ಜಿಲ್ಲಾ ಸುದ್ದಿತಾಜಾ ಸುದ್ದಿ

ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಜಾನುವಾರು ಸಹಿತ ವಿಧಾನಸೌಧ ಮುತ್ತಿಗೆ: ಸರ್ಕಾರಕ್ಕೆ ರೈತ ಸಂಘದ ಎಚ್ಚರಿಕೆ

Share Below Link

ಶಿಕಾರಿಪುರ: ಭೀಕರ ಬರಗಾಲ ದಿಂದ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಉದ್ಭವವಾ ಗಿದ್ದು, ರೈತರನ್ನು ಕಾಪಾಡಬೇಕಾದ ಸರ್ಕಾರ ಮಾತ್ರ ಗ್ಯಾರೆಂಟಿ ಸುತ್ತ ಗಿರಕಿ ಹೊಡೆಯುತ್ತಾ ವಿರೋಧ ಪಕ್ಷಗಳು ಮುಂದಿನ ಚುನಾವಣೆ ಯಲ್ಲಿ ಗೆಲವು ಸಾಧಿಸಿ ಅಧಿಕಾರ ಹಿಡಿಯುವ ಹವಣಿಕೆಯಲ್ಲಿzರೆ ಇಂತಹ ಸಂಕಷ್ಟದ ಸ್ಥಿತಿಯಲ್ಲಿ ರೈತ ಸಮುದಾಯ ದೈರ್ಯ ಆತ್ಮಸ್ಥೈ ರ್ಯ ಕಳೆದುಕೊಳ್ಳದೆ ಹೋರಾ ಟದ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿ ಉಪಾಧ್ಯಕ್ಷ ಬೇಗೂರು ಶಿವಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ರಾಜ್ಯದ ಎ ತಾಲೂಕು ಬರಗಾಲ ಪೀಡಿತ ಎಂದು ಘೋಷಣೆಗೆ ಆಗ್ರಹಿಸಿ, ಸಮರ್ಪಕ ವಿದ್ಯುತ್ ಸರಬರಾಜು,ಬ್ಯಾಂಕ್ ಫೈನಾನ್ಸ್ ಗಳ ಸಾಲ ವಸೂಲಾತಿ ಕಿರುಕುಳ ಖಂಡಿಸಿ ಹಾಗೂ ರಾಜ್ಯದ ಎಲ್ಲ ರೈತರ ಪಂಪ್ ಸೆಟ್‌ಗಳ ಆರ್‌ಆರ್ ನಂಬರ್‌ಗಳಿಗೆ ಆಧಾರ್ ಜೋಡಣೆಯ ಸರ್ಕಾರದ ನಿರ್ದಾರ ವನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ರಾಜದ್ಯಂತ ಭೀಕರ ಬರಗಾಲದಿಂದ ರೈತ ಸಮೂಹ ಕಂಗೆಟ್ಟಿದ್ದು,ಪರಿಸ್ಥಿತಿಯ ವಿಕೋ ಪಕ್ಕೆ ರೈತರು ಆತ್ಮಹತ್ಯೆಗೆ ಶರಣಾ ಗುವ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು ದೇಶಕ್ಕೆ ಅನ್ನ ನೀಡು ವ ರೈತರು ಎಂತಹ ಸ್ಥಿತಿಯ ಲ್ಲಿಯೂ ದೈರ್ಯ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಎಚ್ಚರಿಸಿದ ಅವರು ಇಂತಹ ಸ್ಥಿತಿಯಲ್ಲಿ ರೈತರ ನ್ನು ಪಾರು ಮಾಡಬೇಕಾದ ಸರ್ಕಾರ ಮಾತ್ರ ರೈತರ, ಕೃಷಿ ಕಾರ್ಮಿಕರ ವರ್ತಮಾನದ ಸಂಕಷ್ಟಗಳನ್ನು ನಿರ್ಲಕ್ಷಿಸಿ ಗ್ಯಾರೆಂಟಿಗಳ ಸುತ್ತ ಗಿರಕಿ ಹೊಡೆಯುತ್ತಿದೆ ವಿರೋಧ ಪಕ್ಷಗ ಳು ಮುಂದಿನ ಚುನಾವಣೆಯಲ್ಲಿ ಗೆಲವು ಸಾಧಿಸಿ ಅಧಿಕಾರ ಹಿಡಿಯುವ ಹವಣಿಕೆಯಲ್ಲಿzರೆ ಎಂದು ಆರೋಪಿಸಿದರು.
ಕಾಲಕಾಲಕ್ಕೆ ಸದ್ದಿಲ್ಲದೆ ವೇತನ ಹೆಚ್ಚಳಗೊಳಿಸುತ್ತಿರುವ ಶಾಸಕ, ಸಂಸದರು ರೈತರ ಬಗ್ಗೆ ಮಾತ್ರ ಚಿಂತಿಸುತ್ತಿಲ್ಲ ತಾ.ಪಂ ಜಿ.ಪಂ ಚುನಾವಣೆ ನಡೆಸದೆ ಅನುದಾನ ವಿಲ್ಲ, ರೈತ ಸಮುದಾಯದ ನೆಮ್ಮದಿಯಿಂದ ಮಾತ್ರ ಸಮಸ್ತರು ನೆಮ್ಮದಿ ಕಾಣಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ಸರ್ಕಾರ ಮದ್ಯಂತರ ಬೆಳೆ ಹಾನಿ ವಿಮೆ ಪರಿಹಾರ ನೀಡುವ ಜತೆಗೆ ಭತ್ತಕ್ಕೆ ರೂ.೫ ಸಾವಿರ,ಜೋಳಕ್ಕೆ ರೂ.೪ ಸಾವಿರ,ಹತ್ತಿಗೆ ರೂ.೧೫ ಸಾವಿರ,ಅಡಿಕೆಗೆ ರೂ.೬೦ ಸಾವಿರ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿದರು.
ರೈತರ ಬೇಡಿಕೆಗಳನ್ನು ಕೂಡ ಲೇ ಪರಿಹರಿಸದಿದ್ದಲ್ಲಿ ವಿಧಾನ ಸೌಧಕ್ಕೆ ಜನುವಾರುಗಳ ಸಹಿತ ಮುತ್ತಿಗೆ ಹಾಕಿ ಪ್ರತಿಭಟಿ ಸುವ ಎಚ್ಚ ರಿಕೆ ನೀಡಿದ ಅವರು ಪ್ರತಿಬಾರಿ ಹೋರಾಟಕ್ಕೆ ಆಗಮಿಸಲು ದೂರ ದ ಹಳ್ಳಿಗಳಿಂದ ನೂರಾರು ಹಣ ವ್ಯಯಿಸಿ ಆಗಮಿ ಸುವ ರೈತರು ಈ ಬಗ್ಗೆ ಉಗ್ರ ಹೋರಾಟವನ್ನು ಹಮ್ಮಿಕೊಳ್ಳ ವುದು ಅನಿವಾರ್ಯ ವಾಗಲಿದೆ ಎಂದು ತಿಳಿಸಿದರು.
ನಂತರದಲ್ಲಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ರೈತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಗೌರವಾಧ್ಯಕ್ಷ ಪರಮೇಶ್ವರಪ್ಪ ಕೊರಟಗೆರೆ,ಅಧ್ಯಕ್ಷ ಶಿವಮೂರ್ತಪ್ಪ, ಪ್ರಮುಖರಾದ ಪರಮೇಶ್ವರಪ್ಪ, ಮಂಜುನಾಥ್, ಮಂಜಪ್ಪ ಗಾಮ, ಬೇಗೂರು ಅಬ್ದುಲ್ ಮುನಾಫ್,ಪ್ರಕಾಶಪ್ಪ, ಹೊನ್ನಪ್ಪ,ಶ್ರೀಪಾದ ಆಚಾರ್ ಮತ್ತಿತರರು ಉಪಸ್ಥಿತರಿದ್ದರು.