ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ…
ಶಿವಮೊಗ್ಗ: ನಾಡಪ್ರಭು ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದಿzರೆ ಎಂದು ವಿಶ್ರಾ ಂತ ಪ್ರಾಂಶುಪಾಲ ಡಾ. ತಿಮ್ಮಯ್ಯ ನಾಯ್ಡು ಹೇಳಿದರು.
ಅವರು ಇಂದು ಜಿಡಳಿತ, ಜಿಪಂ, ಜಿ ಒಕ್ಕಲಿಗರ ಸಂಘ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇ ಗೌಡರ ಜಯಂತಿ ಕಾರ್‍ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಕೆಂಪೇಗೌಡರು ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿzರೆ. ಕೇವಲ ಬೆಂಗಳೂರು ನಗರವನ್ನು ಮಾತ್ರ ಕಟ್ಟಲಿಲ್ಲ ಅದರ ಜೊತೆಗೆ ಸಮಾನತೆಯ ತತ್ವವನ್ನು ಸಾರಿ ದವರು. ಎ ಸಮುದಾಯಗ ಳನ್ನು ಪ್ರೀತಿಸಿದವರು. ಒಂದು ನಗರ ಹೇಗಿರಬೇಕು ಎಂಬ ಕಲ್ಪನೆ ಯನ್ನು ನೂರಾರು ವರ್ಷಗಳ ಹಿಂದೆಯೇ ಊಹಿಸಿದ್ದವರು. ಅವರ ಆದರ್ಶಗಳು ಸದಾ ಉಸಿರಾ ಡುತ್ತಲೇ ಇರುತ್ತವೆ ಎಂದರು.
ವಿಜಯನಗರ ಸಾಮ್ರಾಜ್ಯ ಅಂದು ಉತ್ತುಂಗ ಸ್ಥಿತಿಗೆ ತಲುಪಿ ತ್ತು. ಕೆಂಪೇಗೌಡರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜ ರಾಗಿದ್ದರು. ಯಲಹಂಕ ಅವರ ರಾಜಧಾನಿಯಾಗಿತ್ತು. ವಿಜಯ ನಗರದ ಅಂದಿನ ವಿಜೃಂಭಣೆಯ ನಗರವನ್ನು ನೋಡಿದ ಕೆಂಪೇ ಗೌಡರಿಗೆ ತಾವೂ ಕೂಡ ಒಂದು ಬಹುದೊಡ್ಡ ನಗರವನ್ನು ಕಟ್ಟ ಬೇಕು ಎಂಬ ಆಸೆ ಹೊಂದಿ ವಿಜ ಯನಗರ ರಾಜರ ಒಪ್ಪಿಗೆ ಪಡೆದು ಧನ ಸಹಾಯ ವನ್ನೂ ಪಡೆದು ಬೆಂಗಳೂರು ನಗರವನ್ನು ಅತ್ಯಂತ ವಿಸ್ತಾರವಾಗಿ ಕಟ್ಟಿದರು. ಬಹುಶಃ ಅಧಿಕಾರಕ್ಕೆ ಬರುವ ಮೊದಲೇ ಬೆಂಗಳೂರು ನಗರ ಹೇಗಿರಬೇಕು ಎಂಬ ಕಲ್ಪನೆಯನ್ನು ಇವರು ಕಂಡುಕೊಂಡಿದ್ದರು ಎಂದರು.
ಒಂದು ಬಹುದೊಡ್ಡ ಕೋಟೆ ಯನ್ನು ನಿರ್ಮಿಸಿದರು. ಅದರ ಒಳಗೆ ಆಡಳಿತ, ಕೋಟೆಯ ಹೊರಗೆ ಪೇಟೆಗಳ ವಿಸ್ತಾರ ಎ ಜತಿಯವರಿಗೂ ಮನ್ನಣೆ ನೀಡಿದ್ದರು. ಜೊತೆಗೆ ಎ ಜತಿ ಯ ವ್ಯಾಪಾರಕ್ಕೂ ಮತ್ತು ವಿವಿಧ ಬಗೆಯ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟವರು. ಇಂದಿಗೂ ಚಿಕ್ಕಪೇಟೆ, ದೊಡ್ಡ ಪೇಟಿ, ಬಳೆ ಪೇಟೆ, ಅಕ್ಕಿಪೇಟೆ, ಅರಳೀಪೇಟೆ ಹೀಗೆ ಒಂದೊಂದು ವಸ್ತುವಿಗೂ ಒಂದೊಂದು ವ್ಯಾಪಾರ ಸ್ಥಳ ನಿಗದಿಪಡಿದ್ದರು ಎಂದರು.
ಜೊತೆಗೆ ಜತಿ ಆಧಾರಿತವಾಗಿ ಪೇಟೆಗಳನ್ನು ನಿರ್ಮಿಸಿದ ಕೀರ್ತಿ ಅವರಿಗೇ ಸಲ್ಲುತ್ತದೆ ಆ ಮೂಲಕ ಎ ಜತಿಗಳಿಗೂ ಸಮಾನ ಅವಕಾಶವನ್ನು ಕೆಂಪೇಗೌಡರು ಕೊಟ್ಟಿದ್ದರು. ಉದಾ. ನಗರಕರ್ ಪೇಟೆ( ವೀರಶೈವ) ಗೌಡರ ಪೇಟೆ. ಕುರುಬರ ಪೇಟೆ, ತಿಗಳ ಪೇಟೆ, ಶೆಟ್ಟರ ಪೇಟೆ, ಸುಲ್ತಾನ್‌ಪೇಟೆ ಹೀಗೆ ಎ ಜತಿ ಧರ್ಮದವರಿ ಗೂ ಆದ್ಯತೆ ನೀಡಿ ಬೆಂಗಳೂರು ಪಟ್ಟಣವನ್ನು ವಿಸ್ತಾರಗೊಳಿಸಿದ ವರು ಎಂದರು.
ಮಹಾನ್ ದೈವಭಕ್ತರಾಗಿದ್ದ ಇವರು ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ದೇವಾಲಯ ನಿರ್ಮಿಸಿದ ವರು. ಈಗಲೂ ಕೂಡ ಬೆಂಗಳೂ ರಿನಲ್ಲಿ ಅತಿಹೆಚ್ಚು ದೇವಾಲಯ ಗಳನ್ನು ನಾವು ಕಾಣುತ್ತೇವೆ. ಶಿವ ಭಕ್ತರಾಗಿದ್ದ ಇವರು ವಿಷ್ಣು ದೇವಾ ಲಯಗಳನ್ನು ಕೂಡ ನಿರ್ಮಿಸಿ zರೆ. ದೈವಭಕ್ತಾರಾಗಿದ್ದರೂ ಕೂಡ ಮಢ್ಯತೆಯನ್ನು ಮೀರಿ ವೈಚಾರಿಕತೆ ಬೆಳೆಸಿದವರು. ಅಂದಿನ ಕಾಲದಲ್ಲಿ ಅವಿವಾಹಿತ ಹೆಣ್ಣಿನ ಬೆರಳನ್ನುಕತ್ತರಿಸುವ ಪದ್ದತಿ ಇತ್ತು. ಅದನ್ನು ತಪ್ಪಿಸಿದವರು ಎಂದರು.
ಒಂದು ದಂತಕಥೆಯಂತೆ ಕಂಡುಬರುವ ಇವರು ಇಂದಿಗೂ ಆದರ್ಶಪ್ರಾಯವಾಗಿzರೆ. ಸುಮಾರು ೬೯ ವರ್ಷಗಳ ಕಾಲ ಆಡಳಿತ ನಡೆಸಿದರು. ಕೆಲವರು ೪೬ ವರ್ಷ ಎನ್ನುತ್ತಾರೆ. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ಅವರು ಆಡಳಿತ ನಡೆಸಿದ್ದು ೬೯ ವರ್ಷಗಳು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಕೆಂಪೇಗೌಡರು ಇಂದಿನ ರಾಜಕಾರಣಿಗಳಿಗೆ ಆದರ್ಶ ವ್ಯಕ್ತಿಯಾಗಿzರೆ. ಅವರ ಹಾಕಿದ ಮೇಲ್ಪಂಕ್ತಿಗಳು ನಮಗೆ ಅನುಕರಣೀಯವಾಗಿವೆ. ಜತಿಗೆ ಜಯಂತಿಗಳು ಸೀಮಿತವಾಗಬಾ ರದು. ಬಿಜೆಪಿ ಸರ್ಕಾರ ನಾಡಗೌಡ ಕೆಂಪೇಗೌಡರ ಹೆಸರನ್ನು ಚಿರಸ್ಥಾ ಯಿಯನ್ನಾಗಿ ಮಾಡಿದೆ. ಹಲವು ಸ್ಥಳಗಳಿಗೆ ಅವರ ಹೆಸರನ್ನು ಇಟ್ಟಿದೆ ಎಂದರು.
ಜಿ ಒಕ್ಕಲಿಗರ ಸಂಘದ ಅಧ್ಯಕ್ಷ ಹೆಚ್ .ಟಿ ಆದಿಮೂರ್ತಿ, ಮೇಯರ್ ಎಸ್. ಶಿವಕುಮಾರ್, ಪ್ರಮು ಖರಾದ ಡಿ.ಮಂಜು ನಾಥ್, ಚಂದ್ರಕಾಂತ್, ಡಾ. ಶಾಂತಾ ಸುರೇಂದ್ರ, ಸುವರ್ಣಾ ಶಂಕರ್, ಅಪರ ಜಿಧಿಕಾರಿ ಮೇ ಘನಾ ಸೇರಿದಂತೆ ಹಲವರಿದ್ದರು.