ಜಿಲ್ಲಾ ಸುದ್ದಿತಾಜಾ ಸುದ್ದಿಶಿಕ್ಷಣ

ಮೇ ೨೯: ಕಲ್ಮನೆ ಸರ್ಕಾರಿ ಪ್ರೌಢಶಾಲೆ ಭೋಜನಾಲಯ ಲೋಕಾರ್ಪಣೆ…

Share Below Link

ಶಿಕಾರಿಪುರ : ಮೇ೨೯ರ ಶುಕ್ರವಾರ ತಾಲೂಕಿನ ಕಲ್ಮನೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ದಾನಿಗಳಿಂದ ಸಂಗ್ರಹಿಸಿದ ದೇಣಿಗೆಯಲ್ಲಿ ನೂತನ ವಾಗಿ ನಿರ್ಮಿಸಲ್ಪಟ್ಟ ಅನ್ನ ಪೂರ್ಣೇಶ್ವರಿ ಭೋಜನಾಲಯ ಲೋಕಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್ ನಾಯ್ಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಗಾಲ ದಲ್ಲಿ ಮಳೆಯಲ್ಲಿಯೇ ಶಾಲೆಯ ಕಾರಿಡಾರ್‌ನಲ್ಲಿ ಕುಳಿತು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದ ಶಾಲಾ ವಿದ್ಯಾರ್ಥಿಗಳ ಸಮಸ್ಯೆ ಅರಿತು ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ನೂತನ ಭೋಜನಾಲಯ ನಿರ್ಮಿಸಲು ತೀರ್ಮಾನ ಕೈಗೊಂಡರು. ಸರ್ಕಾರದ ಅನುದಾನ ಲಭ್ಯವಿಲ್ಲದಿ ರುವುದರಿಂದ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಶಾಲೆಯ ಆವರಣದ ೪೨* ೫೨ ಅಳತೆಯಲ್ಲಿ ಏಕಕಾಲಕ್ಕೆ ೨೦೦ಕ್ಕೂ ಅಧಿಕ ವಿದ್ಯಾರ್ಥಿಗಳು ಕುಳಿತು ಊಟ ಸೇವಿಸುವ ದೊಡ್ಡ ಭೋಜನಾಲಯ ನಿರ್ಮಿಸಲಾಗಿದೆ ಎಂದು ತಿಳಿಸಿದರು.


೨೦೦೭ರಲ್ಲಿ ಬಸವಯ್ಯರವರ ಪುತ್ರ ಎಚ್.ಶಿವಕುಮಾರ ಸ್ವಾಮಿ ರವರ ಭೂದಾನದಿಂದ ಸರ್ಕಾರಿ ಪ್ರೌಢಶಾಲೆ ನಿರ್ಮಾಣವಾಗಿದ್ದು ಇದೀಗ ಭೋಜನಾಲಯದಿಂದ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಎಲ್ಲ ರೀತಿಯಲ್ಲಿ ಸಜಗಿದೆ ಎಂದ ಅವರು ಇದೇ ೨೯ ರ ಬೆಳಿಗ್ಗೆ ೧೦.೩೦ಕ್ಕೆ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ನೂತನ ಬೋಜನಾ ಲಯ ಉದ್ಘಾಟಿಸಲಿದ್ದು, ಮಾನಿ ಪುರ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿzರೆ. ದಾನಿಗಳ ನಾಮಫಲಕ ಅನಾವರಣವನ್ನು ಸಂಸದ ರಾಘವೇಂದ್ರ ನೆರವೇರಿಸಲಿದ್ದು, ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಶಾಸಕ ವಿಜಯೇಂದ್ರ ವಿತರಿಸಲಿzರೆ.ಅ ಧ್ಯಕ್ಷತೆಯನ್ನು ಬೋಜನಾಲಯ ನಿರ್ಮಾಣ ಸಮಿತಿ ಅಧ್ಯಕ್ಷ ಕೆ ಎಂ ನಾಗರಾಜ್ ವಹಿಸಲಿzರೆ ಎಂದು ತಿಳಿಸಿದರು.
ಸುಮಾರು ೧೮೦ ದಾನಿಗಳಿಂದ ರೂ.೨೨ ಲಕ್ಷ ಧನ ಸಹಾಯದಿಂದ ಅನ್ನಪೂರ್ಣೇಶ್ವರಿ ಭೋಜನಾ ಲಯ ನಿರ್ಮಿಸಲಾಗಿದೆ. ನಿವೃತ್ತ ಶಿಕ್ಷಕ ಬಿ.ಕೆ ಮಂಜಪ್ಪ ರೂ. ೨,೨೬,೦೦೦, ಸಮಿತಿಯ ಅಧ್ಯಕ್ಷ ಕೆ.ಎಂ.ನಾಗರಾಜ್, ಸುರೇಶ್, ಮಂಜಪ್ಪ, ಪೃಥ್ವಿರಾಜ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ತಲಾ ರೂ.೧ಲಕ್ಷ ರೂಪಾಯಿ ಧನ ಸಹಾಯದ ಜತೆಗೆ ಉಷಾ ಲಕ್ಷ್ಮಣಪ್ಪ ೩೦೦ ಚೀಲ ಸಿಮೆಂಟ್ ನೀಡಿzರೆ ಎಂದು ವಿವಿರಿಸಿದರು.
ಎಸ್ ಡಿ ಎಂ ಸಿ ಸಮಿತಿ ಅಧ್ಯಕ್ಷ ಸಿ.ಕರಿಬಸಪ್ಪ, ಪ್ರಮುಖರಾದ ಬಿ.ಕೆ. ಮಂಜಪ್ಪ, ಸುರೇಶಣ್ಣ, ರಂಗನಾಥ್, ಅಮ್ಜದ್‌ಖಾನ್, ಕುಮಾರ ಸ್ವಾಮಿ, ಫೈರೋಜ್, ಗಣಪತಿ ಇನ್ನಿತರರಿದ್ದರು.

Leave a Reply

Your email address will not be published. Required fields are marked *