ಜಿಲ್ಲಾ ಸುದ್ದಿತಾಜಾ ಸುದ್ದಿ

ಅನಧೀಕೃತ ಸಾಮಿಲ್‌ಗಳು ಮತ್ತು ವುಡ್ ಇಂಡಸ್ಟ್ರಿಗಳನ್ನು ಮುಚ್ಚಲು ಆದೇಶ ….

Share Below Link

ಶಿವಮೊಗ್ಗ : ಹಾಸನ ಭಾಗದಲ್ಲಿ ಹೇರಳವಾಗಿ ಅರಣ್ಯನಾಶವಾಗುತ್ತಿದ್ದು, ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ. ರೈತ ಸಂಘ ಸಾರ್ವಜನಿಕ ಹಿತಾಸಕ್ತಿ ದಾವೆ ಹಾಕಿದ ನಂತರ ನ್ಯಾಯಾಲಯವೇ ಮಧ್ಯ ಪ್ರವೇಶಿಸಿ ಸ್ಥಳದಲ್ಲಿ ಸುತ್ತ ಮುತ್ತಲೂ ಕಾರ್ಯನಿರ್ವಹಿಸು ತ್ತಿದ್ದ ಸುಮಾರು ೪೫ಕ್ಕೂ ಹೆಚ್ಚು ಅನಧೀಕೃತ ಸಾಮಿಲ್‌ಗಳು ಮತ್ತು ವುಡ್ ಇಂಡಸ್ಟ್ರೀಗಳನ್ನು ಮುಚ್ಚಲು ಆದೇಶ ನೀಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿzರೆ.


ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಭಾಗದಲ್ಲಿ ೨೪ ಜಲವಿದ್ಯುತ್ ಯೋಜನೆಗೆ ಸರ್ಕಾರ ಪರವಾನಿಗೆ ನೀಡಿತ್ತು. ನೇತ್ರಾವತಿ ನದಿಗೆ ಸೇರುವ ಅನೇಕ ಉಪನದಿಗಳಿಗೆ ತಡೆಯೊಡ್ಡಿ ಸುರಂಗದ ಮೂಲಕ ವಿದ್ಯುತ್ ಉತ್ಪಾದಿಸುವ ಯೋಜನೆಗಳಿಗೆ ಸರ್ಕಾರ ಕೈಹಾಕಿತ್ತು. ಇದರಿಂದ ಸಾವಿರಾರು ಮರಗಳು ದಟ್ಟ ಅರಣ್ಯದಲ್ಲಿ ನಾಶವಾಗುತ್ತಿತ್ತು. ಮತ್ತು ಕಾಡುಪ್ರಾಣಿಗಳು ನಾಡಿಗೆ ದಾಳಿ ಇಟ್ಟಿದ್ದವು. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿದಾಗ ತಕ್ಷಣ ನ್ಯಾಯಾಲಯ ಈ ಯೋಜನೆಗಳನ್ನು ನಿಲ್ಲಿಸಲು ಆದೇಶ ನೀಡಿದೆ. ಸಾಮಾನ್ಯ ರೈತರು ತಮ್ಮ ಮನೆ ಅಂಗಳದಲ್ಲಿ ಬೆಳೆಸಿದ ಮರಗಳನ್ನು ಕಡಿಯಲು ನೂರಾರು ವಿಘ್ನಗಳನ್ನು ಒಡ್ಡುವ ಸಬೂಬು ಹೇಳುವ ಅರಣ್ಯ ಇಲಾಖೆ ಸಕಲೇಶಪುರ, ಹಾಸನ ಅರಣ್ಯ ಭಾಗದಲ್ಲಿ ಮರಗಳ್ಳರು ಲೂಟಿ ಹೊಡೆದರೂ ಕಣ್ಣುಮುಚ್ಚಿ ಕುಳಿತಿದೆ. ಕರ್ನಾಟಕದಲ್ಲಿ ಪ್ರತಿನಿತ್ಯ ೧ ಸಾವಿರ ಲೋಡ್ ಮರಗಳ ಕಳ್ಳಸಾಗಣೆ ಆಗುತ್ತಿದೆ. ಈ ಬಗ್ಗೆ ಅರಣ್ಯ ಸಚಿವ ಖಂಡ್ರೆ ಅವರ ಗಮನಕ್ಕೆ ತಂದರೂ ಕೂಡ ಅವರು ಯಾವುದೇ ಕ್ರ ಮ ಕೈಗೊಳ್ಳಲಿಲ್ಲ ಎಂದರು.
ರಾಜ್ಯದಲ್ಲಿ ೬೭೦ಕ್ಕೂ ಹೆಚ್ಚು ವುಡ್ ಇಂಡಸ್ಟ್ರೀಗಳು ನಡೆಯುತ್ತಾ ಇದ್ದು, ದೊಡ್ಡಮಟ್ಟದಲ್ಲಿ ಕೂಡ ಕಾರ್ಖಾನೆಗಳು ಕಾರ್ಯ ನಿರ್ವಹಿ ಸುತ್ತಿದ್ದು, ಅದರಲ್ಲಿ ಬಹುತೇಕ ಅನಧೀಕೃತವಾಗಿ ಪರವಾನಗಿ ಪಡೆಯದೇ ಕೆಲಸ ಮಾಡುತ್ತಿವೆ. ಲಕ್ಷಾಂತರ ಮರಗಳು ಖಾಲಿಯಾ ಗಿದೆ ಎಂದರು.
ಈ ಬಗ್ಗೆ ನಾವು ಮತ್ತೊಮ್ಮೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಿzವೆ. ಮುಖ್ಯಮಂತ್ರಿಗಳ ಗಮನಕ್ಕೂ ತಂದಿzವೆ. ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಹಿಂದೆ ಸಿದ್ದರಾಮಯ್ಯ ಮುಖ್ಯ ಮಂತ್ರಿಗಳಾಗಿzಗ ನೀಲಿಗಿರಿ ಮುಕ್ತ ಜಿಗಳು ಎಂದು ಆದೇಶ ಹೊರಡಿ ಸಿದ್ದರು. ಆದರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು
ಹರಿಹರ ಪಾಲಿಫೈಬರ್ ಸಂಸ್ಥೆಗೆ ನೀಡಲು ನೀಲಗಿರಿ ಬೆಳೆಸುತ್ತಿzರೆ. ರಾಜ್ಯದ ಹಲವು ದಟ್ಟ ಅರಣ್ಯಗಳ ಮಧ್ಯದಲ್ಲಿ ಕೂಡ ಹಿರಿಯ ಅಧಿಕಾರಿಗಳ ಆದೇಶದಂತೆ ನೀಲಗಿರಿ ಬೆಳೆಸುತ್ತಿzರೆ. ಇದಕ್ಕಾಗಿ ದೊಡ್ಡಮಟ್ಟದಲ್ಲಿ ಹಣದ ವ್ಯವಹಾರ ಅಧಿಕಾರಿಗಳ ಮಧ್ಯೆ ನಡೆದಿದೆ ಎಂದು ಆರೋಪಿಸಿದರು.
ಇದೊಂದು ದಂದೆಯಾಗಿ ಪರಿಗಣಿಸಿzರೆ. ನ್ಯಾಯಾಲಯ ಕೂಡಲೇ ಸರ್ಕಾರದಿಂದ ವರದಿ ತರಿಸಿಕೊಂಡು ಆದೇಶ ನೀಡಬೇಕಾಗಿದೆ. ಅರಣ್ಯ ಉಳಿಸುವ ಕನಿಷ್ಠ ಕಳಕಳಿ ಕೂಡ ಸರ್ಕಾರಕ್ಕಿಲ್ಲ. ಹಲವಾರು ವರ್ಷಗಳಿಂದ ಅರಣ್ಯದ ಗಡಿಭಾಗದಲ್ಲಿ ಹೊಟ್ಟೆಪಾಡಿಗಾಗಿ ಬಗರ್ ಹುಕುಂ ಸಾಗುವಳಿ ಮಾಡು ವ ರೈತರನ್ನು ಒಕ್ಕಲೆಬ್ಬಿಸಿ ಅರಣ್ಯ ನಾಶಕ್ಕೆ ಅವರೇ ಕಾರಣರು ಎಂದು ಹೇಳುವ ಅಧಿಕಾರಿಗಳು ಮರ ಕಡಿ ಯಲು ಮತ್ತು ಸಾಗಾಟಕ್ಕೆ ಅನಧೀಕೃತವಾಗಿ ಒಪ್ಪಿಗೆ ನೀಡುತ್ತಿರು ವುದು ದುರದೃಷ್ಟಕರ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಜು ನಾಥ್ ಗೌಡ, ಚಂದ್ರಶೇಖರ ಜಮಖಂಡಿ, ಅರುಣ್‌ಕುಮಾರ್, ಆರ್. ಮಂಜುನಾಥ್, ರವಿ, ಸುರೇಶ್ ನಾಯ್ಕ್ ಮತ್ತಿತರರಿದ್ದರು.