ಫ್ರೀಡಂ ಪಾರ್ಕ್‌ನಲ್ಲಿ ಮಲೆನಾಡು ಉತ್ಸವ …
ಶಿವಮೊಗ್ಗ: ಅರುಣೋದಯ ಇವೆಂಟ್ಸ್, ಗೋಗ್ರೀನ್ ಮತ್ತು ಪೃಥ್ವಿಗೌಡ ಕಲ್ಚರಲ್ ಈವೆಂಟ್ಸ್ ಸಹಯೋಗ ದೊಂದಿಗೆ ಜ.೧೦ ಮತ್ತು ೧೧ ರಂದು ಅಲ್ಲಮ ಪ್ರಭು ಫ್ರೀಡಂ ಪಾರ್ಕ್ ನಲ್ಲಿ “ಮಲೆನಾಡು ಉತ್ಸವ” ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೃಥ್ವಿ ಗೌಡ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜ.೧೦ ರಂದು ಬೆಳಿಗ್ಗೆ ೧೦ ಗಂಟೆಗೆ ನಾಡಗೀತೆಗೆ ೧೦೦ ವರ್ಷದ ಸಂಭ್ರಮ ಹಾಗೂ ರಾಷ್ಟ್ರಗಾಯನ ವಂದೇ ಮಾತರಂಗೆ ೧೫೦ ವರ್ಷದ ಸಂಭ್ರಮದ ಅಂಗವಾಗಿ ಪೋದಾರ್ ಇಂಟರ್‌ನ್ಯಾಷನಲ್ ಶಾಲೆಯ ೧೫೦ ಮಕ್ಕಳಿಂದ ಏಕಕಂಠ ಗಾಯನದ ಮೂಲಕ ಈ ಕಾರ್ಯ ಕ್ರಮವು ಉದ್ಘಾಟನೆಗೊಳ್ಳಲಿದೆ ಎಂದರು.
ಗೋಲ್ಡರ್ ವಾಯ್ಸ್ ಆಫ್ ಮಲೆನಾಡು ರಾಜ್ಯಮಟ್ಟದ ಗಾಯನ ಸ್ಪರ್ಧೆ ಗ್ರಾಂಡ್ ಫಿನಾಲೆ ಹಾಗೂ ನೃತ್ಯೋತ್ಸವ ಕಾರ್ಯಕ್ರಮ ವನ್ನು ಸ್ಥಳೀಯ ೬ ನೃತ್ಯ ತಂಡ ಗಳಿಂದ ಡೊಳ್ಳುಕುಣಿತ, ಯಕ್ಷಗಾನ, ಚಲನಚಿತ್ರ, ನೃತ್ಯ ಪ್ರಕಾರಗಳು ನಡೆಯಲಿದ್ದು, ಗ್ರಾಂಡ್ ಫಿನಾಲೆ ಯಲ್ಲಿ ೧೧ ಸ್ಪರ್ಧಿಗಳು ಫೈನಲ್‌ಗೆ ಬಂದಿದ್ದು, ಇದರಲ್ಲಿ ಜ್ಯೂನಿಯರ್ ಐದು ಸ್ಪರ್ಧಿಗಳು ಹಾಗೂ ಆರು ಸೀನಿಯರ್‍ಸ್ ಸ್ಪರ್ಧಿಗಳು ಭಾಗವಹಿಸಲಿzರೆ ಎಂದರು.
ಸಾಲುಮರದ ತಿಮ್ಮಕ್ಕನವರ ಸ್ಮರಣೆಯಲ್ಲಿ ಜ.೧೧ರ ಬೆಳಿಗ್ಗೆ ೮.೩೦ಕ್ಕೆ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದ್ದು, ೩ರಿಂದ ೪, ೫ ರಿಂದ ೬ ಹಾಗೂ ೮ ರಿಂದ ೧೦ ವರ್ಷದೊಳಗಿನ ಮಕ್ಕಳಿಗೆ ಈ ಸ್ಪರ್ಧೆ ನಡೆಯಲಿದೆ. ಪ್ರವೇಶ ಶುಲ್ಕ ೫೦ ರೂ. ಇದ್ದು, ವಿಜೇತರಿಗೆ ನಗದು ಬಹುಮಾನ ಹಾಗೂ ಪದಕ ನೀಡಲಾಗುವುದು. ಈಗಾಗಲೇ ೨೫೦ಕ್ಕೂ ಹೆಚ್ಚು ಮಕ್ಕಳು ಹೆಸರು ನೋಂದಾಯಿಸಿಕೊಂಡಿzರೆ ಎಂದ ಅವರು, ಈ ಕಾರ್ಯಕ್ರಮ ದಲ್ಲಿ ಡಾಲಿ ಧನಂಜಯ್ ನಟನೆಯ ಜೆಸಿ ಚಿತ್ರತಂಡ ಭಾಗವಹಿಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚನ್ನೇಶ್ ಆಚಾರ್ಯ, ಅಭಿಷೇಕ್, ಗಿರಿರಾಜ್ ಗೌಡ, ನಿರಂಜನಿ, ಶ್ವೇತಾ, ಶಶಿಕುಮಾರ್, ಸುನೀಲ್ ಗೌಡ, ಗುರು ಉಪಸ್ಥಿತರಿದ್ದರು.
