ಉದ್ಯೋಗಜಿಲ್ಲಾ ಸುದ್ದಿತಾಜಾ ಸುದ್ದಿ

ಉತ್ತಮ ಬದುಕಿಗೆ ಸ್ವಂತ ದುಡಿಮೆ ಸೃಷ್ಠಿ ಅಗತ್ಯ…

Share Below Link

ಶಿವಮೊಗ್ಗ : ಸ್ವ ಉದ್ಯೋಗ, ಸ್ವಂತ ದುಡಿಮೆಯನ್ನ ಸೃಷ್ಠಿಸಿ ಕೊಳ್ಳುವ ಜೊತೆಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಅಶ್ವಿನೀಸ್ ಮೇಕೋವರ್ ಸಂಸ್ಥೆಯ ಮುಖ್ಯಸ್ಥೆ ಅಶ್ವಿನಿ ಎಸ್. ಎಂ ಅವರು ಹೇಳಿದರು.
ನಗರದಲ್ಲಿ ನಡೆದ ಫೋರ್ಟ್ ಫೋಲಿಯೋ ಮುಕ್ತಾಯ ಸಮಾ ರಂಭದಲ್ಲಿ ಮಾತನಾಡಿದ ಅವರು, ಸಂಸ್ಥೆಯ ಅಶ್ವಿನೀಸ್ ಮೇಕೋ ವರ್ ಸಂಸ್ಥೆಯ ವತಿಯಿಂದ ಉದ್ಯೋಗದಲ್ಲಿರುವ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತಿದಿನ ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೩ರವರೆಗೆ ತರಗತಿ ಯಶಸ್ವಿಯಾಗಿ ನಡೆಯುತ್ತಿತ್ತು , ಹಾಗೇ ಅತೀ ಹೆಚ್ಚಿನ ಜನರ ಬೇಡಿಕೆಯಂತೆ ಇದೀಗ ಪ್ರತಿದಿನ ಸಂಜೆ ಬ್ಯಾಚುಗಳು ಮತ್ತು ೨ ದಿನಗಳ ವಿಶೇಷ ವಿಕೆಂಡ್ ಬ್ಯಾಚು ಗಳ ಮೇಕಪ್ ತರಬೇತಿ ಹೊಸದಾಗಿ ಪ್ರಾರಂಭವಾಗುತ್ತಿದೆ ಇದರಿಂದ ನಿಮ್ಮ ಬಿಡುವಿನ ಸಮಯದಲ್ಲಿ ಸ್ವಂತ ಬದುಕು, ಸ್ವ ದುಡಿಮೆಯ ಕನಸನ್ನ ನನಸಾಗಿಸಿಕೊಳ್ಳಲು ಸಾಧ್ಯ ಎಂದರು.


ಈ ಬಾರಿಯ ಕನ್ನಡ ರಾಜ್ಯೋ ತ್ಸವ ಮತ್ತು ದೀಪಾವಳಿ ಹಬ್ಬದ ಸಂಭ್ರಮಾಚರಣೆಯ ವಿಶೇಷಕ್ಕಾಗಿ ಮಹಿಳೆಯರು, ಯುವತಿಯರು ನವೆಂಬರ್ ೫, ಭಾನುವಾರದ ಒಳಗೆ ನೊಂದಣಿಯಾದರೆ ೬೦% ರಿಯಾಯಿತಿ ದರದಲ್ಲಿ ಮೇಕಪ್ ತರಬೇತಿ ನೀಡಲು ಸಂಸ್ಥೆ ನಿರ್ಧ ರಿಸಿದೆ. ಸೀಟುಗಳು ಸೀಮಿತವಿರು ವುದರಿಂದ ಮೊದಲು ನೊಂದಣಿ ಯಾದ ೧೦ ಜನರಿಗೆ ಮಾತ್ರ ಈ ರಿಯಾಯಿತಿ ಅವಕಾಶ ಮತ್ತು ಮೊದಲ ಆದ್ಯತೆ ನೀಡಲಾಗಿದ್ದು ಇಲ್ಲಿ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ ಹಾಗೇ ಈ ಬ್ಯಾಚ್ ಸೋಮವಾರದಿಂದ ಶುಕ್ರವಾರ ಸಂಜೆ ೫ ರಿಂದ ೮ರ ವರೆಗೆ ನಡೆ ಯಲಿದೆ ಹಾಗೇ ವಿಕೇಂಡ್ ತರಗತಿ ಬೇಕಾದಲ್ಲಿ ವಾರದಲ್ಲಿ ೨ದಿನ ವಿಶೇಷ ತರಗತಿ ಸಹ ನಮ್ಮಲ್ಲಿ ಲಭ್ಯ ಶನಿವಾರ ಸಂಜೆ ೩ರಿಂದ ೭ರವರೆಗೆ ಮತ್ತು ಭಾನುವಾರ ಬೆಳಿಗ್ಗೆ ೧೧ ರಿಂದ ಮದ್ಯಾಹ್ನ ೨ರವರೆಗೆ ಜರು ಗಲಿದೆ. ಈ ಎಲ್ಲ ಅನುಕೂಲಕರ ಸಮಯ, ಅವಕಾಶ ನಿಮಗಾಗಿ ಕಾದಿದೆ ಇದನ್ನ ಸದುಪಯೋಗಪ ಡಿಸಿಕೊಳ್ಳಿ ಹಾಗೇ ಈ ಕೂಡಲೇ ಕರೆ ಮಾಡಿ ನಿಮ್ಮ ಹೆಸರನ್ನ ನೊಂದಾ ಯಿಸಿಕೊಳ್ಳಿ ಎಂದು ಕರೆ ನೀಡಿ ದರು.
ಹೆಚ್ಚಿನ ಮಾಹಿತಿಗಾಗಿ ೯೯೦೧೨೧೬೦೯೩ಗೆ ಸಂಪರ್ಕಿಸಿ ಹಾಗೂ ತರಬೇತಿ ಸ್ಥಳ : ಅಶ್ವಿನಿ ಮೇಕೋವರ್ ಸ್ಟುಡಿಯೋ, ಲಕ್ಮೀ ಆರ್ಕೇಡ್ ಬಿಲ್ಡಿಂಗ್, ೨ನೇ ಮಹಡಿ, ಲಕ್ಮೀ ಟಾಕೀಸ್ ಸರ್ಕಲ್‌ಗೆ ಭೇಟಿ ನೀಡಬಹುದು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅವಿನಾಶ್, ಸಂಸ್ಥೆಯ ಅಧ್ಯಕ್ಷರಾದ ಶಿವಲೀಲಾ ಮಾತನಾಡಿದರು.