ಕೆಲವರಿಂದ ಆಮ್ ಆದ್ಮಿ ಪಕ್ಷದ ಹೆಸರು ದುರ್ಬಳಕೆ: ನಿರೋಜಿತ ಅಧ್ಯಕ್ಷರ ಆರೋಪ
ಶಿವಮೊಗ್ಗ: ಆಮ್ ಆದ್ಮಿ ಪಕ್ಷ ದ ಹೆಸರನ್ನು ಕೆಲವರು ದುರು ಪ ಯೋಗಪಡಿಸಿಕೊಂಡು ಪಕ್ಷವನ್ನು ಒಡೆಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ನಿಯೋಜಿತ ಜಿಲ್ಲಾ ಧ್ಯಕ್ಷ ಶಶಿಕುಮಾರ್ ಗೌಡ ಸುದ್ದಿ ಗೋಷ್ಟಿಯಲ್ಲಿ ಆರೋಪಿಸಿದರು.
ಈಚೆಗೆ ಆಮ್ ಆದ್ಮಿಪಕ್ಷದ ವರೆಂದು ಹೇಳಿಕೊಂಡ ಕೆಲವರು ಪತ್ರಿಕಾ ಗೋಷ್ಠಿ ನಡೆಸಿ ನಾವು ಆಮ್ ಆದ್ಮಿ ಬಿಡುತ್ತಿದ್ದೇವೆ. ಬೇರೆ ಪಕ್ಷ ಸೇರುತ್ತೇವೆ. ಈಗ ತಟಸ್ಥ ವಾಗಿದ್ದೇವೆ. ಈ ಪಕ್ಷದಲ್ಲಿ ಇರು ವುದು ಬೇಡ ಎಂದೆಲ್ಲಾ ಹೇಳಿಕೊಂ ಡು ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಅಧಿಕಾರದ ಆಸೆಗಾಗಿ ಪಕ್ಷಕ್ಕೆ ಸೇರಿ ಕೊಂಡ ಇವರು ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿದ್ದಾರೆ. ಈ ಕೂಡಲೇ ಕಾರ್ಯ ಕರ್ತರಲ್ಲಿ ಗೊಂದಲ ಮೂಡಿಸು ವುದನ್ನು ಬಿಡಬೇಕು ಎಂದು ಪಕ್ಷ ತೊರೆದವರಿಗೆ ಎಚ್ಚರಿಕೆ ನೀಡಿ ದರು.
ಮುಖ್ಯಮಂತ್ರಿ ಚಂದ್ರು ಪಕ್ಷದ ರಾಜಧ್ಯಕ್ಷರಾಗಿ ನೇಮಕ ವಾದ ಮೇಲೆ ಜಿಲ್ಲಾ ಮಟ್ಟದಲ್ಲಿ ಹೊಸ ಪದಾಧಿಕಾರಿಗಳ ನೇಮಕ ಮಾಡಿದ್ದಾರೆ. ಹೊಸ ಪದಾಧಿಕಾರಿಗಳು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಾಗಿದೆ. ಆದರೆ ಈ ನೇಮಕಾತಿ ವಿಷಯ ತಿಳಿಯುತ್ತಿ ದ್ದಂತೆ ಕೆಲವರು ಪಕ್ಷ ಬಿಟ್ಟು ಹೋ ಗಿದ್ದಾರೆ. ಅವರು ಪಕ್ಷ ಬಿಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಇಲ್ಲಸಲ್ಲದ ವಿಷಯಗಳನ್ನು ಹೇಳಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಕೂಡಲೇ ಇದನ್ನು ನಿಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿಲ್ಲಾಧ್ಯಕ್ಷ ಕಿರಣ್, ಪ್ರಮುಖರಾದ ಸುರೇಶ್ ಕೋಟೇಕಾರ್, ನಿಂಬೆಹಣ್ಣು ನಿಂಗರಾಜ್, ನಜೀರ್, ಶೋಭಾ, ಮಂಜುಳಾ, ಅಲ್ಬರ್ಟ್ವಿಜಯ್, ಅಪರ್ಣಾ, ಲಕ್ಷೀಶ್ ಮುಂತಾದವರಿದ್ದರು.