ಜಿಲ್ಲಾ ಸುದ್ದಿತಾಜಾ ಸುದ್ದಿ

ಮಕ್ಕಳಿಗೆ ವಿವಿಧ ಪರಿಕರ ಕೊಡುಗೆ

Share Below Link

ಶಿವಮೊಗ್ಗ: ನಗರದ ಸೋಮಿನಕೊಪ್ಪ ರಸ್ತೆಯಲ್ಲಿರುವ ವಿಶೇಷಚೇತನ ಮಕ್ಕಳ ತರಬೇತಿ ಕೇಂದ್ರ ಸರ್ಜಿ ಇನ್‌ಸ್ಟಿಟ್ಯೂಟ್ ಮತ್ತು ಇನ್ನರ್ ವ್ಹೀಲ್ ಈಸ್ಟ್ ಶಿವಮೊಗ್ಗ ಇವರ ಸಹಯೋಗದಲ್ಲಿ ಸರ್ಜಿ ಇನ್‌ಸ್ಟಿಟ್ಯೂಟ್‌ನಲ್ಲಿ ವಿಶೇಷ ಚೇತನ ಮಕ್ಕಳಿಗೆ ಟ್ರೆಡ್‌ಮಿಲ್, ವಾಕರ್ ಹಾಗೂ ಸೈಕಲ್‌ಗಳನ್ನು ಕೊಡುಗೆಯಾಗಿ ವಿತರಿಸಲಾ ಯಿತು.
ಈ ಸಂದರ್ಭ ಇನ್ನರ್ ವ್ಹೀಲ್ ಈಸ್ಟ್‌ನ ಅಧ್ಯಕ್ಷೆ ಶ್ರೀಮತಿ ಶ್ವೇತಾ ಆಶಿಕ್ ಅವರು ಮಾತನಾಡಿ, ಪ್ರತಿ ವರ್ಷವೂ ನಮ್ಮ ಸಂಸ್ಥೆ ಅನೇಕ ಸಮಾಜಮುಖಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ, ಅದರ ಭಾಗವಾಗಿ ಇಂದು ಜನರಿಂದ ದೇಣಿಗೆ ರೂಪದಲ್ಲಿ ಸಂಗ್ರಹವಾದ ಹಣದಲ್ಲಿ ವಿಶೇಷಚೇತನ ಮಕ್ಕಳಿಗೆ ಕೆಲವು ಪರಿಕರಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.
ಸರ್ಜಿ ಫೌಂಡೇಷನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ| ಧನಂಜಯ ಸರ್ಜಿ ಅವರು ಮಾತನಾಡಿ, ಇನ್ನರ್ ವ್ಹೀಲ್ ಸಂಸ್ಥೆಯ ಮಹಿಳಾ ತಂಡವು ಅತ್ಯಂತ ಉತರಸಾಹದಿಂದ ವಿಶೇಷಚೇತನ ಮಕ್ಕಳಿಗೆ ವಸ್ತುಗಳನ್ನು ನೀಡುತ್ತಿರುವ ಅವರ ಮಾನವೀಯ ಕಳಕಳಿಗೆ ಸಾಕ್ಷಿಯಾ ಗಿದೆ. ಇಂದಿನ ಸ್ಪರ್ಧಾತ್ಮಕ ಯುಗ ದಲ್ಲಿ ಮಹಿಳೆಯರು ಪ್ರತಿ ರಂಗದಲ್ಲೂ ತಮ್ಮದೇ ಆದ ಛಾಪು ಮೂಡಿಸಿzರೆ. ನಾಲ್ಕು ಗೋಡೆಗೆ ಸೀಮಿತಗೊಳ್ಳದೇ ಸಮಾಜಮುಖಿ ಯಾಗಿಯೂ ಸೇವೆ ಸಲ್ಲಿಸುತ್ತಿರು ವುದು ಅಭಿನಂದನೀಯ ಎಂದರು.
ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಈಸ್ಟ್‌ನ ಕಾರ್ಯದರ್ಶಿ ಶ್ರೀಮತಿ ವಾಗ್ದೇವಿ, ಡಿಸ್ಟ್ರಿಕ್ಟ್ ಚೇರ್ಮನ್ ಶ್ರೀಮತಿ ಪೂರ್ಣಿಮಾ ರವಿ, ಡಿಸ್ಟ್ರಿಕ್ಟ್ ಕಾರ್ಯದರ್ಶಿ ಶಬರಿ ಕಡಿದಾಳ್, ಶ್ರೀಮತಿ ಮಾಜಿ ಗವರ್ನರ್ ಸುಧಾ ಪ್ರಸಾದ್ ಹಾಗೂ ದಾನಿ ಶ್ರೀಮತಿ ವೀಣಾ ಸುರೇಶ್, ಸರ್ಜಿ ಇನ್‌ಸ್ಟಿಟ್ಯೂಟ್ ನಿರ್ದೇಶಕಿ ಶ್ರೀಮತಿ ನಮಿತಾ ಸರ್ಜಿ, ಮುಖ್ಯ ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ, ವಿಶೇಷಚೇತನ ಮಕ್ಕಳು ಹಾಗೂ ಪೋಷಕರು ಮೊದಲಾದವರು ಭಾಗವಹಿ ಸಿದ್ದರು.