ಮಾ. 26: ಸುರಭಿ ಗೋಶಾಲಾ ನೂತನ ಕಟ್ಟಡದ ಪ್ರವೇಶೋತ್ಸವ…
ಶಿವಮೊಗ್ಗ: ಜಿ ಬ್ರಾಹ್ಮಣ ಮಹಾಸಭಾದ (ಪ್ರಾಯೋಜಿತ) ವತಿಯಿಂದ ಎನ್.ಆರ್.ಪುರ ರಸ್ತೆಯ ಮಂಡೇನಕೊಪ್ಪದಲ್ಲಿ ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಪ್ರವೇಶೋತ್ಸವವನ್ನು ಮಾ.೨೬ರ ಸಂಜೆ ೬ಗಂಟೆಗೆ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಧ್ಯಕ್ಷ ಕೆ.ಸಿ. ನಟರಾಜ ಭಾಗವತ್ ಹೇಳಿದರು.
ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಜಿ ಬ್ರಾಹ್ಮಣ ಮಹಾಸಭಾದ ವತಿ ಯಿಂದ ಗೋವುಗಳ ರಕ್ಷಣೆ ಕಾರ್‍ಯ ನಡೆಯುತ್ತಿದೆ. ಈಗಾಗಲೇ ಗೋಶಾಲೆಯಲ್ಲಿ ಹಲವು ಗೋವು ಗಳನ್ನು ಸಂರಕ್ಷಿಸಿ ಕಾಪಾಡಲಾಗು ತ್ತಿದೆ. ಮುಂದುವರಿದ ಭಾಗವಾಗಿ ಗೋಶಾಲೆ ವತಿಯಿಂದ ಗೋ ಉತ್ಪನ್ನಗಳನ್ನು ತಯಾರಿಸಲಾಗು ತ್ತದೆ. ಇವುಗಳನ್ನು ಕರೀದಿಸಿ ಗೋ ಶಾಲೆಗೆ ಬೆಂಬಲ ನೀಡಬೇಕು. ರಾಜ್ಯ ಸರ್ಕಾರ ಕೂಡ ಕೆಲವು ಮಾದಕ ವಸ್ತುಗಳ ಮೇಲೆ ವಿಧಿಸಿದ ತೆರಿಗೆಯ ಸ್ವಲ್ಪ ಹಣವನ್ನು ಗೋಶಾ ಲೆಗಳಿಗೆ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಸುರಭಿ ಗೋಶಾಲಾ ವಿಸ್ತರಣಾ ಕಟ್ಟಡದ ಉದ್ಘಾಟನೆಯನ್ನು ಮಾ.೨೬ರ ಸಂಜೆ ೬ ಗಂಟೆಗೆ ಗೃಹಸಚಿವ ಆರಗ eನೇಂದ್ರ, ಶಾಸಕ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ನೆರವೇರಿಸುವರು. ಕಾರ್ಯಕ್ರಮ ದಲ್ಲಿ ಶಾಸಕರುಗಳಾದ ಆಯ ನೂರು ಮಂಜುನಾಥ್, ರುದ್ರೇ ಗೌಡ, ಡಿ.ಎಸ್. ಅರುಣ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಗೋರಕ್ಷಣಾ ನ್ಯಾಸ ಸಮಿತಿಯ ಎಂ.ಬಿ. ಭಾನುಪ್ರಕಾಶ್, ಮಲೆ ನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಕಾಡಾ ಅಧ್ಯಕ್ಷೆ ಪವಿತ್ರಾ ರಾiಯ್ಯ ಮುಂತಾದವರು ಉಪಸ್ಥಿತರಿ ರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮು ಖರಾದ ವೆಂಕಟೇಶ್ ಮೂರ್ತಿ, ಕೇಶವಮೂರ್ತಿ, ಶಂಕರನಾರಾ ಯಣ, ಕುಮಾರ ಶಾಸ್ತ್ರಿ, ಸೂರ್ಯ ನಾರಾಯಣ, ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.