ಜಿಲ್ಲಾ ಸುದ್ದಿತಾಜಾ ಸುದ್ದಿ

ಮುಳುಗಡೆ ಸಂತ್ರಸ್ಥರ ಒಕ್ಕಲೆಬ್ಬಿಸುವ ಕೆಲಸ ತಕ್ಷಣ ನಿಲ್ಲಿಸಿ…

Share Below Link

ಶಿವಮೊಗ್ಗ: ಮುಳುಗಡೆ ಸಂತ್ರಸ್ತರ ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು. ಸರ್ಕಾರದ ತೀರ್ಮಾನ ಆಗುವವರೆಗೂ ಸಂತ್ರಸ್ತರ ಜಮೀನುಗಳನ್ನು ಆಕ್ರಮಿಸಿಕೊಳ್ಳಬಾರದು ಎಂದು ಅಪೆ? ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಜಿಪಂ ಮಾಜಿ ಸದಸ್ಯ ಬಿ.ಆರ್. ಜಯಂತ್ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿಂದು ಆಗ್ರಹಿಸಿದರು.
ಆರ್‌ಎಂ ಮಂಜುನಾಥ ಗೌಡ ಅವರು ಮಾತನಾಡಿ, ಶರಾವತಿ, ಚಕ್ರ, ಸಾವೆಹಕ್ಲು, ಮುಂತಾದ ಮುಳುಗಡೆ ಪ್ರದೇಶದ ರೈತರು ಜಿಯ ವಿವಿಧ ತಾಲೂಕುಗಳಲ್ಲಿ ಸರ್ಕಾರದ ವಿವಿಧ ಆದೇಶಗಳ ಮೂಲಕ ೧೯೫೯-೬೯ರ ಮಧ್ಯದ ಅವಧಿಯಲ್ಲಿ ಸುಮಾರು ೯,೯೩೪ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿಕೊಂಡಿರುತ್ತಾರೆ. ಈ ಅರಣ್ಯ ಜಮೀನುಗಳು ಕಂದಾಯ ಇಲಾಖೆಗೆ ಹಸ್ತಾಂತರವಾಗಿವೆ. ಆದರೆ ಅರಣ್ಯ ಸಂರಕ್ಷಣಾ ಕಾಯಿದೆ ೧೯೮೦ರ ಪ್ರಕಾರ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಹೈಕೋರ್ಟ್ ಸರ್ಕಾರದ ಕ್ರಮವನ್ನು ವಜಗೊಳಿಸಿರುತ್ತದೆ ಎಂದರು.
ಇದರಿಂದ ಅರಣ್ಯ ಇಲಾಖೆ ಯವರು ಮಾನವಿಯತೆ ಇಲ್ಲದೆ ಸಾಗುವಳಿದಾರರ ಜಮೀನುಗಳನ್ನು ವಶಪಡಿಸಿಕೊಳ್ಳುವುದು, ಬೇಲಿ ಕೀಳುವುದು, ಕೇಸು ದಾಖಲಿಸು ವುದು ಸೇರಿದಂತೆ ಕಿರುಕುಳ ನೀಡುತ್ತಾ ಬಂದಿzರೆ. ಕೇಂದ್ರ ಸರ್ಕಾರ ಕೂಡ ಇದನ್ನು ಗಂಭೀರ ವಾಗಿ ತೆಗೆದುಕೊಳ್ಳಲಿಲ್ಲ. ಕಾಗೋಡು ತಿಮ್ಮಪ್ಪನವರು ಪ್ರಯತ್ನಿಸಿದರೂ ಕೂಡ ಕಾಯಿದೆ ಆಗಲಿಲ್ಲ. ಸುಮಾರು ೬೫ ವರ್ಷಗಳಿಂದ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ ಎಂದರು.
ಅರಣ್ಯ ಅಧಿಕಾರಿಗಳು ಕೂಡ ಮಾನವೀಯತೆ ಇಲ್ಲದೆ ರೈತರ ವಿರುದ್ದ ದಬ್ಬಾಳಿಕೆ ನಡೆಸುತ್ತಿzರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ಕೂಡ ಬಿಜೆಪಿ ಸರ್ಕಾರದ ಗುಂಗಿನ ಲ್ಲಿಯೇ ಇನ್ನೂ ಇzರೆ. ಈಗಾಗಲೇ ಜಿ ಉಸ್ತುವಾರಿ ಸಚಿವರು ಹಲವು ಬಾರಿ ಸಂತ್ರಸ್ತರ ಸಮಸ್ಯೆ ಗಳಿಗೆ ಸಂಬಂಧಿಸಿದಂತೆ ಸಭೆಗಳನ್ನು ನಡೆಸಿzರೆ. ಸೆ.೧೪ರಂದು ಉನ್ನತ ಮಟ್ಟದ ಸಭೆ ನಡೆಸಲಿzರೆ ಎಂದರು.
ನಂತರ ಮಾತನಾಡಿದ ಬಿ.ಆರ್. ಜಯಂತ್, ಮುಳುಗಡೆ ಸಂತ್ರಸ್ತರಿಗೆ ಆಶಾಕಿರಣದಂತೆ ಲೋಕಸಭೆಯಲ್ಲಿ ಅರಣ್ಯ ಸಂರಕ್ಷಣಾ ಕಾಯಿದೆ ೧೯೮೦ಕ್ಕೆ ಆ.೪ರಂದು ತಿದ್ದುಪಡಿಯಾಗಿ ಗೆಜೆಟ್ ನೋಟಿಫಿಕೇಷನ್ ಕೂಡ ಆಗಿದೆ. ಇದರ ಅನ್ವಯ ಸೆಕ್ಷನ್ ೪, ೧ (ಎ) ಮತ್ತು ಬಿ ಕಲಂಗಳಲ್ಲಿ ವಿವಿರಿಸಿದ ಅರಣ್ಯ ಭೂಮಿ ಮಾತ್ರ ಕಾಯಿದೆಯ ಪ್ರಕಾರ ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ೧೯೯೬ ಡಿಸೆಂಬರ್ ೧೨ರಂದು ಅಥವಾ ಅದಕ್ಕಿಂತ ಮುಂಚೆ ರಾಜ್ಯ ಸರ್ಕಾರ ಗಳು ಅರಣ್ಯೇತರ ಉದ್ದೇಶಕ್ಕಾಗಿ ಬಿಡುಗಡೆಗೊಳಿಸಿದ ಅರಣ್ಯಭೂಮಿ ತಿದ್ದುಪಡಿ ಕಾಯಿದೆ ೧೯೮೦ರಿಂದ ಹೊರಗಿಡಲಾಗಿದೆ. ಅಂದರೆ ಅದನ್ನು ಕೈಬಿಡಲಾಗಿದೆ ಎಂದರು.
ಈ ಕಾನೂನಿ ಅನ್ವಯ ಓಡಿಸ್ಸಾ ಸರ್ಕಾರ ಈಗಾಗಲೇ ತನ್ನ ರಾಜ್ಯ ದಲ್ಲಿ ಇದಕ್ಕೆ ಜೀವ ನೀಡಿ ಜರಿಗೆ ತಂದಿದೆ. ಅದೇ ಕಾನೂನನ್ನು ದೇಶದ ಎ ರಾಜ್ಯಗಳಿಗೂ ವಿಸ್ತರಿಸಬಹು ದಾಗಿದೆ. ಕರ್ನಾಟಕ ಸರ್ಕಾರ ಕೂಡ ಈ ಕಾಯಿದೆಯ ಅನ್ವಯ ರಾಜ್ಯದ ಮುಳುಗಡೆ ಸಂತ್ರಸ್ತರಿಗೆ ನ್ಯಾಯ ಒದಗಿಸಬಹುದಾಗಿದೆ. ಮತ್ತು ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ೧೯೫೯ ಮತ್ತು ೬೯ರ ಮಧ್ಯದಲ್ಲಿ ೯೯೩೪ ಎಕರೆ ಅರಣ್ಯ ಭೂಮಿಯನ್ನು ಅರಣ್ಯ ಸಂರಕ್ಷಣಾ ಕಾಯಿದೆಯಿಂದ ಹೊರತುಪಡಿಸಲಾಗಿದ್ದು, ರಾಜ್ಯ ಸರ್ಕಾರ ಭೂಮಿ ಹಂಚಿಕೆಗೆ ಕ್ರಮ ಕೈಗೊಳ್ಳಬೇಕು ಎಂದರು.
ಹಾಗೆಯೇ ಈ ತಿದ್ದುಪಡಿ ಕಾಯಿದೆ ಅನ್ವಯ ಡೀಮ್ಡ್ ಫಾರೆಸ್ಟ್ ಎಂದು ಕಂದಾಯ ಇಲಾಖೆಗೆ ಸೇರಿದ್ದ ಸೊಪ್ಪಿನಬೆಟ್ಟ, ಖುಷ್ಕಿ, ಬ್ಯಾಣ, ಕಾನು ಇತ್ಯಾದಿ ಭೂಮಿ ಯನ್ನು ಕಾಯಿದೆಯಿಂದ ಹೊರಗಿಡ ಲಾಗಿದೆ. ಆದ್ದರಿಂದ ಈ ಭೂಮಿ ಯನ್ನು ಕೂಡ ಕಂದಾಯ ಇಲಾಖೆ ವ್ಯಾಪ್ತಿಗೆ ತಂದು ಸಂತ್ರಸ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ದುಗ್ಗಪ್ಪ ಗೌಡ, ಚಂದ್ರಭೂಪಾಲ್, ಮಂಜುನಾಥ ಬಾಬು ಮತ್ತು ಮುಳುಗಡೆ ಸಂತ್ರಸ್ತರು ಉಪಸ್ಥಿತರಿದ್ದರು.