ಜಿಲ್ಲಾ ಸುದ್ದಿತಾಜಾ ಸುದ್ದಿ

ಡಿ.೨೧: ತೊರೆದು ಜೀವಿಸಬಹುದೇ ಸಂಗೀತ ಸಂಜೆ ವಿಶೇಷ ಕಾರ್ಯಕ್ರಮ…

Share Below Link

ಶಿವಮೊಗ್ಗ: ಶ್ರೀ ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ, ಶ್ರೀ ಗಾಯತ್ರಿ ಜ್ಯುವೆಲ್ಲರ್ಸ್, ದುರ್ಗಿಗುಡಿ, ಗೋಪಾಳಗೌಡ ಬಡಾವಣೆಯ ಗುಡಿ ಎಂಪೋರಿಯಂ ಆಶ್ರಯದಲ್ಲಿ ಡಿ.೨೧ರಂದು ಸಂಜೆ ೫.೩೦ಕ್ಕೆ ಕುವೆಂಪು ರಂಗಮಂದಿರದಲ್ಲಿ ತೊರೆದು ಜೀವಿಸಬಹುದೇ ಎಂಬ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವೇದಿಕೆಯ ಮುಖ್ಯಸ್ಥ ಶಶಿ ಎಸ್. ಮಂಗಳಗಾರ್ ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ವೇದಿಕೆಯು ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಆಯೋಜಿಸುತ್ತಾ ಬರುತ್ತಿದೆ. ಈ ಬಾರಿಯೂ ಕೂಡ ದೇಶದಲ್ಲಿ ಮತ್ತು ಅನೇಕ ರಾಜ್ಯ ಗಳಲ್ಲಿ ಹಾಡಿ ಪ್ರೇಕ್ಷಕರಿಂದ ಪ್ರಶಂಸೆಗೆ ಪಾತ್ರರಾದ ಹಿಂದೂಸ್ಥಾನಿ ಗಾಯಕರೂ ಆದ ನೌಶಾದ್ ಹರ್ಲಾಪುರ್, ನಿಶಾದ್ ಹರ್ಲಾಪೂರ್ ಸಹೋದರರಿಂದ ಭಕ್ತಿ-ಭಾವ ಹಾಗೂ ಹಳೆಯ ಚಿತ್ರಗೀತೆಗಳು, ಸ್ವರಸಂಧ್ಯಾ, ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಾದ್ಯವೃಂದ ದಲ್ಲಿ ಮಳೆಮಶ್, ರಘುನಂದನ್, ವಿ.ಮನೋಜ್, ಹುಲ್ಲಮನಿ, ವಿ. ಶುಭೋದ್, ಬಸವರಾಜ್ ಹಿರೇಮಠ್, ದಿಲ್‌ಶಾದ್ ಹರ್ಲಾಪುರ್ ಮುಂತಾದವರು ಸಾತ್ ಕೊಡಲಿzರೆ ಎಂದ ಅವರು, ಇದೇ ಸಂದರ್ಭದಲ್ಲಿ ತೆರಿಗೆ ಇಲಾಖೆಯ ಜಂಟಿ ಆಯುಕ್ತ ವಿಜಯಕುಮಾರ್ ಎಂ. ಭತ್ತದ್ ಅವರನ್ನು ಗೌರವಿಸಲಾಗುವುದು ಎಂದರು.
ಪ್ರವೇಶ ಉಚಿತವಾಗಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಬೇಕು ಎಂದು ಮನವಿ ಮಾಡಿದರು.
ಪ್ರಮುಖರಾದ ರಮೇಶ್, ನಾರಾಯಣ್, ಭರತ್, ಸ್ಟಾಲಿನ್ ಜವಿದ್ ಮುಂತಾದವರಿದ್ದರು.