ಸ್ಕೌಟ್ಸ್ ಮತ್ತು ಗೈಡ್ಸ್ ಎಲ್ಲಾ ಶಾಲೆಗಳಲ್ಲೂ ಕಡ್ಡಾಯಗೊಳಿಸಬೇಕಿದೆ: ಕೊಟ್ರೇಶ್
ದಾವಣಗೆರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ರೋಟರಿ ಬಾಲಭವನ ಮತ್ತು ಡಿ ಆರ್ ಎಂ ಸ್ಕೌಟ್ ಭವನದಲ್ಲಿ ಜನಪದ ತಜ್ಞರು ನಾಡೋಜ ಪ್ರಶಸ್ತಿ ಪುರಸ್ಕೃತರು ಡಾ| ಗೋರು ಚನ್ನಬಸಪ್ಪ ಅವರ ಹೆಸರಿನಲ್ಲಿ ಗೀತ ಗಾಯನ ಸ್ಪರ್ಧೆ ಏರ್ಪಡಿಸಲಾಗಿತ್ತು.
ಡಿಡಿಪಿಐ ಕೊಟ್ರೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಕೌಟ್ಸ್ , ಕಬ್ ಮತ್ತು ಬುಲ್ ಬುಲ್ ಕಡ್ಡಾಯವಾಗಿ ಎ ಶಾಲೆಯಲ್ಲಿಯೂ ಇರಲೇಬೇಕು ಎಂದರಲ್ಲದೇ, ಸ್ಕೌಟ್ಸ್ ಮತ್ತು ಗೈಡ್ಸ್ ಎಂದರೆ ನನಗೆ ಅಪಾರ ಅಭಿಮಾನ. ಇಂತಹ ಗೀತಾ ಗಾಯನದಲ್ಲಿ ಭಾಗವಹಿಸು ವುದರಿಂದ ಓದಿನ ಕಡೆ ಹೆಚ್ಚು ಗಮನ ಹರಿಸಬಹುದು. ಜನ ಪದ ಕಲೆಯನ್ನು ಉಳಿಸಲು ನೆರವಾಗುತ್ತದೆ ಮತ್ತು ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ವ್ಯಭವವನ್ನು ನೆನಪಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿ ಮುಖ್ಯ ಆಯುಕ್ತರು ಮುರುಘರಾಜೇಂದ್ರ ಜೆ ಚಿಗಟೇರಿ ಅವರು, ಹಾಡುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಿ ಕೊಳ್ಳಲು ಪ್ರಯೋಜನವಾಗುತ್ತದೆ ಎಂದರು.
ಕಬ್ ವಿಭಾಗ: ನಂದಗೋಕುಲ ಶಾಲೆ, ಬಾಪೂಜಿ ಸಿಬಿಎಸ್ಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚನ್ನಗಿರಿ.
ಬುಲ್ ಬುಲ್ ವಿಭಾಗ : ಸಿದ್ದಗಂಗಾ ಶಾಲೆ.ರಾಷ್ಟ್ರೋತ್ಥನ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಲಗಟ್ಟೆ, ಹೊನ್ನಾಳಿ.
ಸ್ಕೌಟ್ ವಿಭಾಗ: ಗ್ಲೋಬಲ್ ಪಬ್ಲಿಕ್ ಶಾಲೆ, ಸಾಯಿ ಗುರುಕುಲ ಹೊನ್ನಾಳಿ, ವಿದ್ಯಾದಾಹಿನಿ ಶಾಲೆ ಹರಿಹರ .
ಗೈಡ್ ವಿಭಾಗ: ಸಿದ್ದಗಂಗಾ ಶಾಲೆ, ಆರ್ ವಿ ಜಿ ಕೆ ಶಾಲೆ, ಸೇಂಟ್ ಮೇರಿಸ್ ಶಾಲೆ ಹರಿಹರ ಇವರು ಸ್ಪರ್ಧೆಯಲ್ಲಿ ವಿಜೇತರಾದರು.
ಕಬ್, ಬುಲ್ ಬುಲ್, ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದ ತೀರ್ಪುಗಾರರಾಗಿ ಕಲಾಕಲ್ಪ ಸಂಸ್ಥೆಯ ಶುಭ ಐನಳ್ಳಿ , ಶಾರದಾ ಮಾಗನಹಳ್ಳಿ ಜಿ ಗೈಡ್ ಆಯುಕ್ತರು ಕಾರ್ಯನಿರ್ವಹಿಸಿದರು. ರೋವರ್ಸ್, ರೇಂಜರ್ಸ್ ಹಾಗೂ ದಳನಾಯಕ/ನಾಯಕಿಯರ ತೀರ್ಪುಗಾರರಾಗಿ ಜಿ ಉಪಾಧ್ಯಕ್ಷರು ಶಾಂತ ಯಾವ್ಗಲ್ , ಸೀತಮ್ಮ ಶಾಲೆಯ ಸಂಗೀತ ಶಿಕ್ಷಕಿ ತ್ರಿವೇಣಿ ಕಾರ್ಯನಿರ್ವಹಿಸಿದರು.
ಪ್ರಮುಖರಾದ ಎ ಪಿ ಷಡಕ್ಷರಪ್ಪ, ಎನ್.ಕೆ.ಕೊಟ್ರೇಶ್, ಹಾಲಪ್ಪ , ಡಾ| ಶಕುಂತಲಾ ಉಪಸ್ಥಿತರಿದ್ದರು.