ರಾಜ್ಯ ಸರ್ಕಾರದ ಜಾತಿ ಸಮೀಕ್ಷೆ ಅಸಂಹಿಧಾನಿಕ: ಚಿನ್ನಿ ಆಕ್ರೋಶ
ಶಿವಮೊಗ್ಗ : ರಾಜ್ಯ ಸರ್ಕಾರಕ್ಕೆ ಜತಿಗಣತಿಗೆ ಅಧಿಕಾರವಿಲ್ಲ. ಆ ಕೆಲಸ ಕೇಂದ್ರ ಸರ್ಕಾರ ಮಾಡುತ್ತದೆ. ಕಾನೂನನ್ನು ಮೀರಿ ರಾಜ್ಯ ಸರ್ಕಾರ ಜತಿ ಸಮೀಕ್ಷೆ ಮಾಡಲು ಹೊರಟಿರು ವುದು ಅಸಂಹಿಧಾನಿಕ ಎಂದು ಶಾಸಕ ಚನ್ನಬಸಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಆಕ್ರೋಶ ಹೊರಹಾಕಿದ ಅವರು, ಕಾಂಗ್ರೆಸ್ ಸರ್ಕಾರ ಪ್ರತಿಭಾರಿಯೂ ಆಡಳಿತಕ್ಕೆ ಬಂದಾಗ ಏನಾದರೊಂದು ಮಣ್ಣು ತಿನ್ನುವ ಕೆಲಸ ಮಾಡುತ್ತದೆ. ಇದು ಬಹುಸಂಖ್ಯಾತ ಹಿಂದೂಗಳ ರಾಷ್ಟ್ರ. ಧರ್ಮಾಧಾರಿತವಾಗಿ ರಾಷ್ಟ್ರ ಒಡೆದ ಮೇಲೂ ಇನ್ನೂ ಮತ್ತೊಮ್ಮೆ ರಾಷ್ಟ್ರ ಒಡೆಯುವ ಹುನ್ನಾರವನ್ನು ಕಾಂಗ್ರೆಸ್ ಮಾಡುತ್ತಿದ್ದು, ಹಿಂದೂಗಳನ್ನು ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಧರ್ಮ ಎಂದು ಬರೆಯಿಸಬೇಕು ಎಂದು ಮನವಿ ಮಾಡಿದ ಅವರು, ಹಿಂದೂ ಧರ್ಮದ ಎ ಜತಿಯ ಮುಖಂಡರಲ್ಲಿ ನಾನು ಕೈಮುಗಿದು ಪ್ರಾರ್ಥಿಸುತ್ತೇನೆ. ಈ ಸರ್ಕಾರ ಹಿಂದೂ ಧರ್ಮ ದವರನ್ನು ಬ್ರಾಹ್ಮಣ ಕ್ರಿಶ್ಚಿಯನ್, ಮಾದಿಗ ಕ್ರಿಶ್ಚಿಯನ್, ಮಡಿವಾಳ ಕ್ರಿಶ್ಚಿಯನ್ ಎಂದು ಬರೆಯಿಸಿ, ೫೧ ಅಧಿಕ ಉಪಜತಿಗಳನ್ನು ಕ್ರಿಶ್ಚಿಯನ್ ಜೊತೆಗೆ ಸೇರಿಸಿ ಹಿಂದೂಗಳಲ್ಲಿ ಗೊಂದಲ ಮೂಡಿಸಿ, ಮತಾಂತರ ಮಾಡಲು ಹೊರಟಿದೆ. ತಮ್ಮ ಅಧಿನಾಯಕಿ ಸೋನಿಯಾಗಾಂಧಿಯವರನ್ನು ತೃಪ್ತಿಪಡಿಸಲು ಜತಿ ಗಣತಿಯ ಕಾಲಂನಲ್ಲಿ ಸರ್ಕಾರವೇ ಕ್ರಿಶ್ಚಿಯನ್ ಎಂದು ಕಾಲಂಗಳನ್ನು ಸೃಷ್ಟಿಸಿ, ಹಿಂದೂಗಳನ್ನು ಬುಡಮೇಲು ಮಾಡುವ ಕೆಲಸಕ್ಕೆ ಹೊರಟಿದ್ದು, ಸಕಲ ಸಮಾಜದ ಬಂಧುಗಳು ಸರ್ಕಾರದ ಈ ಹುನ್ನಾರಕ್ಕೆ ಬಲಿಯಾಗದೆ ಧರ್ಮದ ಕಾಲಂ ನಲ್ಲಿ ಹಿಂದೂಧರ್ಮ ಎಂದೇ ಬರೆಯಿರಿ ಎಂದರು.

ಇದಕ್ಕೆ ಎ ಸಮಾಜದ ಮುಖಂಡರು ಮತ್ತು ಮಠಾಧೀಶರುಗಳು ಬೆಂಬಲ ಸೂಚಿಸಬೇಕು. ಹಿಂದೂಗಳಲ್ಲಿ ಜಗೃತಿ ಮೂಡಿಸ ಬೇಕು ಎಂದ ಅವರು, ಈ ಸರ್ಕಾರ ಸಮಾಜ ಚೆನ್ನಾಗಿರಬೇಕೆಂಬ ಮನಸ್ಥಿತಿಯಲ್ಲಿ ಇಲ್ಲ, ಇವರು ಧರ್ಮ ವಿರೋಧಿಗಳು, ರಾಷ್ಟ್ರವಿರೋಧಿಗಳು ಆಗಿzರೆ. ಇದು ಹಿಂದೂ-ಮುಸಲ್ಮಾನ್ ಪ್ರಶ್ನೆ ಅಲ್ಲ, ನಮ್ಮ ನಂಬಿಕೆಯ ಪ್ರಶ್ನೆ ಎಂದರು.
ವೋಟ್ ಚೋರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಅದನ್ನು ನ್ಯಾಯಾಲಯವೇ ಮಾಲೂರು ಶಾಸಕರ ಬಗ್ಗೆ ಆಯ್ಕೆ ಅಸಿಂಧು ಎಂದು ಹೇಳಿದ್ದು, ಮರು ಎಣಿಕೆಗೆ ಆದೇಶ ನೀಡಿದೆ. ಹಿಂದೆ ಇದೇ ಕಾಂಗ್ರೆಸ್ನ ಅಧಿನಾಯಕಿ ಇಂದಿರಾ ಗಾಂಧಿಯವರು ಅವರ ಆಯ್ಕೆಯನ್ನು ಅಸಿಂಧು ಎಂದು ನ್ಯಾಯಾಲಯ ಎಂದಾಗ ಆ ತೀರ್ಪನ್ನು ಧಿಕ್ಕರಿಸಿ ತುರ್ತು ಪರಿಸ್ಥಿತಿ ಹೇರಿದ್ದು ಯಾರು ಎಂದು ಪ್ರಶ್ನಿಸಿದರು.
ರಾಹುಲ್ಗಾಂಧಿ ಬಹಿರಂಗ ವಾಗಿ ಗಾಳಿಯಲ್ಲಿ ಗುಂಡು ಹೊಡೆಯುತ್ತಾ ದೇಶಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿzರೆ. ಇದೂವರೆಗೆ ಸೂಕ್ತ ದಾಖಲೆಯನ್ನು ಒದಗಿಸಿಲ್ಲ. ರಾಹುಲ್ ಅವರ ಇಂತಹ ಕೀಳುಮಟ್ಟದ ಅಪಪ್ರಚಾರವೇ ಅವರದ್ದೇ ಪಕ್ಷಕ್ಕೆ ಕಾರಣವಾಗುತ್ತಿದೆ ಎಂದರು.
ಸೂಡಾ ಮಾಜಿ ಅಧ್ಯಕ್ಷ ಎನ್. ಜೆ. ನಾಗರಾಜ್, ಕೆ. ಮಂಜು ನಾಥ್, ಶ್ರೀನಾಗ್ ಇದ್ದರು.


