ಜಿಲ್ಲಾ ಸುದ್ದಿತಾಜಾ ಸುದ್ದಿ

ತಾರುಣ್ಯದ ಶಕ್ತಿ ಸುಕೃತಿಯಿಂದ ಶ್ರೇಷ್ಠವಾಗಲಿ: ಸಹನಾ

Share Below Link

ಶಿವಮೊಗ್ಗ: ಯುವಶಕ್ತಿಯು ಸಕಾರಾತ್ಮಕ ಆಲೋಚನೆಯಿಂದ ರಾಷ್ಟ್ರಕ್ಕಾಗಿ, ಸಮಾಜಕ್ಕಾಗಿ ಸೇವೆ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ಸಮಸ್ಯೆಗಳನ್ನು ಸೌಜನ್ಯಯುತವಾಗಿ ಬಗೆಹರಿಸಿ ಕೊಂಡು ಸಂಘಟನಾತ್ಮಕವಾಗಿ ಪ್ರಖರ ಶಕ್ತಿಯಾಗಿ ಹೊರಹೊಮ್ಮ ಬೇಕು. ತಾರುಣ್ಯದ ಶಕ್ತಿ ಸುಕೃತಿ ಯಿಂದ ಶ್ರೇಷ್ಠವಾಗಲಿ ಎಂದು ನೃತ್ಯ ಗುರು ಸಹನಾ ಚೇತನ್ ಆಶಿಸಿದರು.
ಎಟಿಎನ್‌ಸಿ ಕಾಲೇಜಿನ ಎನ್‌ಎಸ್‌ಎಸ್ ವತಿಯಿಂದ ಕಾಲೇಜಿನ ಚಂದನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಕುವೆಂಪು ವಿವಿ ಮಟ್ಟದ ಅಂತರ ಕಾಲೇಜು ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿ ಜೀವನ ದಲ್ಲಿ ಸೇವೆ ಹಾಗೂ ಸಾಮಾಜಿಕ ಕಾಳಜಿಯ ಮಹತ್ವ ಎಂಬ ವಿಷಯ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಬದುಕಿನ ಅತ್ಯಂತ ಮಹತ್ವದ ಘಟ್ಟ. ಕಠಿಣ ಅಭ್ಯಾಸ, ಪ್ರಯತ್ನ, ಪರಿಶ್ರಮದಿಂದ ನಿಖರ ಗುರಿಯನ್ನು ಸಾಧಿಸಬೇಕು. ಕೇವಲ ಪಠ್ಯಕಷ್ಟೇ ಸೀಮಿತವಾಗದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿ ಕೊಳ್ಳಬೇಕು. ಇಂತಹ ಸೇವೆಯಿಂದ ಬದುಕು ಸಾರ್ಥಕವಾಗುತ್ತದೆ. ಸ್ವಾರ್ಥಕ್ಕಾಗಿ ಬದುಕದೆ ಸಾಮಾಜಿಕ ವಾಗಿ ಜೀವನ ನಡೆಸುವ ಬಗೆಯನ್ನು ಎನ್‌ಎಸ್‌ಎಸ್ ಕಲಿಸಿಕೊಡುತ್ತದೆ ಎಂದರು.
ತ್ಯಾಗ, ಭೋಗ, ಸ್ವಾರ್ಥ ಸೇವೆಗಳ ವ್ಯತ್ಯಾಸವನ್ನು ಅರಿತಾಗ ಮಾತ್ರ ಮಾನವ ಮಾಧವ ನಾಗುತ್ತಾನೆ. ಉನ್ನತ ಮಟ್ಟದ ಯೋಚನೆ ಮಾಡಿದಾಗ ನರ ನಾರಾಯಣನಾಗಬಲ್ಲ. ಇಲ್ಲದಿದ್ದಲ್ಲಿ ನರಮಾನವ ವಾನರನೂ ಆಗಬಲ್ಲ. ತ್ಯಾಗ ಮತ್ತು ಸೇವೆಯಲ್ಲಿ ಸಿಗುವ ಆನಂದ ಅಸದಳ ಎಂದರು.
ಎನ್‌ಇಎಸ್ ನಿರ್ದೇಶಕ ಎಂ.ಜಿ. ರಾಮಚಂದ್ರಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕುವೆಂಪು ವಿವಿಯ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ, ಎಟಿಎನ್‌ಸಿ ಕಾಲೇಜಿನ ಪ್ರಾಂಶು ಪಾಲೆ ಪ್ರೊ. ಮಮತಾ ಪಿ.ಆರ್., ಪ್ರೊ| ಕೆ.ಎಂ. ನಾಗರಾಜು, ಪ್ರೊ| ಜಗದೀಶ್ ಎಸ್., ಪ್ರೊ| ಎನ್. ಮಂಜುನಾಥ್ ಉಪಸ್ಥಿತರಿದ್ದರು.