ಇ-ಪೇಪರ್‌

ಒತ್ತಡ ಜೀವನಶೈಲಿಯಿಂದ ಹೊರಬರಲು ಧ್ಯಾನ ಅತ್ಯುತ್ತಮ ಮಾರ್ಗ…

Share Below Link

ಶಿವಮೊಗ್ಗ :ನಮ್ಮ ದೈನಂದಿನ ಜೀವನದ ಒತ್ತಡದಿಂದ ಹೊರಬರಲು ಧ್ಯಾನ ಸಹಕಾರಿ ಯಾಗುತ್ತದೆ. ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿ ವಾಣಿಜ್ಯ ಸಂಘದ ಅಧ್ಯಕ್ಷ ಗೋಪಿನಾಥ್ ಹೇಳಿದರು.
ಜಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಅಂತರ ರಾಷ್ಟ್ರೀಯ ಕೇಂದ್ರದ ಸಹಯೋಗ ದೊಂದಿಗೆ ಸಂಘದ ಶಾಂತಲಾ ಸ್ಪೇರೋಕಾಸ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಧ್ಯಾನ, ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು, ವೃತ್ತಿಪರರು ದಿನನಿತ್ಯದ ಒತ್ತಡದ ಜೀವನದಿಂದ ಹೊರಬಂದು ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಪ್ರಾಣಾ ಯಾಮ, ಧ್ಯಾನ ಅಭ್ಯಾಸ ಮಾಡ ಬೇಕು. ಆಧ್ಯಾತ್ಮಿಕ ಪ್ರೇರಣಾತ್ಮಕ ಲಯಬದ್ಧ ಉಸಿರಾಟದಿಂದ ಶ್ವಾಸಕೋಶದ ಮೂಲಕ ಒತ್ತಡ ನಿರ್ವಹಿಸಬಹುದು ಎಂದರು.
ಸಂಪನ್ಮೂಲ ವ್ಯಕ್ತಿ ರವಿಶಂಕರ್ ಗುರೂಜಿ ಅವರ ಆಪ್ತ ಸಹಾಯಕ ಕೃಷ್ಣ ಜಿ ಮಾತನಾಡಿ, ಧ್ಯಾನ, ಪ್ರಾಣಯಾಮ, ಲಯಬದ್ಧ ಉಸಿ ರಾಟದಿಂದ ಒತ್ತಡ ನಿರ್ವಹಣೆ ಹೇಗೆ ಮಾಡಿಕೊಳ್ಳಬೇಕು ಹಾಗೂ ತಮ್ಮ ಮಾನಸಿಕ ಆರೋಗ್ಯವನ್ನು ಸಮತೋಲನದಿಂದ ನಿರ್ವಹಣೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದರು.