ಕ್ರೈಂಜಿಲ್ಲಾ ಸುದ್ದಿತಾಜಾ ಸುದ್ದಿ

ನಗರ ಮಧ್ಯೆ ರಾಜಾರೋಷ ಮರಳು ದಂಧೆ – ರಕ್ಷಕರೇ ಭಕ್ಷಕರಾದರೇ..?!

Share Below Link

ವಿಶೇಷ ವರದಿ: ರಾಕೇಶ್ ಡಿಸೋಜ- 9482482182
ಶಿವವಗ್ಗ : ನಗರಕ್ಕೆ ಸಮೀಪ ಹರಿಯುವ ತುಂಗಾ ನದಿಯ ಒಡಲನ್ನು ಅಕ್ರಮ ಮರಳು ದಂಧೆಕೋರರು ಸಂಪೂರ್ಣವಾಗಿ ಬಗೆದು ಹಾಕುತ್ತಿರುವ ಘಟನೆ ದಿನೇದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಚಟ್ನಹಳ್ಳಿ ಕಡೆಯಿಂದ ಗುರುಪುರ ಭಾಗದಲ್ಲಿ ಪ್ರತಿನಿತ್ಯ ರಾತ್ರಿ ೭ ಗಂಟೆಯಿಂದ ಬೆಳಿಗ್ಗೆ ೭ ಗಂಟೆಯವರೆಗೆ ನಿರಂತರವಾಗಿ ನಡೆಯುತ್ತಿರುವ ಈ ಮರಳು ದರೋಡೆಗೆ ಕಡಿವಾಣ ಹಾಕಬೇಕಿದ್ದ ಪೊಲೀಸ್, ಗಣಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳೇ ತೆರೆಮರೆಯಲ್ಲಿ ದಂಧೆಕೋರರಿಗೆ ರಕ್ಷಣೆ ನೀಡುತ್ತಿzರೆ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಈ ಕಾರಣದಿಂದಲೇ ಮರಳು ಮಾಫಿಯಾ ಕಿಂಗ್‌ಪಿನ್‌ಗಳಿಗೆ ಇಲಾಖಾಧಿಕಾರಿಗಳ ವಲೆ ಅತಿಯಾದ ಸಲುಗೆ ಬೆಳೆದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನೂರಾರು ಟಿಪ್ಪರ್ ಲೋಡ್‌ಗಳಷ್ಟು ಮರಳನ್ನು ಪ್ರತಿದಿನ ಇಲ್ಲಿಂದ ಸಾಗಿಸಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ಟಿಪ್ಪರ್ ಲಾರಿಗಳ ಗದ್ದಲ ಮತ್ತು ಜೆಸಿಬಿಗಳ ಕಾರ್ಯಾಚರಣೆಯಿಂದ ಸಮೀಪದ ಬಡಾವಣೆಯ ನಿವಾಸಿಗಳು ನಿz ಕಳೆದುಕೊಳ್ಳುವಂತಾಗಿದೆ.
ಸ್ಥಳೀಯ ಹಿರಿಯ ನಿವಾಸಿಯೊಬ್ಬರು ತಮ್ಮ ಅಸಮಾಧಾನ ಹೊರಹಾಕುತ್ತಾ, ಪ್ರತಿದಿನ ರಾತ್ರಿ ೭ ಗಂಟೆ ವೇಳೆಗೆ ಟಿಪ್ಪರ್ ಲಾರಿಗಳು ಹಾಗೂ ಜೆಸಿಬಿಗಳು ನದಿಗೆ ಇಳಿಯುತ್ತವೆ. ಬಳಿಕ ಇಡೀ ರಾತ್ರಿ ಮರಳನ್ನು ಅಕ್ರಮವಾಗಿ ತೆಗೆದು ಸಾಗಣೆ ಮಾಡಲಾಗುತ್ತದೆ. ರಾತ್ರಿ ವೇಳೆ ಅಧಿಕಾರಿಗಳಿಗೆ ಕರೆ ಮಾಡಿದರೆ ಸ್ವೀಕರಿಸುವುದೇ ಇಲ್ಲ. ಬೆಳಿಗ್ಗೆ ಕರೆ ಮಾಡಿದರೆ ಮೀಟಿಂಗ್‌ನಲ್ಲಿ ಇzವೆ, ಬೇರೆಡೆ ರೈಡ್ ನಡೆಸಲು ಹೋಗಿzವೆ ಎಂಬ ಸಬೂಬು ಹೇಳುತ್ತಾರೆ ಎಂದು ಆರೋಪಿಸಿzರೆ.
ಹಲವಾರು ಬಾರಿ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡಿದ್ದರೂ ಯಾವುದೇ ಕ್ರಮ ಜರುಗಿಸದಿರುವುದರ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿzರೆ.
ಸಂಬಂಧಿಸಿದ ಗಣಿ ಇಲಾಖೆ ಅಧಿಕಾರಿಗೆ ಕರೆ ಮಾಡಿದಾಗ ಕೆಲವೊಮ್ಮೆ ಕರೆ ಸ್ವೀಕರಿಸುವುದೇ ಇಲ್ಲ, ಮತ್ತೆ ಮತ್ತೆ ಕರೆ ಮಾಡಿದರೆ ಅರ್ಧ ಗಂಟೆಯಲ್ಲಿ ಬರುತ್ತೇವೆ ಎಂದು ಹೇಳುತ್ತಾರೆ. ಫೋನ್ ಡಿಸ್ಕನೆಕ್ಟ್ ಮಾಡಿದ ತಕ್ಷಣವೇ ಸ್ಥಳದಲ್ಲಿದ್ದ ಟಿಪ್ಪರ್‌ಗಳು, ಜೆಸಿಬಿಗಳು, ಮೋಟಾರ್‌ಗಳು ಎಲ್ಲವೂ ಅಲ್ಲಿಂದ ಮಾಯವಾಗುತ್ತವೆ. ಇದರಿಂದ ಅಧಿಕಾರಿಗಳೇ ಮುಂಚಿತವಾಗಿ ದಂಧೆಕೋರರಿಗೆ ಮಾಹಿತಿ ರವಾನಿಸು ತ್ತಿzರೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮತ್ತಷ್ಟು ದಟ್ಟವಾಗಿದೆ.
ನಾವು ಮಾಹಿತಿ ನೀಡಿದ ತಕ್ಷಣವೇ ಎಲ್ಲ ವಾಹನಗಳು ಖಾಲಿಯಾಗುತ್ತವೆ. ನಂತರ ಸರಿಯಾಗಿ ಒಂದು ಗಂಟೆ ಬಿಟ್ಟು ಸಿನಿಮಾ ಶೈಲಿಯಲ್ಲಿ ಅಧಿಕಾರಿಗಳು ಬಂದು ಅತ್ತಿತ್ತ ಸುತ್ತಾಡಿ, ಏನೂ ನಡೆದಿಲ್ಲ ಎಂಬಂತೆ ಹಿಂದಿರುಗುತ್ತಾರೆ ಎಂದು ನಿವಾಸಿಗಳು ತಮ್ಮ ಅಸಮಾಧಾನ ಹೊರಹಾಕಿzರೆ.
ನಗರದ ಮಧ್ಯ ಭಾಗದ ಯಾರ ಭಯವೂ ಇಲ್ಲದೆ ರಾಜರೋಷವಾಗಿ ನಡೆಯುತ್ತಿರುವ ಈ ಅಕ್ರಮ ಮರಳು ಸಾಗಾಟವನ್ನು ಕಂಡು, ನದಿಯ ಅಮೂಲ್ಯ ಸಂಪತ್ತನ್ನು ರಕ್ಷಿಸಬೇಕಾದವರೇ ಭಕ್ಷಕರಾಗಿzರೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಪರಿಸರ ಹಾನಿ, ನದಿಯ ಅಸ್ತಿತ್ವಕ್ಕೆ ಎದುರಾಗುತ್ತಿರುವ ಅಪಾಯ ಹಾಗೂ ಆಡಳಿತ ಯಂತ್ರದ ಅಸಡ್ಡೆ ಇದೀಗ ಜನರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದೇ ರೀತಿ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯಲ್ಲಿ ಅಕ್ರಮ ಮರಳು ದಂದೆ ರಾಜಾರೋಷವಾಗಿ ನಡೆಯುತ್ತಿದ್ದು, ತುರ್ತು ಕಡಿವಾಣ ಹಾಕುವ ಅಗತ್ಯವಿದೆ.
ನದಿಯಲ್ಲಿನ ಮರಳು ಸಂಪತ್ತನ್ನು ರಕ್ಷಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಅಕ್ರಮ ಮರಳು ದಂದೆಕೋರರ ವಿರುದ್ಧ ಬಿಎನ್‌ಎಸ್ ಕಾಯ್ಡೆ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ.

Leave a Reply

Your email address will not be published. Required fields are marked *