ತೀರ್ಥಹಳ್ಳಿ : ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿ!
ತೀರ್ಥಹಳ್ಳಿ : ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಜಿಯ ದೇವಸ್ಥಾನಗಳ ವಿಷ್ವಸ್ತರು ಅರ್ಚಕರನ್ನು ಒಟ್ಟು ಗೂಡಿಸುವ ನಿಟ್ಟಿನಲ್ಲಿ ತೀರ್ಥಹಳ್ಳಿಯಲ್ಲಿ ಅಧಿವೇಶನ ನಡೆಸುವ ಉದ್ದೇಶದಿಂದ ಪೂರ್ವಭಾವಿಯಾಗಿ ಅಲ್ಲಿನ ನಗರ ಭಾಗದ ಎ ದೇವಸ್ಥಾನಗಳ ವಿಶ್ವಸ್ತರು ಮತ್ತು ಅರ್ಚಕರನ್ನು ಸೇರಿಸಿ ಇಲ್ಲಿನ ದೇವಸ್ಥಾನಗಳಾದ ಶ್ರೀ ಸಾಂಬಸದಶಿವ, ಶ್ರೀ ಮಹಿಷಮರ್ದಿನಿ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಫಲಕಗಳನ್ನು ಅಳವಡಿಸಿ ದೇವಸ್ಥಾನಗಳ ಪಾವಿತ್ರತೆ ಉಳಿಸು ವಂತೆ ತಿಳಿಸಿ, ಎ ದೇವಸ್ಥಾನಗಳ ವಿಶ್ವಸ್ತರು, ಅರ್ಚುಕರು ಸಂಘಟಿರಾಗಬೇಕು ಮತ್ತು ಎ ದೇವಸ್ಥಾನಗಳು ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕಿದೆ, ಈಗಾಗಲೇ ಶಿಕಾರಿಪುರ, ಸಾಗರದಲ್ಲಿ ಇಂತಹ ಸಭೆ ನಡೆಸಿದ್ದು, ಇದರ ಮುಂದು ವರಿದ ಭಾಗವಗಿ ದಾವಣಗೆರೆ ಯಲ್ಲೂ ಸಭೆ ನಡೆಸಿದ್ದು, ಮಾ.೩ರ ಭಾನುವಾರ ಶಿವಮೊಗ್ಗದಲ್ಲಿ ದೇವಸ್ಥಾನ ವಿಶ್ವಸ್ಥರು, ಅರ್ಚಕರ ಸಭೆ ನಡೆಸಲಿದ್ದು ಜಿಯ ಎ ತಾಲ್ಲೂಕುಗಳಲ್ಲಿ ಇದೆ ರೀತಿ ಸಭೆ ನಡೆಸಲಾಗುವುದು ಎಂದು ವಿಜಯ ರೇವಣಕರ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕಟ್ಟಿನಗz ಶ್ರೀ ಸಾಂಬಸದಶಿವ ದೇವಸ್ಥಾನ ಅಧ್ಯಕ್ಷ ಸುಬ್ರಮಣ್ಯ, ಕಾರ್ಯದರ್ಶಿ ಸೌ. ಗೀತಾ ವಿ ಹೆಗಡೆ ಸಹಕಾರ್ಯದರ್ಶಿ ಕನಕ ಶಶಿಧರ್ ಭಟ್, ಖಜಂಚಿ ರಾಜಶೇಖರ್, ಗೌರವಾಧ್ಯಕ್ಷ ಗುಂಡಣ್ಣ ಇನ್ನಿತರರು ಉಪಸ್ಥಿತರಿದ್ದರು.