ರೋಟರಿ ಮಲೆನಾಡು ಸಂಸ್ಥೆಯಿಂದ ಶಿಕ್ಷಕರಿಗೆ ಸನ್ಮಾನ…
ಶಿವಮೊಗ್ಗ: ಶಿಕ್ಷಕರು ಕೇವಲ ಪಾಠ ಮಾಡುವುದಕ್ಕೆ ಮಾತ್ರ ಸೀಮಿತವಲ್ಲ, ಮಕ್ಕಳ ಸರ್ವ ತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರು ಮಹತ್ತರ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ಉತ್ತಮ ರೀತಿ ಶಿಕ್ಷಣ ನೀಡುವುದು ಶಿಕ್ಷಕರ ಜವಾಬ್ದಾರಿ ಎಂದು ಕಮಲಾ ನೆಹರು ಕಾಲೇಜಿನ ಉಪನ್ಯಾಸಕಿ ರೂಪಾ ಎಸ್.ಎನ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪ್ರತಿಯೊಂದು ಹಂತದಲ್ಲಿಯೂ ಮಕ್ಕಳನ್ನು ಅರ್ಥ ಮಾಡಿಕೊಂಡು ಶಿಕ್ಷಕರು ಸರಿ ಯಾದ ರೀತಿಯಲ್ಲಿ ಮಾರ್ಗ ದರ್ಶ ನ ಮಾಡಬೇಕು ಎಂದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ವಿದ್ಯಾ ರ್ಥಿಗಳು ಕ್ರೀಡಾ ಇಲಾಖೆಯಿಂದ ಸಿಗುವ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿ ದರು. ಕ್ರೀಡಾ ಹಾಸ್ಟೆಲ್ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ಅಧ್ಯಕ್ಷ ಸಿ.ರಾಜು ಮಾತನಾಡಿ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ತರ ಆಗಿದ್ದು, ಶಿಕ್ಷಕರ ಮಾರ್ಗದರ್ಶನದಿಂದ ವಿದ್ಯಾರ್ಥಿ ಗಳು ಉನ್ನತ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ವಾಣಿಶ್ರೀ, ರೂಪಾ., ಯಶೋಮತಿ, ಶ್ರೀಕಾಂತ್.ಎ.ವಿ., ಮಮತಾ ಆರ್., ಅಲೇಖ ., ಡಾ. ಕಲೀಂ ಉ, ಸಿದ್ದಲಿಂಗಮೂರ್ತಿ, ಮಹಾದೇವಿ ಅವರನ್ನು ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು.
ಅಭಿನಂದನೆ ಸ್ವೀಕರಿಸಿದ ಡಾ. ಕಲೀಂ ಉ ವಿಶೇಷ ನಗೆ ಭಾಷಣ ಮಾಡಿದರು. ಡಿಪ್ಲೋಮಾ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಗೆ ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ವತಿಯಿಂದ ನೆರವು ನೀಡಲಾಯಿತು.
ಡಾ. ಸಿದ್ದಲಿಂಗಮೂರ್ತಿ, ಮಂಜುಳಾ ರಾಜು, ರೋಟರಿ ಪಿಡಿಜಿ ಎಚ್.ಎಲ್.ರವಿ, ಕಾರ್‍ಯ ದರ್ಶಿ ಪ್ರಕಾಶ್ ಮೂರ್ತಿ, ಪಾಂಡು ರಂಗ, ಮುಸ್ತಕ್, ಮಸೂದ್, ಚನ್ನಬಸವಗೌಡ, ಸದಸ್ಯರು ಹಾಗೂ ಮತ್ತಿತರರು ಇದ್ದರು.