ಕ್ರೀಡೆಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕಾರಿಪುರ: ಮಾರ್ಷಲ್ ಆಟ್ಸ್ ಅಕಾಡೆಮಿ ಅಸ್ಥಿತ್ವಕ್ಕೆ

Share Below Link

ಶಿಕಾರಿಪುರ : ಬಾಲ್ಯದಿಂದಲೇ ಮಾರ್ಷಲ್ ಆರ್ಟ್ಸ ಬಗ್ಗೆ ಸೂಕ್ತ ತರಬೇತಿ ದೊರೆತಲ್ಲಿ ದೈಹಿಕ ಸದೃಡತೆ ಜತೆಗೆ ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾ ಕೋಟಾದಡಿ ಹೆಚ್ಚಿನ ಅವಕಾಶವಿದ್ದು ಸದ್ಬಳಕೆ ಮಾಡಿಕೊಳ್ಳುವಂತೆ ಎಕ್ಸ್‌ಟ್ರೀಮ್ ಮಾರ್ಷಲ್ ಆರ್ಟ ಅಕಾಡೆಮಿ ಕಾರ್ಯದರ್ಶಿ ಅಂಬೇಡ್ಕರ್ ಬೋಧ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕರಾಟೆ ಮೂಲತಃ ಭಾರತೀಯರು ಜಗತ್ತಿಗೆ ನೀಡಿದ ಬಹು ದೊಡ್ಡ ಆತ್ಮರಕ್ಷಣೆಯ ವಿದ್ಯೆಯಾಗಿದ್ದು ಕೇರಳದ ಕಲರಿಪಾಳ್ಯದ ಮೂಲಕ ನೂರಾರು ವರ್ಷಗಳ ಹಿಂದೆ ಜಗತಿತಿಗೆ ಪರಿಚಯಿಸಿದ ಹಿರಿಮೆಯನ್ನು ದೇಶ ಹೊಂದಿದೆ ಎಂದು ತಿಳಿಸಿದ ಅವರು, ಮಾರ್ಷಲ್ ಆರ್ಟ್ಸ ನಲ್ಲಿ ಕರಾಟೆ ಜತೆಗೆ ಕೂಡೋ, ಕುಂಫು ಜ್ಯುಡೋ, ಬಾಕ್ಸಿಂಗ್, ಕಿಕ್‌ಬಾಕ್ಸಿಂಗ್ ಒಳಗೊಂಡಿದ್ದು ಕೇಂದ್ರ ಸರ್ಕಾರ ಈ ಎಲ್ಲ ಕ್ರೀಡೆಗಳಿಗೆ ಮಾನ್ಯತೆ ನೀಡಿ ಕ್ರೀಡಾ ಕೋಟಾದಡಿ ವಿಶೇಷವಾಗಿ ಪರಿಗಣಿಸಲಿದೆ ಎಂದು ತಿಳಿಸಿದರು.
೬ ರಿಂದ ೫೦ ವರ್ಷ ವಯೋಮಿತಿಯ ಪ್ರತಿಯೊಬ್ಬರೂ ಮಾರ್ಷಲ್ ಆರ್ಟ್ಸ ತರಬೇತಿ ಶಾಲೆಗೆ ದಾಖಲಾಗುವ ಅರ್ಹತೆ ಯನ್ನು ಹೊಂದಿದ್ದಾರೆ ಎಂದು ತಿಳಿಸಿದ ಅವರು, ೧೯೮೭ರಲ್ಲಿ ರಾಜ್ಯದಲ್ಲಿ ಆರಂಭವಾದ ಎಕ್ಸ್‌ಟ್ರೀಮ್ ಮಾರ್ಷಲ್ ಆರ್ಟ ಆಕಾಡೆಮಿ ೫೦ ಸಾವಿರ ಅಧಿಕ ವಿದ್ಯಾರ್ಥಿಗಳ ಬಹು ದೊಡ್ಡ ತರಬೇತಿ ಶಾಲೆಯಾಗಿದ್ದು ಕೇಂದ್ರದಿಂದ ಮಾನ್ಯತೆ ಪಡೆದಿದೆ. ನಟ ಅಕ್ಷಯ್ ಕುಮಾರ್ ಅಧ್ಯಕ್ಷರಾಗಿರುವ ಕುಡೋ ಅಸೋಸಿಯೇಶನ್ ಅಂಗ ಸಂಸ್ಥೆಯಾಗಿ ೧೮ ರಾಜ್ಯದಲ್ಲಿ ಸಕ್ರೀಯವಾಗಿ ದೈಹಿಕ ಸದೃಡತೆಯ ಯುವಪೀಳಿಗೆಯನ್ನು ಸಿದ್ದಗೊಳಿಸುತ್ತಿರುವ ಮಾರ್ಷಲ್ ಆರ್ಟ್ಸ ಅಕಾಡೆಮಿಯ ತರಬೇತಿ ಕೇಂದ್ರ ೨೦೨೩ರ ಅಂತ್ಯಕ್ಕೆ ದೇಶಾದ್ಯಂತ ವಿಸ್ತರಿಸುವ ಗುರಿ ಹೊಂದಿದೆ. ಇದೀಗ ಶಿಕಾರಿಪುರ ಪಟ್ಟಣದ ನ್ಯಾಯಾಲಯದ ಸಮೀಪದಲ್ಲಿರುವ ಶರಾವತಿ ಗ್ಯಾಸ್ ಏಜೆನ್ಸಿ ಕಟ್ಟಡದ ೨ನೇ ಅಂತಸ್ತಿನಲ್ಲಿ ನೂತನವಾಗಿ ಆರಂಭಗೊಂಡಿದೆ ಎಲ್ಲರೂ ಕೇಂದ್ರದ ಪ್ರಯೋಜನ ಪಡೆಯು ವಂತೆ ಮನವಿ ಮಾಡಿದರು.
ಕೇಂದ್ರದ ಸಂಚಾಲಕ ಸುನೀಲ್ ಕುಮಾರ್ ಮಾತನಾಡಿ, ಈಗಾಗಲೇ ದಾಖಲಾತಿ ಆರಂಭ ಗೊಂಡಿದ್ದು ಸತತ ೪ ವರ್ಷದ ಕೋರ್ಸನಿಂದ ಬ್ಲಾಕ್ ಬೆಲ್ಟ್ ಗಳಿಸಲು ಸಾಧ್ಯ. ಈ ಅವಧಿಯಲ್ಲಿ ದೈಹಿಕ ರಕ್ಷಣೆಗೆ ಅಗತ್ಯವಾದ ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುವುದು ತರಬೇತಿ ಮದ್ಯದಲ್ಲಿ ಪರಸ್ಥಳಕ್ಕೆ ಸ್ಥಳಾಂತರದ ಸಂದಿಗ್ದ ಸ್ಥಿತಿ ಉದ್ಭವಿಸಿದಾಗ ಅಲ್ಲಿಯೇ ಮುಂದುವರಿಸುವ ಎಲ್ಲ ಅವಕಾಶ ಲಭ್ಯವಿದೆ ಎಂದು ತಿಳಿಸಿ ಹೆಚ್ಚಿನ ಮಾಹಿತಿಗಾಗಿ ೭೩೩೮೨೨೩೫೩೮, ೯೧೦೮೨೬೩೧೪೦ ಕ್ಕೆ ಸಂಪರ್ಕಿಸುವಂತೆ ತಿಳಿಸಿದರು.