು ಸಾರ್ವಜ ನಿಕ ಸಂಪರ್ಕ ಇಲಾಖೆ ನಡುವೆ ಪಂದ್ಯಾವಳಿ ನಡೆಯವುದು.
ಬಿವಿಭಾಗದಲ್ಲಿ ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆ, ಮಂಗಳೂರು ವಿದ್ಯುಚ್ಚಕ್ತಿ ನಿಗಮ ಮತ್ತು ಪೊಲೀಸ್ ಇಲಾಖೆ ಹಾಗೂ ರಾಜ್ಯ ಲೆಕ್ಕಪತ್ರ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ನಡುವೆ ಪಂದ್ಯಾವಳಿ ನಡೆಯುವುದು.
ಕಾರ್ಯಕ್ರಮದಲ್ಲಿ ರಾಷ್ಟ್ರೀ ಯ ಮಟ್ಟದ ಕ್ರಿಕೆಟ್ ಕ್ರೀಡಾಪಟು ಅದಿತಿ, ಕೆಎಸ್‌ಆರ್‍ಪಿ ಕಮಾಂಡೆಂಟ್ ಯುವಕುಮಾರ್, ಜಿ.ಪಂ ಯೋ ಜನಾ ನಿರ್ದೇಶಕ ರಂಗಸ್ವಾಮಿ, ಜಿ.ಪಂ ಸಿಪಿಓ ಗಾಯತ್ರಿ, ವಾರ್ತಾ ಧಿಕಾರಿ ರಾಜು, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜು ನಾಥಸ್ವಾಮಿ, ರಾಜ್ಯ ಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹ್ಮದ್ ಪರ್ವೇಜ್ ವಿವಿಧ ಇಲಾ ಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *