ಆರೋಗ್ಯಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಿ:ಅನಿಲ್ ಕುಮಾರ್

Share Below Link

ಶಿವಮೊಗ್ಗ: ಪ್ಲಾಸ್ಟಿಕ್ ತ್ಯಾಜ್ಯ ಗಳಿಂದ ಪರಿಸರ ಮಾಲಿನ್ಯ ಉಂ ಟಾಗುತ್ತಿದೆ. ಪರಿಸರ ಹಾಳು ಮಾಡುವ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯ ವಸ್ತುಗಳ ಬಳಕೆ ಮಾಡ ದಂತೆ ಜಗೃತಿ ಮೂಡಿಸಿ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಿಸಬೇಕೆಂದು ಡಿವಿಎಸ್ ವಿeನ ಕಾಲೇಜಿನ ಪರಿಸರ ವಿeನ ವಿಭಾಗದ ಮುಖ್ಯಸ್ಥ ಡಾ. ಅನಿಲ್ ಕುಮಾರ್ ಹೆಚ್.ವಿ. ಕರೆ ನೀಡಿದರು.
ಇಲ್ಲಿನ ಬಾಪೂಜಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್‌ಎಸ್‌ಎಸ್, ಯುವ ರೆಡ್ ಕ್ರಾಸ್, ರೋವರ್‍ಸ್ ಮತ್ತು ರೇಂಜರ್‍ಸ್, ಸಾಂಸ್ಕತಿಕ ವೇದಿಕೆ ಮತ್ತು ಪರಿಸರ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ಇಂದು ಸೋಮವಾರ ಬೆಳಿಗ್ಗೆ ಹಮ್ಮಿಕೊ ಳ್ಳಲಾಗಿದ್ದ ವಿಶ್ವ ಪರಿಸರ ದಿನಾ ಚರಣೆಯನ್ನು ಸಸಿ ನೆಡುವುದರ ಮೂಲಕ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.


ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಿಸುವಲ್ಲಿ ಪ್ರತಿಯೊಬ್ಬ ನಾಗ ರೀಕರ ಪಾತ್ರ ಮಹತ್ವzಗಿದೆ. ಅದರಲ್ಲೂ ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಶಿಕ್ಷಕರ ಮಾತಿ ವಿದ್ಯಾರ್ಥಿ ಗಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪೋಷಕರು ಸಹ ಮಕ್ಕಳಿಗೆ ಪ್ಲಾಸ್ಟಿಕ್ ದುಷ್ಪರಿ ಣಾಮದ ಮನವರಿಕೆ ಮಾಡಿಕೊ ಡಬೇಕಿದೆ. ಮಕ್ಕಳು ಪ್ಲಾಸ್ಟಿಕ್‌ಬಳಕೆ ತ್ಯಜಿಸಿದಲ್ಲಿ ಪರಿಸರ ಉಳಿಸುವ ಕಾರ್ಯಕ್ಕೆ ಹೆಚ್ಚಿನ ಸಹಕಾರ ದೊರೆಯಲಿದೆ ಎಂದರು.
ಪೋಷಕರು ಹಾಗೂ ಶಿಕ್ಷಕರು, ಮಕ್ಕಳನ್ನು ಪ್ರವಾಸಕ್ಕೆಂದು ಕರೆದು ಕೊಂಡು ಹೋಗುತ್ತಾರೆ. ಅಲ್ಲಿನ ಸಂಪದ್ಭರಿತ ಗಿಡ, ಮರಗಳು, ಪ್ರಾಣಿ, ಪಕ್ಷಿಗಳನ್ನು ನೋಡಿ ಮನಸ್ಸು ಉಸಗೊಳ್ಳುತ್ತದೆ. ಅಂಥದ್ದೇ ವಾತಾವರಣವನ್ನು ನಮ್ಮ ಸುತ್ತ ಮುತ್ತ ಕೂಡ ನಿರ್ಮಿಸಿ ಕೊಳ್ಳಲು ಸಾಧ್ಯವಿದೆ. ಪರಿಸರವನ್ನು ಹಸಿರೀಕರಣದಿಂದ ಕಂಗೊಳಿಸು ವಂತೆ ಮಾಡಿ ಆಹ್ಲಾದಕರ ವಾತಾ ವರಣವನ್ನು ನಿರ್ಮಿಸಬೇಕೆಂದರು.
ಪ್ರಭಾರ ಪ್ರಾಂಶುಪಾಲ ಡಾ. ಬಿ.ಜಿ. ಚನ್ನೇಶ್ ಅಧ್ಯಕ್ಷತೆ ವಹಿಸಿ ದ್ದರು. ಡಾ. ನಾಗೇಂದ್ರ ನಾಯ್ಕ ಕೆ., ಡಾ. ರೇಷ್ಮ, ಡಾ.ಎಸ್.ಹೆಚ್. ಪ್ರಸನ್ನ, ಡಾ. ಸೋಮಶೇಖರ್, ಪಿ. ಶಿವಮೂರ್ತಿ, ರಾಜೇಶ್ವರಿ, ಜಯಕೀರ್ತಿ ಹೆಚ್.ಟಿ. ಮತ್ತಿತ ರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಕಸ್ತೂರಿ ಎಂ.ಜಿ. ಪ್ರಾರ್ಥಿಸಿ, ಡಾ. ಬಸವಣ್ಯಪ್ಪ ಎಂ. ಸ್ವಾಗತಿಸಿ, ಡಾ. ನಾಗೇಂದ್ರ ನಾಯ್ಕ ಕೆ. ಪ್ರಾಸ್ತಾವಿಸಿ, ಡಾ. ರೇಷ್ಮ ನಿರೂ ಪಿಸಿ, ಜಯಕೀರ್ತಿ ಹೆಚ್.ಟಿ. ವಂದಿಸಿದರು.