ನೂತನ ಗ್ರಾಮ ಒನ್ ಸೇವಾ ಕೇಂದ್ರ ಉದ್ಘಾಟನೆ…
ಚನ್ನಗಿರಿ: ಗ್ರಾಮ ಒನ್ ನಾಗರಿಕ ಸೇವಾ ಕೆಂದ್ರದಿಂದ ಜನರ ಶ್ರಮ, ಸಮಯ ಉಳಿತಾಯ ವಾಗಲಿದೆ ಎಂದು ಪಿಡಿಒ ರಾಘವೇಂದ್ರ ನಾಯ್ಕ್ ಹೇಳಿದರು.
ಕಬ್ಬಳ ಗ್ರಾಮದಲ್ಲಿ ನೂತನ ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ಈ ಸೇವಾ ಕೇಂದ್ರದ ಮೂಲಕ ಸಾರ್ವಜನಿಕರು ಹತ್ತಾರು ರೀತಿಯ ಸೇವೆಗಳನ್ನು ಪಡೆಯಬಹುದು. ವಿವಿಧ ಬಗೆಯ ಪ್ರಮಾಣ ಪತ್ರಗಳು, ಆನ್ ಲೈನ್ ಅರ್ಜಿಗಳನ್ನು ಭರ್ತಿ ಮಾಡ ಬಹುದು. ಇದರಿಂದಾಗಿ ಜನರ ಶ್ರಮ, ಸಮಯ ಉಳಿತಾಯ ವಾಗಲಿದೆ. ಇದನ್ನು ಗ್ರಾಮಸ್ಥರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಗ್ರಾಮದ ಹಟ್ಟಿ ನಾಯಕರಾದ ಮಲ್ಲಿಕಾರ್ಜುನ್ ನಾಯ್ಕ್ ಮಾತನಾಡಿ, ಗ್ರಾಮಸ್ಥರು ವಿವಿಧ ಇಲಾಖೆಗಳ ಸೇವೆಗಳನ್ನು ಪಡೆಯಲು ಜಿ, ತಾಲ್ಲೂಕು ಮತ್ತು ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿತ್ತು. ಈಗ ಮಧ್ಯವರ್ತಿಗಳ ಹಾವಳಿ ಇಲ್ಲದೆ. ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ಗ್ರಾಮಸ್ಥರ ಸಮಯ ಮತ್ತು ಹಣ ಉಳಿಸಬಹುದಾಗಿದೆ ಎಂದರು.
ಈ ವೇಳೆ ಹೆಡ್ ಹಮಾಲಿ ಭೀಮಾ ನಾಯ್ಕ್, ಮಂಜ ನಾಯ್ಕ್, ಗೋವಿಂದ್ ನಾಯ್ಕ್, ಸ್ವಾಮಿ, ಸಂತೋಷ್, ಸತ್ಯನಾರಾಯಣ, ಅಭಿಲಾಷ್ ಎಂ, ನಿಖಿಲ್, ವೆಲ್ಡಿಂಗ್ ಶ್ರೀನಿವಾಸ್, ಲೋಹಿತ್, ಚಂದ್ರ ನಾಯ್ಕ್ ಸೇರಿದಂತೆ ಮುಂತಾದವರು ಇದ್ದರು.