ಜಿಲ್ಲಾ ಸುದ್ದಿತಾಜಾ ಸುದ್ದಿ

ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವ ಮಾರ್ಗದರ್ಶನ ಯಶಸ್ಸಿಗೆ ಕಾರಣ: ಕೆ.ಸೆಲ್ವಂ …

Share Below Link

ಶಿವಮೊಗ್ಗ: ಸಾಧನೆಗೆ ಬೆನ್ನೆಲು ಬಾಗಿ ಪ್ರೋತ್ಸಾಹ ನೀಡುವುದು ಶಿಕ್ಷಣ ಸಂಸ್ಥೆಗಳು, ಶಾಲಾ ಕಾಲೇಜಿನ ಶಿಕ್ಷಣ ಹಂತದಲ್ಲಿ ಸಿಗುವ ಮಾರ್ಗದರ್ಶನವೇ ಜೀವನದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾ ಗುತ್ತದೆ ಎಂದು ಡಿವಿಎಸ್ ಕಾಲೇ ಜಿನ ಹಿರಿಯ ವಿದ್ಯಾರ್ಥಿ, ವಿದುಷಿ ನಾಟ್ಯಶ್ರೀ ಕೆ.ಸೆಲ್ವಂ ಹೇಳಿದರು.
ಶಿವಮೊಗ್ಗ ನಗರದ ದೇಶಿಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ವತಿಯಿಂದ ಆಯೋ ಜಿಸಿದ್ದ ಸಾಂಸ್ಕೃತಿಕ ದಿನಾಚರಣೆ ೨೦೨೩ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಶಾಲಾ ಕಾಲೇಜಿನ ಹಂತದಲ್ಲಿ ಸಿಗುವ ಅವಕಾಶಗಳನ್ನು ಪರಿಣಾಮಕಾ ರಿಯಾಗಿ ಬಳಸಿಕೊಳ್ಳುವ ಆಲೋ ಚನೆ ಮಾಡಬೇಕು. ನಿಮ್ಮಲ್ಲಿರುವ ಕೌಶಲ್ಯಗಳನ್ನು, ಪ್ರತಿಭೆಯನ್ನು ಪ್ರದರ್ಶಿಸುವ, ನಿಮ್ಮ ಆಸಕ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.
ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಸಂದರ್ಭ ದಲ್ಲಿಯೂ ಡಿವಿಎಸ್ ಶಿಕ್ಷಣ ಸಂಸ್ಥೆ ಯು ವಿದ್ಯಾರ್ಥಿಗಳಿಗೆ ಹೆಚ್ಚಿನ ವೇದಿಕೆಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳಲ್ಲಿ ರುವ ಪ್ರತಿಭೆ ಪ್ರದರ್ಶನಕ್ಕೆ ಸೂಕ್ತ ವೇದಿಕೆ ನಿರ್ಮಿಸುವ ಜತೆಯಲ್ಲಿ ಸಾಧನೆ ಮಾಡಲು ನಿರಂತರವಾಗಿ ಪ್ರೋತ್ಸಾಹ ಕೊಡುತ್ತಿದೆ. ನನ್ನ ಸಾಧನೆಗೂ ಡಿವಿಎಸ್ ಸಂಸ್ಥೆಯಲ್ಲಿ ಸಿಕ್ಕ ಪ್ರೋತ್ಸಾಹ ಕಾರಣ ಎಂದರು.
ದೇಶಿಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಭಾಗವಹಿಸುವುದೇ ವಿದ್ಯಾರ್ಥಿಗಳಿಗೆ ಸಿಗುವ ಉತ್ತಮ ಅವಕಾಶ. ಇಂತಹ ವೇದಿಕೆಗಳು ಕಾಲೇಜು ಶಿಕ್ಷಣದ ನಂತರ ಸಿಗುವುದು ಬಹಳ ಅಪರೂಪ. ಆದ್ದರಿಂದ ಕಾಲೇಜಿನಲ್ಲಿ ದೊರ ಕುವ ವೇದಿಕೆಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇ ಖರ್ ಮಾತನಾಡಿ, ವಿದುಷಿ ನಾಟ್ಯಶ್ರೀ ನಮ್ಮ ಕಾಲೇಜಿನ ವಿದ್ಯಾ ರ್ಥಿನಿ ಎನ್ನುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ರಾಷ್ಟ್ರ, ಅಂತ ರಾಷ್ಟ್ರೀಯ ಮಟ್ಟದಲ್ಲಿ ನಾಟ್ಯಶ್ರೀ ಅವರು ಮಾಡಿರುವ ಸಾಧನೆಯು ಎಲ್ಲ ವಿದ್ಯಾರ್ಥಿಗಳಿಗೂ ಸ್ಫೂರ್ತಿ. ಸಾಧಕರಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ಕೊಳಲೆ ರುದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ದೇಶಿಯ ವಿದ್ಯಾಶಾಲಾ ಸಮಿತಿ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ ಮಾತನಾಡಿದರು.
ದೇಶಿಯ ವಿದ್ಯಾಶಾಲಾ ಸಮಿತಿ ಖಜಂಚಿ ಬಿ.ಗೋಪಿನಾಥ್, ಡಿವಿಎಸ್ ಕಲಾ, ವಿeನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಪ್ರೊ. ಎಚ್.ಎಸ್.ಸುಧಾಕರ್, ಸಾಂಸ್ಕೃ ತಿಕ ಸಂಯೋಜಕಿ ಕೇತನ ಆರ್ತಿ. ಎನ್ ಮತ್ತಿತರರು ಇದ್ದರು.