ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಜನವಿರೋಧಿ ಕಾಂಗ್ರೆಸ್‌ಗೆ ಕಡಿವಾಣ ಹಾಕಬೇಕಿದೆ : ಶಾಸಕ ಪೂಂಜ

Share Below Link

ಪುತ್ತೂರು : ಜನ ವಿರೋಧಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ಗೆ ಕಡಿವಾಣ ಹಾಕಬೇಕೆಂದರೆ ವಿಧಾನ ಪರಿಷತ್‌ನಲ್ಲಿ ಮೈತ್ರಿಕೂಟದ ಹೆಚ್ಚು ಅಭ್ಯರ್ಥಿಗಳು ಗೆಲುವು ಸಾಧಿಸಬೇಕಿದೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಮತದಾರರ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿ, ಜನ ವಿರೋಧಿ ಮಸೂದೆಗಳನ್ನು ತಡೆಯಬೇಕಾದರೆ ವಿಧಾನ ಪರಿಷತ್‌ನಲ್ಲಿ ನಮ್ಮ ಪಕ್ಷಗಳ ಬಹುಮತ ಅಗತ್ಯ. ಹಾಗಾಗಿ ಸಮರ್ಥರಾದ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ಪ್ರಚಂಡ ಮತಗಳಿಂದ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ಊಟ ಶರೀರಕ್ಕೆ ತೃಪ್ತಿ ಕೊಡುತ್ತೆ, ಪಾಠ ಮೆದುಳಿಗೆ ತೃಪ್ತಿ ಕೊಡುತ್ತೆ, ಆಟ ಮನಸ್ಸಿಗೆ ತೃಪ್ತಿ ಕೊಡುತ್ತೆ, ನಿಜವಾದ ನಿಸ್ವಾರ್ಥ ಸೇವೆ ಮನಸ್ಸಿಗೆ ತೃಪ್ತಿ ಕೊಡುತ್ತದೆ, ಇಂತಹ ಸೇವಾ ಮನೋಭಾವನೆಯೊಂದಿಗೆ ವೈದ್ಯಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ, ಪದವೀಧರ ಕ್ಷೇತ್ರದ ಸಮಸ್ಯೆಗಳ ಸಂಪೂರ್ಣ ನನಗಿದ್ದು, ಮತ ನೀಡುವ ಮೂಲಕ ಸೇವೆ ಮಾಡಲು ಅವಕಾಶ ಮಾಡಿಕೊಡುವಂತೆ ಅವರು ಮನವಿ ಮಾಡಿದರು.
ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಭೋಜೇಗೌಡ ಮಾತನಾಡಿ, ಪರಿಷತ್ ಸದಸ್ಯನಾಗಿ ಈಗಾಗಲೇ ನಾನು ಸೇವೆ ಸಲ್ಲಿಸಿದ್ದೇನೆ, ಶಿಕ್ಷಕರು, ನೌಕರರ ಸಮಸ್ಯೆಗಳ ಸಂಪೂರ್ಣ ಅರಿವು ನನಗಿದೆ, ನಿಮ್ಮ ಸಮಸ್ಯೆಗಳಿಗೆ ನಾನು ಸ್ಪಂದಿಸಲು ಸದಾ ಬದ್ಧನಾಗಿದ್ದೇನೆ, ತಿದ್ದಿ ತೀಡುತ್ತಾ ಸದೃಢ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರು ಹಾಗೂ ಪದವೀಧರ ಮತದಾರರು ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

This image has an empty alt attribute; its file name is Arya-coll.gif

Leave a Reply

Your email address will not be published. Required fields are marked *