ಕಾರ್ಮೆಲ್ ದೇವಮಾತೆ: ಸಮಾಜದ ಅಂಚಿನ ಬದುಕುಗಳಿಗೆ ಆಶಾಕಿರಣ…
ಕಾರ್ಮೆಲ್ ದೇವಮಾತೆ ಸಮಾಜದ ಅಂಚಿಗೆ ತಳ್ಳಲ್ಪಟ್ಟವರ ಆಶ್ರಯದ ತಾಯಿಯಾಗಿದ್ದಾರೆ. ಇದು ಕೇವಲ ಭಕ್ತಿಯ ಅಭಿವ್ಯಕ್ತಿಯಲ್ಲ. ಮಾನವೀಯತೆ, ಕರುಣೆ, ಸಮರ್ಪಣೆ ಮತ್ತು ನಿಸ್ವಾರ್ಥ ಸೇವೆಯ ಶಾಶ್ವತ ಸಂದೇಶವಾಗಿದೆ. ಸಂಕಷ್ಟದ ಕತ್ತಲೆಯ ನಡುವೆ ಆಶೆಯ ಬೆಳಕನ್ನು ಹುಡುಕುತ್ತಿರುವ ಕಟ್ಯಾಂತರ ಭಕ್ತರ ಪಾಲಿಗೆ ಕಾರ್ಮೆಲ್ ದೇವಮಾತೆ ತಾಯಿಯ ಮಮತೆಯ ಜೀವಂತ ಪ್ರತಿರೂಪವಾಗಿzರೆ.
ಬದುಕಿನ ಹೋರಾಟದಲ್ಲಿ ನೊಂದು ಬೆಂದವರು, ನಿರ್ಗತಿಕರು, ಅನಾಥರು, ವೃದ್ಧರು, ರೋಗಿಗಳು ಹಾಗೂ ಸಮಾಜದ ಮುಖ್ಯವಾಹಿನಿ ಯಿಂದ ದೂರ ಸರಿದವರು… ಹೀಗೆ ಅನೇಕರ ಪಾಲಿಗೆ ಕಾರ್ಮೆಲ್ ದೇವಮಾತೆ ಸಾಂತ್ವನದ ತಾಯಿ, ಧೈರ್ಯದ ತಾಯಿ, ಆಶ್ರಯದ ತಾಯಿ. ಜಗತ್ತಿನಾದ್ಯಂತ ಕೋಟ್ಯಂತರ ಭಕ್ತರ ಹೃದಯಗಳಲ್ಲಿ ಅವರು ಕರುಣೆಯ ಸಾಗರವಾಗಿ ನೆಲೆಸಿzರೆ.
ಈ ಭಕ್ತಿಯ ಭಾವನೆಗೆ ಜೀವ ತುಂಬುವಂತೆ ಭಕ್ತರ ತುಟಿಗಳಲ್ಲಿ ಅರಳುವ ಪ್ರಾರ್ಥನೆ ಇಂದಿಗೂ ಅದೇ ಆಗಿದೆ.
ಅಮ್ಮಾ… ಅಮ್ಮಾ…
ಕರುಣೆಯ ತೋರಮ್ಮಾ…
ಅಮ್ಮಾ… ಅಮ್ಮಾ…
ಆರೋಗ್ಯ ನೀಡಮ್ಮಾ…
ಈ ಎರಡು ಸಾಲುಗಳಲ್ಲಿ ಅಡಗಿರುವುದು ಮಾನವನ ಅಸಹಾಯಕತೆಯೂ, ತಾಯಿಯ ಮೇಲಿನ ಅಚಲ ವಿಶ್ವಾಸವೂ ಆಗಿದೆ.
ಇಂದಿನ ಜಗತ್ತು ವಿeನ, ತಂತ್ರeನ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಅಭೂತಪೂರ್ವ ಸಾಧನೆಗಳನ್ನು ಮಾಡಿದೆ. ಆದರೆ ಆ ಅಭಿವೃದ್ಧಿಯ ಬೆಳಕು ಸಮಾಜದ ಪ್ರತಿಯೊಬ್ಬರ ಬದುಕನ್ನೂ ಸಮಾನವಾಗಿ ಬೆಳಗಿಲ್ಲ. ಆರ್ಥಿಕ ಅಸಮಾನತೆ, ಸಾಮಾಜಿಕ ತಾರತಮ್ಯ, ನಿರುದ್ಯೋಗ, ಅನಾರೋಗ್ಯ, ಏಕಾಂತ ಮತ್ತು ಮಾನಸಿಕ ಒತ್ತಡಗಳು ಸಾವಿರಾರು ಕುಟುಂಬಗಳನ್ನು ಸಂಕಷ್ಟದ ಅಂಚಿಗೆ ತಳ್ಳಿವೆ. ವಿಶ್ವದೆಲ್ಲೆಡೆ ಅಭಿವೃದ್ಧಿಯ ಅಂಕಿಅಂಶಗಳು ಏರಿಕೆಯಾಗುತ್ತಿದ್ದರೂ, ಮಾನವೀಯ ಮಲ್ಯಗಳ ಕೊರತೆ ಅನೇಕ ಬದುಕು ಗಳನ್ನು ಇನ್ನೂ ಕತ್ತಲ ಉಳಿಸಿದೆ.
ಇಂತಹ ಕಾಲಘಟ್ಟದಲ್ಲಿ ಕಾರ್ಮೆಲ್ ದೇವಮಾತೆಯ ಸಂದೇಶ ಮತ್ತಷ್ಟು ಅರ್ಥಪೂರ್ಣವಾಗುತ್ತದೆ. ಸಂಕಷ್ಟದಲ್ಲಿರುವವರ ನೋವನ್ನು ತನ್ನದೇ ನೋವೆಂದು ಭಾವಿಸುವ, ಕಣ್ಣೀರನ್ನು ಒರೆಸುವ, ನಿರಾಶೆಯ ನಡುವೆ ಭರವಸೆಯ ದೀಪ ಬೆಳಗಿಸುವ, ದುಃಖದ ಕ್ಷಣಗಳಲ್ಲಿ ಧೈರ್ಯ ತುಂಬುವ ಕರುಣಾಮಯಿ ತಾಯಿಯಾಗಿ ದೇವಮಾತೆ ಭಕ್ತರ ಮನೆ-ಮನದಲ್ಲಿ ನೆಲೆಸಿzರೆ.
ದೇವತಾಯಿಯ ಜೀವನದ ಸಂದೇಶವು ಕೇವಲ ಪ್ರಾರ್ಥನೆಯಲ್ಲ. ಅದು ಪ್ರೀತಿ, ಸೇವೆ, ತ್ಯಾಗ ಮತ್ತು ಸಹಾನುಭೂತಿಯ ಮೂಲಕ ದೇವರ ಪ್ರೀತಿಯನ್ನು ಸಮಾಜಕ್ಕೆ ತಲುಪಿಸುವ ಆಧ್ಯಾತ್ಮಿಕ ಪಯಣವಾಗಿದೆ.
ಅಂತಹ ಕ್ಷಣಗಳಲ್ಲಿ ಪ್ರತಿಯೊಬ್ಬ ಭಕ್ತನ ಹೃದಯವೂ ವಿನಯದಿಂದ ಹೀಗೆ ಪ್ರಾರ್ಥಿಸುತ್ತದೆ…
ಮರುಕವುಳ್ಳ ತಾಯೇ…
ದೀನರಾದ ನಮ್ಮನ್ನು
ಕೈಬಿಡದೇ ಕಾಪಾಡಿರಿ…
ಈ ಪ್ರಾರ್ಥನಾ ಗೀತೆ ಬದುಕಿನ ಎ ಸಂಕಷ್ಟಗಳನ್ನು ತಾಯಿಯ ಪಾದಗಳಲ್ಲಿ ಸಮರ್ಪಿಸುವ ಭಕ್ತನ ಹೃದಯದ ನಾದವಾಗಿದೆ.
ಕಥೋಲಿಕ ಕ್ರೈಸ್ತ ಸಂಪ್ರದಾಯದಲ್ಲಿ ಕಾರ್ಮೆಲ್ ದೇವಮಾತೆ ವಿನಯ, ವಿಧೇಯತೆ, ಸಮರ್ಪಣೆ, ಪ್ರಾರ್ಥನೆ ಮತ್ತು ಸೇವೆಯ ಆದರ್ಶವಾಗಿ ಗೌರವಿಸಲ್ಪಡುತ್ತಾರೆ. ಅವರ ಹೆಸರಿನಲ್ಲಿ ವಿಶ್ವದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಆರೋಗ್ಯ ಸೇವಾ ಕೇಂದ್ರಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು ಹಾಗೂ ಸಮಾಜಮುಖಿ ಸೇವಾ ಸಂಸ್ಥೆಗಳು ಧರ್ಮ, ಜಾತಿ, ಭಾಷೆ ಮತ್ತು ವರ್ಗಭೇದಗಳನ್ನು ಮೀರಿ ಮಾನವ ಸೇವೆಯನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿವೆ.
ಈ ಸಂಸ್ಥೆಗಳು ಕೇವಲ ನೆರವು ನೀಡುವುದಿಲ್ಲ. ಬದಲಿಗೆ ಶಿಕ್ಷಣ, ಆರೋಗ್ಯ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಮೂಲಕ ದುರ್ಬಲ ವರ್ಗದ ಜನರಿಗೆ ಗೌರವಯುತ ಬದುಕಿನ ಅವಕಾಶವನ್ನು ಕಲ್ಪಿಸುತ್ತಿವೆ. ಇದೇ ಕಾರ್ಮೆಲ್ ದೇವಮಾತೆಯ ಸೇವಾ ತತ್ವದ ನೈಜ ಪ್ರತಿಬಿಂಬವಾಗಿದೆ.
ಇಂದು ಸ್ಪರ್ಧಾತ್ಮಕ ಜೀವನಶೈಲಿಯ ನಡುವೆ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವುದು ಸಮಾಜದ ದೊಡ್ಡ ಸವಾಲಾಗಿದೆ. ವ್ಯಕ್ತಿವಾದ, ಸ್ವಾರ್ಥ ಮತ್ತು ಭೌತಿಕತೆಯ ಓಟದಲ್ಲಿ ಪ್ರೀತಿ, ಸಹಾನುಭೂತಿ ಮತ್ತು ಪರಸ್ಪರ ಕಾಳಜಿ ಹಿಂದೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಕಾರ್ಮೆಲ್ ದೇವಮಾತೆಯ ಸಂದೇಶ ಮನುಕುಲಕ್ಕೆ ಹೊಸ ದಾರಿದೀಪವಾಗಿದೆ.
ಪ್ರೀತಿ ಮತ್ತು ಕರುಣೆಯೇ ನಿಜವಾದ ಧರ್ಮ ಎಂಬ ಅವರ ಜೀವನ ಸಂದೇಶ ಸಮಾಜದಲ್ಲಿ ಸಹಬಾಳ್ವೆ, ಪರಸ್ಪರ ಗೌರವ, ಸಾಮಾಜಿಕ ನ್ಯಾಯ ಮತ್ತು ಸಹೋದರತ್ವವನ್ನು ಬಲಪಡಿಸುವ ಶಕ್ತಿಯನ್ನು ಹೊಂದಿದೆ. ಸಂಕಷ್ಟದಲ್ಲಿರುವವರ ಕೈಹಿಡಿಯುವವರೇ ದೇವರ ನಿಜವಾದ ಸೇವಕರು ಎಂಬ ಶಾಶ್ವತ ಮಲ್ಯವನ್ನು ಅವರ ಆರಾಧನಾ ಪರಂಪರೆ ನಿರಂತರವಾಗಿ ನೆನಪಿಸುತ್ತದೆ.
ವಿಶ್ವದೆಲ್ಲೆಡೆಯಂತೆ ನಗರದ ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಪ್ರತಿ ವರ್ಷ ನಡೆಯುವ ಕಾರ್ಮೆಲ್ ದೇವಮಾತೆಯ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿದಿಲ್ಲ. ಅದು ಮಾನವೀಯತೆ, ಸೌಹಾರ್ದ ಮತ್ತು ಸಾಮರಸ್ಯದ ಹಬ್ಬಗವಾಗಿದೆ.
ಈ ಉತ್ಸವಗಳಲ್ಲಿ ರಾಜ್ಯದ ವಿವಿಧೆಡೆಗಳಿಂದ ವಿವಿಧ ಧರ್ಮ, ಜಾತಿ ಮತ್ತು ಭಾಷೆಯ ಜನರು ಕಾರ್ಮೆಲ್ ದೇವಮಾತೆಯ ಪಾದದಡಿ ಸೇರಿ ಪ್ರಾರ್ಥನೆ, ಸೇವೆ, ದಾನ ಮತ್ತು ಸಹಬಾಳ್ವೆಯ ಮಲ್ಯಗಳನ್ನು ಆಚರಿಸುತ್ತಾರೆ. ಇದು ಧರ್ಮಗಳ ನಡುವಿನ ಭಿನ್ನತೆಯನ್ನು ಮೀರಿ ಮಾನವೀಯತೆಯೇ ಎಲ್ಲ ಧರ್ಮಗಳ ಮೂಲ ಸಂದೇಶ ಎಂಬುದನ್ನು ಸಾರುತ್ತದೆ.
ಆ ಸಂದರ್ಭದಲ್ಲಿ ಸಾವಿರಾರು ಭಕ್ತರ ಕಂಠದಿಂದ ಒಂದೇ ಧ್ವನಿ ಮೊಳಗುತ್ತದೆ…
ಕಾರ್ಮೆಲ್ ಮಾತೆ
ನಿಮ್ಮ ನೆರವ ಕೋರಿ ಬಂದೆವು,
ಕರುಣೆಯಿಂದ ಕಾಯಿರೆಂದು
ಬೇಡಿ ನಿಂತೆವು…
ಜಗದ ತಾಯಿ, ನಮ್ಮ ತಾಯಿ
ನೀವೇ ಎಂದೆವು…
ಈ ಗೀತೆ ಕೇವಲ ಭಕ್ತರ ಬಾಯಿಯಿಂದ ಹೊರಡುವ ಭಜನೆಯಲ್ಲ. ತಾಯಿಯ ಮಡಿಲಲ್ಲಿ ನೆಮ್ಮದಿ ಹುಡುಕುವ ಪ್ರತಿಯೊಬ್ಬ ಭಕ್ತನ ಕರುಣಾಭರಿತ ಹೃದಯದ ಪ್ರಾರ್ಥನೆಯಾಗಿದೆ.
ಸಮಾಜದ ಅಂಚಿನಲ್ಲಿರುವವರನ್ನು ಕೇವಲ ಕರುಣೆಯಿಂದ ನೋಡುವುದಷ್ಟೇ ಸಾಕಾಗುವುದಿಲ್ಲ. ಅವರಿಗೆ ಗೌರವಯುತ ಸ್ಥಾನ, ಸಮಾನ ಅವಕಾಶ, ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಭರವಸೆಯ ಬದುಕು ದೊರಕುವಂತೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರಿಕನ ಮೇಲಿದೆ. ಕಾರ್ಮೆಲ್ ದೇವಮಾತೆಯ ಜೀವನ ಸಂದೇಶವೂ ಇದೇ ಮಲ್ಯವನ್ನು ಒತ್ತಿಹೇಳುತ್ತದೆ.
ನಿರ್ಗತಿಕರ ನೋವಿಗೆ ಸ್ಪಂದಿಸುವ ಮನಸ್ಸು, ನಿರಾಶ್ರಿತರ ಕೈಹಿಡಿಯುವ ಹೃದಯ ಹಾಗೂ ಸೇವೆಯನ್ನು ಜೀವನದ ಧರ್ಮವನ್ನಾಗಿಸಿಕೊಳ್ಳುವ ಮನೋಭಾವವೇ ಸಮಾಜವನ್ನು ನಿಜವಾದ ಅರ್ಥದಲ್ಲಿ ಮಾನವೀಯ ಸಮಾಜವನ್ನಾಗಿ ರೂಪಿಸುತ್ತದೆ.
ವಿಶ್ವವು ತಂತ್ರeನದಲ್ಲಿ ಎಷ್ಟೇ ಮುಂದುವರಿದಿದ್ದರೂ, ಮಾನವೀಯ ಮಲ್ಯಗಳೇ ನಾಗರಿಕತೆಯ ನಿಜವಾದ ಅಳತೆ ಎಂಬ ಸತ್ಯವನ್ನು ನಾವು ಮರೆಯಬಾರದು. ಕಾರ್ಮೆಲ್ ದೇವಮಾತೆ ಆಶ್ರಯದ ತಾಯಿಯಾಗಿ ನೀಡುವ ಸಂದೇಶ ಪ್ರತಿಯೊಬ್ಬರನ್ನೂ ಪ್ರೀತಿ, ಕರುಣೆ, ಸೇವೆ, ಸಹಾನುಭೂತಿ ಮತ್ತು ಸಮರ್ಪಣೆಯ ಮಾರ್ಗದಲ್ಲಿ ನಡೆಯಲು ಆಹ್ವಾನಿಸುತ್ತದೆ. ಮನುಷ್ಯನ ಹೃದಯದಲ್ಲಿ ಕರುಣೆ ಜೀವಂತವಾಗಿರುವವರೆಗೆ ಸಮಾಜದಲ್ಲಿ ಭರವಸೆಯ ಬೆಳಕು ಎಂದಿಗೂ ಆರದು.
ಸಮಾಜದ ಅಂಚಿನಲ್ಲಿರುವ ಪ್ರತಿಯೊಬ್ಬರ ಬದುಕಿನಲ್ಲಿ ಆಶೆಯ ದೀಪ ಬೆಳಗಿದಾಗ, ನಿರ್ಗತಿಕನ ಮುಖದಲ್ಲಿ ನಗು ಅರಳಿದಾಗ, ಅನಾಥನಿಗೆ ತಾಯಿಯ ಮಮತೆ ದೊರೆತಾಗ ಮತ್ತು ದುಃಖಿತನ ಹೃದಯದಲ್ಲಿ ಹೊಸ ವಿಶ್ವಾಸ ಮೂಡಿದಾಗ ಮಾತ್ರ ನಿಜವಾದ ಅಭಿವೃದ್ಧಿಗೆ ಅರ್ಥ ಸಿಗುತ್ತದೆ.
ಆ ಆಶೆಯ ಬೆಳಕನ್ನು ತೋರಿಸುವ ಕರುಣಾಮಯಿ ತಾಯಿಯಾಗಿ ಕಾರ್ಮೆಲ್ ದೇವಮಾತೆ ಇಂದಿಗೂ ಕೋಟ್ಯಂತರ ಹೃದಯಗಳಲ್ಲಿ ಆಶಾಕಿರಣವಾಗಿ ಪ್ರಕಾಶಿಸುತ್ತಿzರೆ. ಆದ್ದರಿಂದಲೇ ಅವರ ಮೇಲಿನ ಭರವಸೆ ಎಂದಿಗೂ ಕ್ಷೀಣಿಸುವುದಿಲ್ಲ. ಸಂಕಷ್ಟದ ಪ್ರತಿಕ್ಷಣದಲ್ಲೂ ತಾಯಿಯ ಮಡಿಲಿನಂತಿರುವ ಅವರ ಆಶ್ರಯವು ಭಕ್ತರ ಬದುಕಿಗೆ ಹೊಸ ಧೈರ್ಯ, ಹೊಸ ವಿಶ್ವಾಸ ಮತ್ತು ಹೊಸ ಬೆಳಕನ್ನು ನೀಡುತ್ತದೆ ಎಂಬುದು ಕೋಟ್ಯಂತರ ಭಕ್ತರ ಅಚಲ ನಂಬಿಕೆಯಾಗಿದೆ.
ಈ ನಂಬಿಕೆಯೇ ಕಾರ್ಮೆಲ್ ದೇವಮಾತೆಯ ಮಹಿಮೆಯಾಗಿದೆ. ಈ ಕರುಣೆಯೇ ಅವರ ಆರಾಧನೆಯ ಶಕ್ತಿಯಾಗಿದೆ. ಈ ಸೇವಾಭಾವವೇ ಮಾನವೀಯ ಸಮಾಜ ನಿರ್ಮಾಣದ ಶಾಶ್ವತ ಮಾರ್ಗವಾಗಿದೆ.

ಮೊ: 9448343211, ಶಿವಮೊಗ್ಗ
