ಜಿಲ್ಲಾ ಸುದ್ದಿತಾಜಾ ಸುದ್ದಿ

ಕ್ರೀಡೆಯಿಂದ ದೈಹಿಕ ಮಾನಸಿಕ ಆರೋಗ್ಯ: ಚನ್ನಿ

Share Below Link

ಶಿವಮೊಗ್ಗ: ವಿದ್ಯಾರ್ಥಿಗಳು ಕ್ರೀಡಾಮನೋಭಾವವನ್ನು ಬೆಳಸಿಕೊಳ್ಳಬೇಕು.ಮಾನಸಿಕ ಹಾಗೂ ದೈಹಿಕಆರೋಗ್ಯಕ್ಕೆ ಕ್ರೀಡೆಯು ತುಂಬಾ ಸಹಕಾರಿ ಯಾಗಿದೆ. ಶಿಕ್ಷಣದಷ್ಟೇ ಮಹತ್ವ ವನ್ನುಕ್ರೀಡೆಗೂ ಸಹ ನೀಡಬೇಕು ಎಂದು ಶಾಸಕ ಚನ್ನಬಸಪ್ಪ ಹೇಳಿ ದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ದಿ.ಟೀಮ್ ಪದವಿ ಪೂರ್ವ ಕಾಲೇ ಜಿನ ಸಂಯುಕ್ತ ಆಶ್ರಯದಲ್ಲಿ ನೆಹರೂ ಕ್ರೀಡಾಂಗಣದಲ್ಲಿ ಇತ್ತೀ ಚೆಗೆ ನಡೆದ ಪಿಯು ಕಾಲೇಜುಗಳ ಜಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾ ಡಿದರು.
ಮೇಯರ್ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿ ಗಳು ಹೆಚ್ಚು ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡಾಮನೋಭಾವ ವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕ್ರೀಡಾಜ್ಯೋತಿಸ್ವೀಕರಿಸಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕವ ಕೃಷ್ಣಪ್ಪ ಬಿ ಮಾತ ನಾಡಿ, ವಿದ್ಯಾರ್ಥಿಗಳು ನ್ಯಾಯ ಬದ್ಧವಾಗಿ ಸ್ಪರ್ಧೆಗಳಲ್ಲಿ ಭಾಗವಹಿ ಸಬೇಕು, ಸ್ಪರ್ಧಾಮನೋಬಾವ ದಿಂz ಆಡಬೇಕು ಸೋಲು ಗೆಲು ವುಗಳನ್ನು ಕ್ರೀಡಾ ಮನೋಭಾವ ದಿಂದ ಸ್ವೀಕರಿಸ ಬೇಕೆಂದು ಕಿವಿಮಾ ತನ್ನು ಹೇಳಿದರು. ದಿ ಟೀಮ್ ಅಕಾಡೆಮಿ ಅಧ್ಯಕ್ಷ ಮಂಜಪ್ಪ ಕೆ. ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೀಡೆಯು ವೃತ್ತಿಪರ ಶಿಕ್ಷಣದ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆ ಯಲು ಸಹಕಾರಿಯಾಗುತ್ತದೆ. ತಮ್ಮ ದಿ ಟೀಮ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾದ ಗೌತಮಿಗೌಡ ಅವರು ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದು ಅವರಿಗೆ ಉನ್ನತ ಮಟ್ಟದ ಸಾಧನೆ ಮಾಡಲು ಅಗತ್ಯವಿರುವ ಎ ರೀತಿಯ ಸೌಲಭ್ಯಗಳನ್ನು ಒದಗಿಸು ವುದಾಗಿ ಭರವಸೆ ನೀಡಿದರು. ಮುಖ್ಯ ಅತಿಥಿಯಾಗಿದ್ದ ದಿ ಟೀಮ್ ಕಾಲೇಜು ಪ್ರಾಚಾರ್ಯ ಸುರೇಶ್ ಬಾಬು ಆರುಮಲ್ಲ ಮಾತನಾಡಿ, ಜಿ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಎಲ್ಲರನ್ನು ಸ್ಮರಿಸಿದವರು.ರಾಷ್ಟೀಯ ಮಟ್ಟದ ಕ್ರೀಡಾಪಟುವಾದ ನಮ್ಮ ಕಾಲೇ ಜಿನ ವಿದ್ಯಾರ್ಥಿನಿ ಗೌತಮಿಗೌಡ ಅವರನ್ನು ಪ್ರಶಂಸಿದರು. ಜಿ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಚಂದ್ರಪ್ಪಗುಂಡಪಲ್ಲಿ, ಅನುದಾನಿತ ಪ. ಪೂ ಕಾಲೇಜು ಪ್ರಾಚಾ ರ್ಯರ ಸಂಘದ ಅಧ್ಯಕ್ಷರ ಶಶಿಕುಮಾರ್ ಹೆಚ್.ಎಂ., ಪ. ಪೂ.ಕಾಲೇಜುಗಳ ಉಪನ್ಯಾಸಕರ ಸಂಘದ ಜಿ ಅಧ್ಯಕ್ಷ ಯೋಗಿಶ್.ಎಸ್, ವಿಭಾಗಾಧಿಕಾರಿ ಪ್ರಸನ್ನ ಕೆ, ಕ್ರೀಡಾ ಸಂಯೋಜಕ ನಾಗೇಂದ್ರ ಪ್ರಸಾದ್, ಹೇಮಂತ್ ಕುಮಾರ್ ಮತ್ತಿತರರು ಹಾಜರಿ ದ್ದರು.