ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಶಾಶ್ವತ ಹಕ್ಕುಪತ್ರ ನೀಡಲು ಒತ್ತಾಯಿಸಿ ಮನವಿ

Share Below Link

ಶಿವಮೊಗ್ಗ: ನಗರದ ೨೭ ನೇ ವಾರ್ಡ್ ಮಂಜುನಾಥ ಬಡಾವಣೆ ಯ ೮೦ ಮನೆಗಳಿಗೆ ಹಕ್ಕು ಪತ್ರ ನೀಡುವ ಕುರಿತಂತೆ ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅವರೊಂ ದಿಗೆ ಪಾಲಿಕೆ ಸದಸ್ಯ ವಿಶ್ವನಾಥ್, ಸ್ಲಂ ಬೋರ್ಡ್ ಅಧಿಕಾರಿಗಳೊಂದಿ ಗೆ ಸಂತ್ರಸ್ತರ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ನಿವಾಸಿಗಳು ಮಾತನಾಡಿ, ಹಿಂದೆ ಯಡಿಯೂ ರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಮಗೆಲ್ಲರಿಗೂ ಹಕ್ಕು ಪತ್ರ ನೀಡಲಾಗಿತ್ತು. ತಾಂತ್ರಿಕ ಕಾರಣದಿಂದಾಗಿ ಅದನ್ನು ರದ್ದುಪ ಡಿಸಲಾಗಿತ್ತು. ಈಗಾಗಲೇ ಹಲವು ವರ್ಷಗಳಿಂದ ನಾವು ಅಲ್ಲಿ ವಾಸ ವಾಗಿದ್ದು, ಮನೆ ಕಟ್ಟಿಕೊಂಡಿ ದ್ದೇವೆ. ಸ್ಲಂ ಬೋರ್ಡ್‌ನವರೂ ಕೂಡ ಅದನ್ನು ಕೊಳಗೇರಿ ಪ್ರದೇಶ ಎಂದು ಘೋಷಿಸಿzರೆ. ಈಗಾ ಗಲೇ ಸರ್ವೇ ಕಾರ್ಯ ಕೂಡ ಪೂರ್ಣಗೊಳಿಸಿzರೆ. ಆದರೂ ಹಕ್ಕುಪತ್ರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸ್ಲಂ ಬೋರ್ಡ್ ಅಧಿಕಾರಿ ಚಂದ್ರ ಕಾಂತ್, ಈ ಜಗ ಕೊಳಗೇರಿ ಮಂಡಳಿಗೆ ಇನ್ನೂ ಹಸ್ತಾಂತರ ಆಗಿಲ್ಲ. ತಹಶೀಲ್ದಾರ್ ವ್ಯಾಪ್ತಿಯ ಲ್ಲಿದೆ. ಆರ್‌ಟಿಸಿ ಬದಲಾವಣೆ ಮಾಡಬೇಕಿದೆ. ಆ ಜಗದ ಹಕ್ಕು ಕೊಳಗೇರಿ ಮಂಡಳಿಗೆ ಹಸ್ತಾಂತರ ಮಾಡಿದರಷ್ಟೇ ನಾವು ಹಕ್ಕುಪತ್ರ ನೀಡಬಹುದು ಎಂದರು.
ಸ್ಥಳೀಯರು ಪ್ರತಿಕ್ರಿಯೆ ನೀಡಿ, ನಗರದ ಎ ಸ್ಲಂ ಬೋರ್ಡ್ ನಿವಾಸಿಗಳಿಗೂ ಹಿಂದೆ ನಮ್ಮೊಂದಿಗೆ ಹಕ್ಕುಪತ್ರ ವಿತರಿಸ ಲಾಗಿತ್ತು. ನಮ್ಮ ಹಕ್ಕುಪತ್ರಗಳು ಮಾತ್ರ ರzಗಿವೆ. ಅವರಿಗೆ ಶಾಶ್ವತ ಹಕ್ಕುಪತ್ರ ದೊರೆತಿದೆ. ನಮಗೂ ಶಾಶ್ವತ ಹಕ್ಕುಪತ್ರ ನೀಡಿ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕರು ಸಭೆಗೆ ತಹಶೀಲ್ದಾರ್ ಅವರನ್ನು ಬರಮಾಡಿಕೊಂಡು ಸಮಸ್ಯೆ ಬಗೆ ಹರಿಸುವ ಆಶ್ವಾಸನೆ ನೀಡಿದರು.