ಜಿಲ್ಲಾ ಸುದ್ದಿತಾಜಾ ಸುದ್ದಿಲೇಖನಗಳು

ಶ್ರೀ ರಾಮನವಮಿಯಲಿ ಅರಳಿದ ಪ್ರೀತಿ…

Share Below Link

ಹದಿಹರೆಯದ ಪ್ರೀತಿಗೆ ಋತುಗಳ ನಿಯಮವಿಲ್ಲ, ಸಮಯದ ಬದ್ಧತೆಯೂ ಇಲ್ಲ, ಒಂದು ಕಣ್ಣಿನ ನೋಟ ಸಾಕು. ಒಂದು ನಗು ಸಾಕು. ಒಂದು ಮಾತಿನ ಸಣ್ಣ ನಾದ ಸಾಕು… ಹೃದಯದೊಳಗೆ ಪ್ರೀತಿ ಅರಳಲು.
ಹದಿಹರೆಯದ ಪ್ರೀತಿ ಅಂದರೆ ಇದೇ ತಾನೇ.
ಸ್ವಲ್ಪ ಸಿಟ್ಟು, ಸ್ವಲ್ಪ ಮುದ್ದು, ಸ್ವಲ್ಪ ಕುಚುಕು,
ಮಾತಿನ ಜಗಳ, ಹೃದಯದಲ್ಲಿ ಮಾತ್ರ ಬಿಟ್ಟಿರಲಾದ ಬೆಸುಗೆ.
ದೇವಾಲಯದ ಒಳಗೆ ರಾಮನ ಮೂರ್ತಿ ಮುಂದೆ ನಿಂತಾಗ, ಅವಳು ನಿಧಾನವಾಗಿ ಕಣ್ಣು ಮುಚ್ಚಿ ಪ್ರಾರ್ಥನೆ ಮಾಡುತ್ತಿದ್ದಳು. ನಾನವಳನ್ನೇ ನೋಡುತ್ತಿದ್ದೆ, ಅವಳ ಪ್ರಾರ್ಥನೆಯನ್ನು, ಅವಳ ನಂಬಿಕೆಯನ್ನು, ಅವಳ ಹೃದಯವನ್ನು. ಅಂದು ಶ್ರೀ ರಾಮನವಮಿ ಮುಂಜಾನೆ ನಗರದ ದೇವಸ್ಥಾನಗಳಲ್ಲಿ ಮಂಗಳಧ್ವನಿಗಳು ಪ್ರತಿಧ್ವನಿಸುತ್ತಿದ್ದವು, ಗಾಳಿಯಲ್ಲಿ ಪಾನಕದ ಸುವಾಸನೆ ಹರಡಿತ್ತು, ಭಕ್ತರ ಹೆಜ್ಜೆಗಳು ದೇವರ ದರ್ಶನದತ್ತ ಸಾಗುತ್ತಿದ್ದವು.
ಅಂದು ನಾನು ಅಮ್ಮನ ಹುಸಿ ಕೋಪಕ್ಕೆ ಮಣಿದು ಬಿಳಿ ರೇಷ್ಮೆ ಪಂಚೆ-ಶರ್ಟ್ ತೊಟ್ಟು ಒಲ್ಲದ ಮನಸ್ಸಿನಿಂದಲೇ ದೇವಸ್ಥಾನಕ್ಕೆ ಕಾಲಿಟ್ಟಿz. ಆದರೆ ಕೆಲ ಕ್ಷಣಗಳಲ್ಲಿ ಆ ದೇವಸ್ಥಾನ ನನ್ನ ಬದುಕಿನ ತಿರುವಾಗಿಬಿಟ್ಟಿತು.
ಗರ್ಭಗುಡಿಯ ಎದುರು ಕಂಬದ ನೆರಳಲ್ಲಿ ಮಲ್ಲಿಗೆ ಹೂವಿನ ಸುವಾಸನೆ ಹೊತ್ತು ಬಿಳಿ ಚೂಡಿದಾರದಲ್ಲಿ ನಿಂತಿದ್ದ ನೀನು, ಹಣೆಯಂದು ಕುಂಕುಮದ ತುಡಿತ, ಕಣ್ಣಲ್ಲಿ ಭಕ್ತಿ, ಮುಖದಲ್ಲಿ ಶಾಂತಿ.
ನಿನ್ನನ್ನು ಕಂಡ ಕ್ಷಣ ಸಾಕ್ಷಾತ್ ಸೀತಾ ಮಾತೆಯನ್ನೇ ಕಂಡಂತೆ ಆಯಿತು.
ನಿನ್ನ ಕಣ್ಣುಗಳಲ್ಲಿ ಭಕ್ತಿ ತುಂಬಿತ್ತು. ಆದರೆ ಅದಕ್ಕಿಂತ ಹೆಚ್ಚಾಗಿ ಒಂದು ಪ್ರೀತಿಯ ಸಿಂಚನವಿತ್ತು.
ನೀ ಕಂಬದ ಕೆಳಗೆ ಕುಳಿತು ಭಜನೆ ಆರಂಭಿಸಿz,
ನಿನ್ನ ಧ್ವನಿಯಲ್ಲಿ ಒಂದೇ ಶಾಂತಿ. ಒಂದೇ ಭಾವನೆ.


ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ|
ನಿನ್ನಷ್ಟು ನೆಮ್ಮದಿಯು ಎಲ್ಲಿಹುದೋ ರಾಮ||
ಆ ಭಕ್ತಿ ಗೀತೆಯ ಪ್ರತಿಯೊಂದು ಅಕ್ಷರವೂ ನನ್ನ ಮನಸ್ಸಿನೊಳಗೆ ಗಾಢವಾಗಿ ಇಳಿಯುತ್ತಿತ್ತು.
ನೀ ದೇವರೊಂದಿಗೆ ಮಾತಾಡುತ್ತಿz,
ಆದರೆ ನಾನು? ನಿನ್ನ ಕಣ್ಣುಗಳೊಂದಿಗೆ ಮಾತಾಡುತ್ತಿz.
ನಿನ್ನಿಷ್ಟದಂತೆನ್ನ ಇಟ್ಟಿರುವೆ ರಾಮ|
ನನ್ನಿಷ್ಟದಂತೆಲ್ಲ ಕೊಟ್ಟಿರುವೆ ರಾಮ||
ಆ ಸಾಲುಗಳನ್ನು ಕೇಳುತ್ತಿzಗ..
ನನಗೆ ಅನಿಸಿತು, ಶ್ರೀ ರಾಮ ಕೇವಲ ಕಲ್ಲಿನ ಮೂರ್ತಿಯಲ್ಲಲ್ಲ, ನಿನ್ನ ಮುಖದ ಆ ಶಾಂತಿಯಲ್ಲೂ, ನಿನ್ನ ಧ್ವನಿಯ ಮಧುರತೆಯಲ್ಲೂ, ನಿನ್ನ ಭಕ್ತಿಯ ಮೃದುವಿನಲ್ಲೂ ಇzನೆಂದು.
ಅದು ಪ್ರೀತಿ ಆಗಿತ್ತೋ ಅಥವಾ ಭಕ್ತಿಯ ಆಲಯದಲ್ಲಿ ಹುಟ್ಟಿದ ಭಾವನೆ ಆಗಿತ್ತೋ ಆ ಕ್ಷಣ ನನಗೆ ತಿಳಿಯಲಿಲ್ಲ. ಆದರೆ ಒಂದು ಸತ್ಯ ಸ್ಪಷ್ಟವಾಯಿತು. ಆ ಕ್ಷಣದಲ್ಲಿ ನನ್ನ ಮನಸ್ಸು ನಿಶ್ಚಲವಾಯಿತು. ಅದು ಪ್ರೀತಿ.. ಸ್ವಾರ್ಥವಿಲ್ಲದ, ಬೇಡಿಕೆಯಿಲ್ಲದ ಪ್ರೀತಿ.
ರಾಮನವಮಿ ಅದೇ ತಾನೇ, ಅದು ಕೇವಲ ಒಂದು ಹಬ್ಬದ ಆಚರಣೆಯಲ್ಲ, ಅದು ತ್ಯಾಗದ ಸಂಕೇತ.. ನಿಷ್ಠೆಯ ಪ್ರತೀಕ.. ಪ್ರೀತಿಯ ಪರಮಾರ್ಥ…
ರಾಮನು ಸೀತೆಗೆ ಕೊಟ್ಟ ಪ್ರೀತಿ, ಸೀತೆಯು ರಾಮನಿಗಾಗಿ ಮಾಡಿದ ತ್ಯಾಗ, ಅದರ ಪ್ರತಿಬಿಂಬವೇ ನನ್ನ ಮತ್ತು ಅವಳ ಪ್ರೀತಿ.
ಆ ದಿನ ನಾನು ದೇವರನ್ನು ನೋಡಲು ಹೋಗಿz, ಆದರೆ ದೇವರ ಮುಂದೆ ನನ್ನ ಹೃದಯವೇ ಯಾರಿಗೋ ಅರ್ಪಣೆಯಾಗಿಬಿಟ್ಟಿತ್ತು. ನೀ ಭಜನೆ ಮುಗಿಸಿ ನಿಧಾನವಾಗಿ ಎದ್ದು ಜನಸಮೂಹದಲ್ಲಿ ಕಾಣೆಯಾಗಿzಗ ನನ್ನ ಮನಸ್ಸು ಮಾತ್ರ ಅ ಉಳಿದಿತ್ತು. ಆ ಕಂಬದ ನೆರಳಲ್ಲಿ, ಆ ಮಲ್ಲಿಗೆ ಸುವಾಸನೆಗೆ ಬಂಽಯಾಗಿ.
ಆ ದಿನದಿಂದ ಪ್ರತಿ ರಾಮನವಮಿಯ ಬೆಳಗ್ಗೆ ನಾನು ದೇವರ ಬಳಿ ಒಂದೇ ಪ್ರಾರ್ಥನೆ ಮಾಡುತ್ತೇನೆ.
ರಾಮಾ..
ನಿನ್ನಂತೆ ಶಾಂತಿ ಕೊಡು ಅಂದಿಲ್ಲ, ಆದರೆ ಆ ದಿನದಂತೆಯೇ
ಒಮ್ಮೆ ಮತ್ತೆ ಅವಳನ್ನು ಕಾಣುವ ಭಾಗ್ಯ ಕೊಡು.
ಹದಿಹರೆಯದ ಪ್ರೀತಿ ಅಷ್ಟೇ.
ಅದು ಆರಂಭವಾಗುತ್ತದೆ ಒಂದು ನೋಟದಿಂದ, ಆದರೆ ಅದು ಉಳಿಯುತ್ತದೆ. ಒಂದು ನೆನಪಾಗಿ… ಒಂದು ಪ್ರಾರ್ಥನೆಯಾಗಿ… ಒಂದು ಮನವಾದ ಪ್ರೀತಿಯಾಗಿ…
ಶ್ರೀ ರಾಮನವಮಿಯ ಆ ದಿನ ದೇವಾಲಯದ ಘಂಟೆ ಧ್ವನಿಯ ನಡುವೆ, ಪಾನಕದ ಸಿಹಿತನದ ನಡುವೆ,
ಎರಡು ಹೃದಯಗಳ ನಡುವೆ ಒಂದು ನಿಶ್ಶಬ್ದ ಒಪ್ಪಂದ ಬೆಸುಗೆಯಾಯಿತು.
ನಿನ್ನ ಸಂತೋಷವೇ ನನ್ನ ಪ್ರೀತಿ..
ಇದು ಪ್ರೇಮವಲ್ಲ, ಇದು ಪ್ರೇಮ ಸಿಂಚನ…