ಜಿಲ್ಲಾ ಸುದ್ದಿತಾಜಾ ಸುದ್ದಿ

ಹಲಸಿನ ಮಲ್ಯವರ್ಧಿತ ಉತ್ಪನ್ನಗಳ ಕುರಿತು ಕಾರ್ಯಕ್ರಮ…

Share Below Link

ಶಿವಮೊಗ್ಗ : ಹಲಸಿನ ಹಣ್ಣು ಋತುಕಾಲದಲ್ಲಿ ಎ ವರ್ಗದ ಜನರಿಗೆ ಕಡಿಮೆ ಬೆಲೆಗೆ ಹೇರಳ ವಾಗಿ ದೊರೆಯುವ ಹಣ್ಣಾಗಿದೆ. ಈ ಹಣ್ಣಿನಲ್ಲಿರುವ ತೊಳೆ, ಬೀಜ ಮತ್ತು ಸಿಪ್ಪೆಯನ್ನು ಸಂಸ್ಕರಿಸಿ ವಿವಿಧ ಮಲ್ಯವರ್ಧಿತ ಉತ್ಪನ್ನಗ ಳನ್ನು ತಯಾರಿಸಿ ಮಾರುಕಟ್ಟೆ ಯಲ್ಲಿ ಅಧಿಕ ಲಾಭ ಪಡೆಯಬ ಹುದಾಗಿದೆ ಎಂದು ಇರುವಕ್ಕಿ ಕೆ.ಶಿ.ನಾ.ಕೃ.ತೋವಿ.ವಿಯ ಸಹ ವಿಸ್ತರಣಾ ನಿರ್ದೇಶಕ ಡಾ. ಬಿ.ಸಿ. ಹನುಮಂತಸ್ವಾಮಿ ಹೇಳಿದರು.
ಅವರು ತಮ್ಮಡಿಹಳ್ಳಿ ಗ್ರಾಮ ದಲ್ಲಿ ಐ.ಸಿ.ಎ.ಆರ್ ಕೃಷಿ ವಿeನ ಕೇಂದ್ರ ಶಿವಮೊಗ್ಗ ಹಾಗೂ ಜನ ಶಿಕ್ಷಣ ಸಂಸ್ಥೆ ಶಿವಮೊಗ್ಗ ಇವರ ಸಹಯೋಗದೊಂದಿಗೆ ಹಲಸಿನ ಮಲ್ಯವರ್ಧಿತ ಉತ್ಪನ್ನಗಳ ಕುರಿತು ಸಾiರ್ಥ್ಯ ಅಭಿವೃದ್ದಿ ತರಬೇತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಕೆ.ವಿ.ಕೆ ಶಿವಮೊಗ್ಗದ ಗೃಹ ವಿeನಿ ಡಾ.ಜ್ಯೋತಿ ಎಂ ರಾಠೋ ಡ್ ಮಾತನಾಡಿ, ಹಲಸಿನ ಹಣ್ಣು ಸುವಾಸನೆ ಹಾಗೂ ರುಚಿ ಎರಡ ನ್ನೂ ಹೊಂದಿದೆ. ಈ ಹಣ್ಣನ್ನು ಬಳಸಿಕೊಂಡು ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹು ದು. ಹಲಸಿನ ಹಣ್ಣಿನಲ್ಲಿ ವಿಟಾ ಮಿನ್, ಖನಿಜಂಶ, ಕಾರ್ಬೋ ಹೈಡ್ರೇಟ್, ಎಲೆಕ್ಟ್ರೋಲೈಟ್‌ಗಳು, ಪೊಟ್ಯಾಷಿಯಂ ಹಾಗೂ ನಾರಿ ನಾಂಶಗಳು ಯೆಥೇಚ್ಚವಾಗಿ ಸಿಗು ವುದರಿಂದ ಇದೊಂದು ಆರೋಗ್ಯ ಕಾರಿ ಹಣ್ಣು ಎಂದರು.
ತಮ್ಮಡಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್, ಜನ ಶಿಕ್ಷಣ ಸಂಸ್ಥೆಯ ಶೋಭಾ ಹಾಗೂ ಶಿಕ್ಷಕಿ ಅಶ್ವಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.