ಜಿಲ್ಲಾ ಸುದ್ದಿತಾಜಾ ಸುದ್ದಿರಾಜಕೀಯ

ಭದ್ರಾವತಿ ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾವೇರಿದ ಚರ್ಚೆ…

Share Below Link

ಭದ್ರಾವತಿ: ನಗರಸಭೆ ವಾರ್ಡ್‌ಗಳಲ್ಲಿ ಸರಿಯಾಗಿ ಅಭಿವೃಧ್ಧಿ ಕಾಮಗಾರಿ ನಡೆಯದಿರುವುದು, ನಗರೋತ್ಥಾನ ಯೋಜನೆ ಕಾಮಗಾರಿ ಅಪೂರ್ಣ ವಾಗಿರುವುದು, ರಸ್ತೆ ಕಾಮಗಾರಿ ಅಪೂರ್ಣವಾಗಿರುವುದು, ಮಹಿಳಾ ಸದಸ್ಯರುಗಳ ಪತಿಯವರುಗಳು ಬೇರೆ ವಾರ್ಡ್ ಗಳಲ್ಲಿ ಅನಾವಶ್ಯಕವಾಗಿ ಮೂಗು ತೂರಿಸುವುದು, ಕೋರ್ಟ್ ಎದುರು ಭಾಗದ ಸ್ವಲ್ಪ ರಸ್ತೆ ಕಾಮಗಾರಿ ಇನ್ನೂ ನಡೆಯದಿರುವುದು, ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಗೆ ಆಗಮಿಸದಿ ರುವುದು, ಬೇಸಿಗೆ ಕಾಲ ಸಮೀಪಿ ಸುತ್ತಿದ್ದು ಕುಡಿಯುವ ನೀರಿನ ಸಮಸ್ಯೆಗೆ ಪೂರ್ವ ಭಾವಿ ಸಿದ್ದತೆ ಮಾಡಿ ಕೊಳ್ಳುವುದು, ನಗರದ ಸ್ವತ್ತುಗಳ ಮಾರುಕಟ್ಟೆ ದರ ಸಬ್ ರಿಜಿಸ್ಟಾರ್ ಕಚೇರಿಯವರು ಹೆಚ್ಚಿಸಿರುವುದು ಸೇರಿದಂತೆ ಇತರ ವಿಷಯಗಳ ಬಗ್ಗೆ ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರುಗಳು ಆಕ್ಷೇಪಿಸಿ ಅಧಿಕಾರಿ ಗಳು ಸರಿಯಾದ ಮಾಹಿತಿ ಇಲ್ಲದಿದ್ದರೆ ಸಭೆಗೆ ಆಗಮಿಸಬೇಡಿ ಎಂದು ಆರೋಪಿಸಿ ಚರ್ಚೆ ನಡೆಸಿದ ಘಟನೆ ನಡೆದಿದೆ.
ನಗರಸಭೆಯ ಸಾಮಾನ್ಯ ಸಭೆಯಲ್ಲಿ ಭದ್ರಾ ಕಾಲೋನಿ ಯಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಯೋಜನೆ ತಯಾರಿಸಿದ್ದರೂ ಅದನ್ನು ಕಾರ್ಯಗತಗೊಳಿಸದೆ ಇರುವುದು, ಕಣಕಟ್ಟೆ ಭಾಗದಲ್ಲಿ ಅಪಘಾತಗಳು ಉಂಟಾಗಿ ಸಾವು ನೋವುಗಳು ಆಗುತ್ತಿದ್ದು ಇದರ ಬಗ್ಗೆ ಲೋಕೋಪ ಯೋಗಿ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೆ ಕ್ರಮ ಕೈಗೊಳ್ಳದಿರುವ ಬಗ್ಗೆ ಚನ್ನಪ್ಪ, ಬಿ.ಕೆ.ಮೋಹನ್ ಆಕ್ಷೇಪಿಸಿದಾಗ ಅದಕ್ಕೆ ಜರ್ಜ್, ಬಿ.ಟಿ.ನಾಗರಾಜ್ ಸೇರಿದಂತೆ ಇತರರು ಧ್ವನಿಗೂಡಿಸಿದರು.


ನಗರೋತ್ಥಾನ ಯೋಜನೆ ಯಡಿ ನಗರಸಭೆಯ ವಾರ್ಡ್ ಗಳಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳು ಸಮರ್ಪಕ ವಾಗಿ ನಡೆಯದೆ ಅಪೂರ್ಣ ವಾಗಿರುವ ಬಗ್ಗೆ ಹಾಗು ಇನ್ನೂ ಕೆಲವು ಕಡೆ ಪ್ರಾರಂಭ ಆಗದಿರುವ ಬಗ್ಗೆ ದೂರು ಹೇಳಿ ಇದರ ಬಗ್ಗೆ ಬೇಜವಾಬ್ದಾರಿ ತೋರಿರುವ ಅಧಿಕಾರಿಗಳ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಿ ಎಂದು ಹೇಳಿದಾಗ ಅಧ್ಯಕ್ಷೆ ಲತಾ ಚಂದ್ರಶೇಖರ್ ಉತ್ತರಿಸುತ್ತಾ ಈ ಬಗ್ಗೆ ಡಿಸಿ ಯವರಿಗೆ ಪತ್ರ ಬರೆಯೋಣ ಎಂದಾಗ ಸದಸ್ಯರು ಗಳು ಕೇವಲ ಪತ್ರ ಬರೆಯುತ್ತಾ ಇದ್ದರೆ ಏನು ಪ್ರಯೋಜನ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗಬೇಕಂದು ಒತ್ತಾಯಿಸಿದರು.
ಯೋಜನೆಯ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿzಗ ಆನೆಕೊಪ್ಪ ಬಸವರಾಜ್, ಮೋಹನ್, ಉದಯ್ ಕುಮಾರ್ ಸೇರಿದಂತೆ ಇತರರು ಈ ಬಗ್ಗೆ ಆಕ್ಷೇಪಿಸಿ ೧೯ ಕೋಟಿ ರೂ ಯೋಜನೆಯಲ್ಲಿ ಎಷ್ಟು ಕೋಟಿ ಕಾಮಗಾರಿ ನಡೆದಿದೆ ಈ ಬಗ್ಗೆ ಮಾಹಿತಿ ನೀಡಿ ಎಂದು ಏರು ಧ್ವನಿಯಲ್ಲಿ ಪ್ರಶ್ನಿಸಿದರು. ನಮ್ಮ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಬೇರೆಯವರು ಯಾಕೆ ಆಸಕ್ತಿ ವಹಿಸಬೇಕು ಎಂದು ಆಕ್ಷೇಪಿಸಿದರು. ಅಲ್ಲದೆ ಈ ಬಗ್ಗೆ ಸಂಭಂಧಿಸಿದ ಗುತ್ತಿಗೆದಾರರನ್ನು ಸಭೆಗೆ ಕರೆಸಿ ಅವರು ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಸದಸ್ಯರುಗಳು ಒತ್ತಾಯಿಸಿದಾಗ ಇದಕ್ಕೆ ಮಹಿಳಾ ಸದಸ್ಯರುಗಳು ಸಹಮತ ವ್ಯಕ್ತಪಡಿಸಿದರು.
ರಾಜ್ಯದ ಬೇರೆ ತಾಲ್ಲೂಕುಗಳಲ್ಲಿ ಈ ಯೋಜನೆಯ ಕಾಮಗಾರಿ ಶೇ ೯೦ರಷ್ಟು ಮುಗಿದಿದೆ, ಆದರೆ ಭದ್ರಾವತಿಯಲ್ಲಿ ಮಾತ್ರ ಕಾಮಗಾರಿ ಸರಿಯಾಗಿ ನಡೆದಿಲ್ಲ ಶೇ.೫೦ ರಷ್ಟು ಸಹ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ. ಈ ಬಗ್ಗೆ ನಗರಸಭೆ ಎಇಇ ಸಷ್ಟಿಕರಣ ನೀಡುತ್ತಾ ಗುತ್ತಿಗೆದಾರರಿಗೆ ಅವರ ಆರ್ಥಿಕ ಹಿನ್ನಲೆ ನೋಡಿಕೊಂಡು ಕಾಮಗಾರಿಯ ವರ್ಕ್ ಆರ್ಡರ್ ನೀಡಲಾಗಿದೆ ಅದರ ಮೇಲೆ ಅವರು ಬ್ಯಾಂಕ್ ನಿಂದ ಆರ್ಥಿಕ ಸಹಾಯ ಪಡೆದು ಕಾಮಗಾರಿ ಮುಂದುವರೆ ಸಬಹುದು ಅದಕ್ಕೆ ನಗರಸಭೆ ಒಪ್ಪಿಗೆ ನೀಡಿದೆ ಎಂದರು.
ಬಿಹೆಚ್ ರಸ್ತೆ ಕಡದಕಟ್ಟೆ ಬಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಬಹಳ ನಿಧಾನ ಆಗುತ್ತಿದ್ದು ನಗರ ದಿಂದ ಗ್ರಾಮಾಂತರ ಭಾಗಗಳಿಗೆ ಹಾಗು ಶಿವಮೊಗ್ಗದ ಮೂಲಕ ದೂರ ಪ್ರಯಾಣ ಮಾಡುವ ನಾಗರೀಕರಿಗೆ ವಾಹನ ಸವಾರರಿಗೆ ಬಹಳ ತೊಂದರೆ ಆಗುತ್ತಿದೆ ಎಂದು ಆರೋಪಿಸಿದಾಗ, ರೈಲ್ವೇ ಇಲಾಖೆ ಎಇಇ ಉತ್ತರಿಸುತ್ತಾ ಒಬ್ಬರೆ ಗುತ್ತಿಗೆದಾರರ ಮೂರು ಕಡೆ ೮೮ ಕೋಟಿ ರೂ ವೆಚ್ಚದ ಕಾಮಗಾರಿ ಮಾಡುತ್ತಿರುವ ಕಾರಣ ನಿಧಾನ ಆಗಿದೆ ಎಂದು ಮಾಹಿತಿ ನೀಡಿದರು.


ನಂತರ ಶಿವಮೊಗ್ಗದಲ್ಲಿ ರೈಲ್ವೇ ಕಾಮಗಾರಿಗಳು ಮುಕ್ತಾಯ ಹಂತ ದಲ್ಲಿದ್ದು, ಸಧ್ಯದ ಇಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದಾಗ ಅದಕ್ಕೆ ಸದಸ್ಯರುಗಳು ವಿರೋಧಿಸಿ ಆದಷ್ಟು ಬೇಗ ಕಾಮಗಾರಿ ಮುಗಿಸಬೇಕು ಎಂದು ಒತ್ತಾಯಿಸಿ ಈ ಬಗ್ಗೆ ಸ್ಪಷ್ಟನೆ ನೀಡಿ ಎಂದು ಆಗ್ರಹಿಸಿದಾಗ ಮೇ ತಿಂಗಳ ಒಳಗೆ ಮುಗಿಸಿಕೊಡುವು ದಾಗಿ ಭರವಸೆ ನೀಡಿದಾಗ ಮೋಹನ್ ಅದನ್ನು ಬರೆದು ಕೊಡಿ ಮತ್ತು ಅದರ ಕಾಮಗಾರಿ ವಿವಿರ ಗಳನ್ನು ನೀಡಿ ಎಂದು ಒತ್ತಾಯಿಸಿ ದಾಗ ಇಂಜೀನಿಯರ್ ನಿರುತ್ತರ ರಾದಾಗ ಸದಸ್ಯರುಗಳ ಒತ್ತಾಯಕ್ಕೆ ಮಣಿದು ಆದಷ್ಟು ಬೇಗ ಕಾಮಗಾರಿ ಮುಗಿಸಿ ಮೇ ಅಂತ್ಯಕ್ಕೆ ಓಡಾಟಕ್ಕೆ ಅನುಮತಿ ನೀಡಲಾಗುವುದು ಎಂದು ಭರವಸೆ ನೀಡಿದಾಗ ಸದಸ್ಯರುಗಳು ಸುಮ್ಮನಾದರು.
ಬೇಸಿಗೆ ಕಾಲವಾದ್ದರಿಂದ ಕರೆಂಟ್ ಆಗಾಗ್ಗೆ ಕೈಕೊಡುತ್ತಿದ್ದು ಕುಡಿಯುವ ನೀರಿನ ತೊಂದರೆ ಉಂಟಾಗುತ್ತದೆ. ಇದಕ್ಕೆ ಏನು ಸಿದ್ದತೆ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿ, ಹಾಗಾಗಿ ಈಗಲೆ ಪೂರ್ವ ಭಾವಿ ಸಿದ್ದತೆ ಮಾಡಿಕೊಳ್ಳಿ ಎಂದು ಸದಸ್ಯರುಗಳು ಆಗ್ರಹಿಸಿದಾಗ ಇಂಜೀನೀರ್ ಮಾತನಾಡಿ ಹೈವೆ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಕೆಲಸ ನಿಧಾನ ಆಗಿದ್ದು ಸದ್ಯದ ಸರಿಪಡಿಸಿನೀರು ಪೋರೈಕೆಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗುವುದು ಎಂದರು.
ನಗರ ವ್ಯಾಪ್ತಿಯ ಸ್ವತ್ತುಗಳ ಮಾರುಕಟ್ಟೆ ಮಲ್ಯದ ಆಧಾರದ ಮೇಲೆ ನೋಂದಣಿ ಅಧಿಕಾರಿಗಳು ನಿವೇಶನ ಹಾಗು ಸ್ವತ್ತುಗಳ ಮುದ್ರಾಂಕ ಶುಲ್ಕ ಏರಿಸಿದ್ದು ಅದರ ಆಧಾರದ ಮೇಲೆ ನಗರಸಭೆಯು ೨೦೨೪-೨೫ನೇ ಸಾಲಿನ ಆಸ್ತಿ ತೆರಿಗೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿ ಸೂಚನೆ ಯಂತೆ ಅಂದಾಜು ಸರಾಸರಿ ಮಾರುಕಟ್ಟೆ ಮಲ್ಯಗಳ ದರಪಟ್ಟಿ ಅನ್ವಯ ಮಾರ್ಘಸೂಚಿಯನು ಸಾರ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿ ಜರಿಗೊಳಿಸುವ ವಿಷಯದ ಬಗ್ಗೆ ಸದಸ್ಯರುಗಳಾದ ಮೋಹನ್. ಕದಿರೇಶ್, ನಾಗರಾಜ್ ಆಕ್ಷೇಪಿಸಿ ವಿರೋಧ ವ್ಯಕ್ತಪಡಿಸಿದರು.
ಅದಕ್ಕೆ ಉತ್ತರಿಸಿದ ಸಬ್ ರಿಜಿಸ್ಟಾರ್ ಇಲಾಖೆಯ ಸಿಬ್ಬಂದಿ ಉತ್ತ್ತರಿಸಿ ಮಾರುಕಟ್ಟೆ ಮಲ್ಯಗಳ ದರಪಟ್ಟಿ ಅನ್ವಯ ಮಾರ್ಗ ಸೂಚಿಯನುಸಾರ ಆಸ್ತಿ ತೆರಿಗೆ ಯನ್ನು ಪರಿಷ್ಕರಿಸಿ ಜರಿಗೊಳಿಸುವ ಬಗ್ಗೆ ಈಗಾಗಲೆ ಸರ್ಕಾರದಿಂದ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ ಈಗ ಏನೂ ಮಾಡಲು ಬರುವುದಿಲ್ಲ ಎಂದು ಸಮಜಯಿಷಿ ನೀಡಿದರು.
ನಗರಕ್ಕೆ ನಗರಸಭೆ ವತಿಯಿಂದ ಪೊರೈಕೆ ಮಾಡುವ ಕುಡಿಯುವ ನೀರು ಸರಬರಾಜು ವಿಭಾಗಕ್ಕೆ ಸಂಧಂಧೀಸಿದಂತೆ ಇವಿಧ ವಾರ್ಷಿಕ ನಿರ್ವಹಣೆಗಳ ಟೆಂಡರ್‌ಗಾಗಿ ಇಸ್ರೇಲ್ ತಂತ್ರeನವುಳ್ಳ ೧೨ ಎಂಎಲ್‌ಡಿ ಸಾಮರ್ಧ್ಯದ ಆಪ್ಟಿಕ್ ಫೈಬರ್ ಪಿಲ್ಟರ್ ಮಿಡಿಯಾ ನೀರು ಶುಧ್ಧೀಕರಣ ಘಟಕವನ್ನು ರಾಸಾಯನಿಕ ಬಳಕೆಯೊಂದಿಗೆ ಸಂಪೂರ್ಣ ವಾರ್ಷಿಕ ನಿರ್ವಹಣೆ ಮಾಡುವುದಕ್ಕಾಗಿ ೪೨ ಲಕ್ಷ, ಇಸ್ರೇಲ್ ತಂತ್ರeನವುಳ್ಳ ೯.೭೯ ಎಂಎಲ್‌ಡಿ ಸಾಮರ್ಧ್ಯದ ಆಪ್ಟಿಕ್ ಫೈಬರ್ ಪಿಲ್ಟರ್ ಮಿಡಿಯಾ ನೀರು ಶುಧ್ಧೀಕರಣ ಘಟಕವನ್ನು ರಾಸಾಯನಿಕ ಬಳಕೆಯೊಂದಿಗೆ ಸಂಪೂರ್ಣ ವಾರ್ಷಿಕ ನಿರ್ವಹಣೆ ಮಾಡುವುದಕ್ಕಾಗಿ ೩೬ ಲಕ್ಷ, ನಗರಸಭಾ ವ್ಯಾಪ್ತಿಯಲ್ಲಿರುವ ಮಲೀನ ನೀರು ಶುಧ್ದೀಕರಣ ಘಟಕಗಳು ಮತ್ತು ವೆಟ್‌ವೆಲ್‌ಗಳ ನಿರ್ವಹಣೆಗಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಗುತ್ತಿಗೆ ಸಿಬ್ಬಂದಿಗಳನ್ನು ಒದಗಿಸುವುದಕ್ಕಾಗಿ ೨೮.೫೦ ಲಕ್ಷ, ನಗರಸಭೆಯ ನೀರು ಶುಧ್ಧೀಕರಣ ಘಟಕಗಳಲ್ಲಿ ನೀರು ಶುಧ್ಧಿಕರಣಕ್ಕಾಗಿ ಬಳಸು ಫೆರಿಕ್ ಆಲಂ ಖರೀಧಿಸಲು ೩೦ ಲಕ್ಷ, ನೀರು ಸರಬರಾಜು ಯೋಜನೆಗಳ ನಿರ್ವಹಣೆಗಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಮ್ಯಾನ್ ಪವರ್ ಏಜೆನ್ಸಿ ಮುಖಾಂತರ ಗುತ್ತಿಗೆ ಕಾರ್ಮಿಕರನ್ನು ಒದಗಿಸಲು ೧.೨೬ ಕೋಟಿ ರೂಗಳ ವೆಚ್ಚಕ್ಕೆ ಸಭೆಯು ಆಡಳಿತಾತ್ಮಕ ಮಂಜೂರಾತಿ ನೀಡಲು ಕೌನ್ಸಿಲ್ ಸಭೆಗೆ ಅಧಿಕಾರ ಇದ್ದು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ ಸದಸ್ಯರು ಯಾವುದೆ ರೀತಿಯ ಚರ್ಚೆ ಮಾಡದೆ ಒಪ್ಪಿಗೆ ಸೂಚಿಸಿದ ಸಂಗತಿ ನಡೆದಿದೆ.
ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕಾಂತರಾಜ್, ಆಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್ ಉಪಸ್ಥಿತರಿದ್ದರು.