ಜಿಲ್ಲಾ ಸುದ್ದಿತಾಜಾ ಸುದ್ದಿದೇಶರಾಜಕೀಯ

೨೦೨೮ರ ಮಹಿಳಾ ರಾಜಕೀಯ ಕ್ರಾಂತಿ ಆಗಲಿ: ಶೇ.೩೩ ಮೀಸಲಾತಿ ಜರಿಗೆ ಕೇಂದ್ರಕ್ಕೆ ಮೇಘರಾಜ್ ಮನವಿ

Share Below Link

ಶಿವಮೊಗ್ಗ, ಮಾ.೧೭: ಕೇಂದ್ರ ಸರ್ಕಾರ ಜರಿಗೊಳಿಸಿರುವ ಶೇ.೩೩ ಮಹಿಳಾ ಮೀಸಲಾತಿ ಮಸೂದೆಯನ್ನು ೨೦೨೮ರ ಕರ್ನಾಟಕ ವಿಧಾನಸಭಾ ಚುನಾವಣೆಯ ಜರಿಗೆ ತರಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿzರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮೀಸಲಾತಿ ಮಸೂದೆ ಕೇವಲ ರಾಜಕೀಯ ಕ್ರಮವಲ್ಲ, ಅದು ದೇಶದ ಮಹಿಳೆಯರ ಹಕ್ಕುಗಳ ಸಾಧನೆಗೆ ಹಾಗೂ ಸಮಾನತೆಯ ಹೊಸ ಅಧ್ಯಾಯಕ್ಕೆ ದಾರಿ ತೆರೆದಿಡುವ ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದರು. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಶೇ.೩೩ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಸಂವಿಧಾನಬದ್ಧವಾಗಿ ಮೀಸಲು ಮಾಡುವ ಮೂಲಕ ರಾಜಕೀಯ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ಸಾಧಿಸುವುದು ಇದರ ಉzಶವಾಗಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ದೇಶದಲ್ಲಿ ಶೀಘ್ರವೇ ಜನಗಣತಿ ನಡೆಸಿ, ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು. ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಮಹಿಳಾ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜರಿಗೆ ತರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.


ಕರ್ನಾಟಕ ರಾಜ್ಯದಲ್ಲಿ ಶೇ.೩೩ ಮಹಿಳಾ ಮೀಸಲಾತಿಯನ್ನು ಜರಿಗೆ ತಂದರೆ ಆಡಳಿತ ಶೈಲಿಯ ಹೊಸ ಸಂವೇದನೆ ಮೂಡಿ ಬರಲಿದೆ. ಮಹಿಳೆಯರ ನಾಯಕತ್ವ ಹೆಚ್ಚುವುದರಿಂದ ರಾಜಕೀಯದಲ್ಲಿ ಹೊಸ ದೃಷ್ಟಿಕೋನಗಳು ಹಾಗೂ ಅಭಿವೃದ್ಧಿ ಆಧಾರಿತ ನಿರ್ಧಾರಗಳು ಬಲವಾಗಲಿವೆ ಎಂದು ಹೇಳಿದರು. ಇಂತಹ ಕ್ರಮವು ಪರಂಪರ ರಾಜಕೀಯ ಮತ್ತು ವಂಶಪಾರಂಪರ್ಯ ರಾಜಕಾರಣಕ್ಕೆ ಸವಾಲಾಗಿ ಪರಿಣಮಿಸುವುದರ ಜೊತೆಗೆ ಹೊಸ ತಲೆಮಾರಿನ ನಾಯಕತ್ವಕ್ಕೆ ದಾರಿ ಮಾಡಿಕೊಡಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಪರಿಶಿಷ್ಟ ಜತಿ, ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ಕ್ಷೇತ್ರಗಳಲ್ಲಿಯೂ ಮಹಿಳಾ ಸ್ಥಾನಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯದ ವ್ಯಾಪ್ತಿಯನ್ನು ವಿಸ್ತರಿಸಬಹುದು. ಸಮಾಜದಲ್ಲಿ ಅರ್ಧದಷ್ಟು ಸಂಖ್ಯೆಯಲ್ಲಿ ಮಹಿಳೆಯರು ಇದ್ದರೂ, ಅವರನ್ನು ರಾಜಕೀಯದಲ್ಲಿ ಕೇವಲ ಮತದಾರರಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂಬುದು ವಿಷಾದನೀಯ ಸಂಗತಿ ಎಂದು ಅವರು ಟೀಕಿಸಿದರು.
ಪ್ರಸ್ತುತ ಕರ್ನಾಟಕ ವಿಧಾನಸಭೆಯ ೨೨೪ ಸ್ಥಾನಗಳಲ್ಲಿ ಕೇವಲ ೧೦ ಮಹಿಳಾ ಶಾಸಕರು ಮಾತ್ರ ಇರುವುದನ್ನು ಅವರು ಉದಾಹರಿಸಿ, ಮಹಿಳೆಯರ ರಾಜಕೀಯ ಪ್ರತಿನಿಧಿತ್ವ ಇನ್ನೂ ಅತೀ ಕಡಿಮೆ ಮಟ್ಟದಲ್ಲಿದೆ ಎಂದು ಹೇಳಿದರು. ಇದೇ ರೀತಿ ೩೪ ಸದಸ್ಯರ ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬರೇ ಮಹಿಳಾ ಸಚಿವರಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದರು.
ಈ ಹಿನ್ನೆಲೆ ಎನ್‌ಡಿಎ ಸರ್ಕಾರ ಮುಂಬರುವ ವಿಧಾನಸಭಾ ಚುನಾವಣೆಯ ಶೇ.೩೩ ಮಹಿಳಾ ಮೀಸಲಾತಿಯನ್ನು ಜರಿಗೆ ತರಲು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇದು ಕೇವಲ ಮಹಿಳೆಯರ ಸಬಲೀಕರಣವಲ್ಲ, ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಪ್ರಮುಖ ಕ್ರಮವಾಗಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟ್‌ನ ಪ್ರಮುಖರಾದ ಶಂಕ್ರನಾಯ್ಕ, ಆಲೀಂಖಾನ್, ಮಂಜುಳಾ, ರಾಮಣ್ಣ, ಬಸವರಾಜ್, ಕೋಡ್ಲೂರು ಶ್ರೀಧರ್ ಮತ್ತು ಸುನೀಲ್‌ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *