ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ರಾಹುಲ್‌ಗಾಂಧಿ ಅಪ್ರಬುದ್ಧ ರಾಜಕಾರಣಿ: ಬಸವರಾಜ್ ಟೀಕೆ…

Share Below Link

ಶಿಕಾರಿಪುರ: ಪ್ರಧಾನಿ ಮೋದಿ ಹುಟ್ಟಿನಿಂದ ಹಿಂದುಳಿದ ವರ್ಗದವ ರಾಗಿದ್ದು ಇದೀಗ ಲೋಕಸಭಾ ಚುನಾವಣೆಯ ಸಂದರ್ಬದಲ್ಲಿ ಹಿಂದುಳಿದ ವರ್ಗದ ಮತ ವಿಭಜಿಸಿ ಲಾಭ ಪಡೆಯುವ ಹುನ್ನಾರದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ಅವರ ಜಾತಿಯನ್ನು ಟೀಕಿಸುವ ಮೂಲಕ ಸಮಸ್ತ ಹಿಂದುಳಿದ ವರ್ಗದ ಕೆಂಗಣ್ಣಿಗೆ ಗುರಿಯಾಗಿ zರೆ. ಇದರ ಪ್ರತಿಫಲವನ್ನು ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಎದುರಿಸಲಿzರೆ ಎಂದು ತಾಲೂಕು ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ಬಸವರಾಜ್ ಕಪ್ಪನಹಳ್ಳಿ ಆಕ್ರೋಶ ವ್ಯಕ್ತಪಡಿಸಿದರು.


ಪಟ್ಟಣದ ತಾಲೂಕು ಕಚೇರಿ ಮುಂಭಾಗ ತಾ.ಬಿಜೆಪಿ ಓಬಿಸಿ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಯುವಕರೋ ಅಥವಾ ಯಜಮಾನರೋ ಎಂಬ ಬಗ್ಗೆ ಅನುಮಾನ ಕಾಡುತ್ತಿದ್ದು ಅಪ್ರಭುದ್ದ ರಾಜಕಾರಣಿಗೆ ಬಹು ಉತ್ತಮ ನಿದರ್ಶನವಾಗಿರುವ ರಾಹುಲ್ ಗಾಂಧಿ ಜಗತ್ತು ಮೆಚ್ಚಿದ ಪ್ರಧಾನಿ ಮೋದಿಯ ಜತಿಯನ್ನು ಟೀಕಿಸಿ ಪುನಃ ತನ್ನ ಬಾಲಿಷ ಹೇಳಿಕೆಯಿಂದ ನಗೆಪಾಟಲಿಗೀ ಡಾಗಿzರೆ ಎಂದ ಅವರು, ಜನ್ಮತಃ ಹಿಂದುಳಿದ ವರ್ಗದ ನರೇಂದ್ರ ಮೋದಿ ಅಪ್ರತಿಮ ದೇಶಭಕ್ತಿ ಜನಪರ ಕಾಳಜಿಯಿಂದಾಗಿ ದೇಶದ ಪ್ರಧಾನಿಯಾಗಿದ್ದು ಅತಿ ಹೆಚ್ಚು ಅನುದಾನ ನೀಡಿ ಯೋಜನೆ ರೂಪಿಸಿ ಹಿಂದುಳಿದ ವರ್ಗದ ಜನತೆಯ ಕಣ್ಮಣಿಯಾಗಿzರೆ ಎಂದು ತಿಳಿಸಿದರು.
ಚುನಾವಣೆ ಹೊಸ್ತಿಲಲ್ಲಿ ಹಿಂದುಳಿದ ವರ್ಗವನ್ನು ವಿಭಜಿಸಿ ಮತಗಳಿಸುವ ಏಕೈಕ ಷಡ್ಯಂತ್ರದಿಂದ ರಾಹುಲ್ ಗಾಂಧಿ ಪ್ರಧಾನಿ ಮೋದಿರವರ ಜತಿ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಮಸ್ತ ಹಿಂದುಳಿದ ವರ್ಗವನ್ನು ಕೆಣಕಿzರೆ ಎಂದು ಇದರ ಪ್ರತಿಫಲ ಬರಲಿರುವ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ ಪ್ರಚಂಡ ಬಹುಮತದಿಂದ ಪುನಃ ಅಧಿಕಾರದ ಗದ್ದುಗೆ ಏರಿ ಮೋದಿ ಪ್ರಧಾನಿಯಾಗಲಿzರೆ ರಾಜ್ಯದಲ್ಲಿ ಎಲ್ಲ ೨೮ ಕ್ಷೇತ್ರವನ್ನು ಜಯಿಸುವುದು ಶತಸಿದ್ದ ಎಂದು ತಿಳಿಸಿದರು.
ಜಗತ್ತಿನ ಎಲ್ಲ ದೇಶದ ಜನತೆಯ ಮನ ಗೆದ್ದಿರುವ ಮೋದಿ ರವರ ಜತಿ ನಿಂದನೆಗೆ ಇದೀಗ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಇಂತಹ ವರ್ತನೆ ಪುನರಾವರ್ತನೆಯಾದಲ್ಲಿ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾಗಲಿದೆ ಎಂದು ಎಚ್ಚರಿಸಿದರು.
ನಂತರದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿ ಮನವಿ ಸಲ್ಲಿಸಲಾಯಿತು.ಈ ಸಂದರ್ಬದಲ್ಲಿ ತಾ.ಬಿಜೆಪಿ ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ,ನಗರಾಧ್ಯಕ್ಷ ರಾಘವೇಂದ್ರ,ಯುವ ಮೋರ್ಚಾ ಅಧ್ಯಕ್ಷ ವೀರಣ್ಣಗೌಡ,ಓಬಿಸಿ ಮೋರ್ಚಾ ಪ್ರ.ಕಾ ಮಧು ಹೋತನಕಟ್ಟೆ,ಬೆಣ್ಣೆ ಪ್ರವೀಣ,ದಿನೇಶ್,ರುದ್ರೇಶ್, ಜಯಂತಮ್ಮ ಪುರಸಭಾ ಸದಸ್ಯ ಪಾಲಾಕ್ಷಪ್ಪ,ಮುಖಂಡ ಮಂಜುಸಿಂಗ್,ಯೋಗೀಶ್ ಮಡ್ಡಿ,ರವಿಕಾಂತ್,ಶ್ರಿನಿವಾಸ್ ಮತ್ತಿತರರು ಹಾಜರಿದ್ದರು.