ಜಿಲ್ಲಾ ಸುದ್ದಿತಾಜಾ ಸುದ್ದಿ

ಮೂರನೇ ದಿನಕ್ಕೆ ಕಾಲಿಟ್ಟ ವೈದ್ಯರ ಪ್ರತಿಭಟನೆ

Share Below Link

ಶಿವಮೊಗ್ಗ : ದೇಶದಾದ್ಯಂತ ವೃತ್ತಿನಿರತ ವೈದ್ಯರ ಸುರಕ್ಷತೆಗಾಗಿ ಭಾರತ ಸರ್ಕಾರ ಕೇಂದ್ರ ರಕ್ಷಣಾ ಕಾಯ್ದೆಯನ್ನು ಶೀಘ್ರ ಜರಿಗೊಳಿಸ ಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಮಹಾ ವಿದ್ಯಾಲಯ ಪ್ರಾಂಶುಪಾಲ ಡಾ. ಸಿದ್ದಲಿಂಗಪ್ಪ ಆಗ್ರಹಿಸಿದರು.
ಕೋಲ್ಕತ್ತಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ೩೧ ವರ್ಷದ ತರಬೇತಿಯಲ್ಲಿದ್ದ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ನಡೆಸಿರುವ ಘಟನೆ ವಿರೋಧಿಸಿ ಕಾಲೇಜಿನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಅವರು ಮಾತ ನಾಡುತ್ತಾ, ದೇಶದಲ್ಲಿ ಪ್ರತಿದಿನ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳ ಮೇಲೆ ದೌರ್ಜನ್ಯ ಹೆಚ್ಚಳವಾಗುತ್ತಿದೆ. ಹೀಗಾಗಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೈದ್ಯರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದರು.
ಕಾಯಿದೆಯ ಕರಡು ರಚನೆ ಮತ್ತು ಅನುಷ್ಠಾನದ ಮೇಲ್ವಿಚಾ ರಣೆಗೆ ತಜ್ಞರ ಸಮಿತಿ ರಚಿಸಬೇಕು. ಸಮಿತಿಯು ವೈದ್ಯಕೀಯ ಸಮು ದಾಯದ ಪ್ರತಿನಿಧಿಗಳು, ಕಾನೂನು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡಿರು ವುದು ಸೂಕ್ತವಾಗಿದೆ ಎಂದರಲ್ಲದೆ, ವೈದ್ಯರ ರಕ್ಷಣೆಗಾಗಿ ಕಠಿಣ ಕಾನೂನು ಶೀಘ್ರ ಜರಿಗೊಳಿಸ ಬೇಕು ಹಾಗೂ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಮಾಡಬೇಕು ಎಂದು ಆಗ್ರಹಿಸಿ, ಮನವಿಪತ್ರವನ್ನು ಕೇಂದ್ರ ಕುಟುಂಬ ಮತ್ತು ಕಲ್ಯಾಣ ಸಚಿ ವಾಲಯಕ್ಕೆ ರವಾನಿಸಲಾಯಿತು.
ಅಸೋಸಿಯೇಟ್ ಪ್ರೊಫೆಸರ್ ಡಾ.ಶಿಲ್ಪಾಶೆಟ್ಟಿ, ಪೆಥಾಲಜಿ ವಿಭಾಗದ ಡಾ.ಎಸ್.ಎಂ. ಕಾಂತಿಕರ್, ಮಕ್ಕಳ ವಿಭಾಗದ ಪ್ರೊ. ಭಾವನಾ ಮಾತನಾಡಿದರು.
ಹತ್ಯೆಗೆ ಒಳಗಾದ ವೈದ್ಯೆಯ ಆತ್ಮಕ್ಕೆ ಶಾಂತಿ ಕೋರಿ ಮೇಣದ ಬತ್ತಿ ಹಚ್ಚಿ , ಒಂದು ನಿಮಿಷ ಮನಾಚ ರಣೆ ಮಾಡಿ ಪ್ರಾರ್ಥಿಸಲಾಯಿತು.