ಇತರೆಜಿಲ್ಲಾ ಸುದ್ದಿತಾಜಾ ಸುದ್ದಿದೇಶವಿದೇಶಶಿಕ್ಷಣ

ಸೇಕ್ರೆಡ್ ಹಾರ್ಟ್ ಚರ್ಚ್‌ನಲ್ಲಿಂದು ಗುಡ್‌ಫ್ರೈಡೆ ಆಚರಣೆ…

Share Below Link

ವಿಶ್ವದಾದ್ಯಂತ ಇಂದು ಕ್ರೈಸ್ತ ಬಾಂಧವರು ಗುಡ್ ಫ್ರೈಡೇಯನ್ನು (ಪವಿತ್ರ ಶುಕ್ರವಾರ- ಶುಭ ಶುಕ್ರವಾರ) ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಿದ್ದಾರೆ. ಯೇಸುಕ್ತಿಸ್ತನನ್ನು ಶಿಲುಬೆಗೆ ಏರಿಸಿದ ದಿನವನ್ನು ಪ್ರತಿವರ್ಷ ಗುಡ್ ಫ್ರೈಡೇ ಎಂದು ಆಚರಿಸಲಾಗುತ್ತದೆ. ಈ ವರ್ಷ ಗುಡ್ ಫ್ರೈಡೇ ಆಚರಣೆಗಳು ಫೆ.೧೪ ರಂದು ಆರಂಭವಾಗಿ ಮಾ.೨೯ರ ಇಂದು ಮುಕ್ತಾಯವಾಗುತ್ತದೆ. ಮಾ.೩೧ರಂದು ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬವಾದ ಈಸ್ಟರ್‌ನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುವುದು.
ಕ್ರೈಸ್ತ ಧರ್ಮದವರಿಗೆ ಕ್ರಿಸ್‌ಮಸ್ ಎಷ್ಟು ಮುಖ್ಯವೋ ಗುಡ್ ಫ್ರೈಡೇ ಕೂಡಾ ಅಷ್ಟೇ ಮುಖ್ಯ. ಕ್ರೈಸ್ತ ಬಾಂಧವರು ಇಂದು ಚರ್ಚ್‌ಗಲ್ಲಿ ಉಪವಾಸ ಪ್ರಾರ್ಥನೆ, ಧ್ಯಾನದಲ್ಲಿ ನಿರತರಾಗಿರುತ್ತಾರೆ. ಯೇಸುಕ್ತಿಸ್ತ ಜನಿಸದ ದಿನವನ್ನು ಕ್ರಿಸ್‌ಮಸ್ ಆಗಿ ಆಚರಣೆ ಮಾಡಿದರೆ, ಶಿಲುಬೆಗೆ ಏರಿಸಿದ ಈ ದಿನವನ್ನು ಗುಡ್ ಫ್ರೈಡೇಯನ್ನಾಗಿ ಆಚರಿಸಲಾಗು ತ್ತದೆ. ಇದನ್ನು ಹೋಲಿ ಫ್ರೈಡೇ, ಗ್ರೇಟ್ ಫ್ರೈಡೇ ಎಂದೂ ಕರೆಯಲಾಗುತ್ತದೆ.
ಶಿವಮೊಗ್ಗ ಧರ್ಮಕ್ಷೇತ್ರದ ಎಲ್ಲಾ ಚರ್ಚ್‌ಗಳಲ್ಲಿ ಇಂದು ಶಿಲುಬೆಹಾದಿಯ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಅಂತೆಯೇ ಶಿವಮೊಗ್ಗ ಬಿ.ಹೆಚ್. ರಸ್ತೆಯ ಸೇಕ್ರೆಡ್ ಹಾರ್ಟ್ ಪ್ರಧಾನಾಲಯದಲ್ಲಿ ಧರ್ಮಾಧ್ಯಕ್ಷ ಪರಮಪೂಜ್ಯ ಫ್ರಾನ್ಸಿಸ್ ಸೆರಾವ್ ಅವರ ಸಾನಿಧ್ಯದಲ್ಲಿ ಧರ್ಮಕೇಂದ್ರದ ಇನ್ನಿತರ ಧರ್ಮಗುರುಗಳೊಂದಿಗೆ ಮಧ್ಯಾಹ್ನ ೩ಗಂಟೆಗೆ ಚರ್ಚ್‌ನ ಹೋರ ಆವರಣದಲ್ಲಿ ಕ್ರೈಸ್ತ ಭಕ್ತಾದಿಗಳು ಬಿಸಿಲಿನಲ್ಲಿಯೇ ಶಿಲುಬೆ ಹಾದಿಯ ವಿಶೇಷ ಪ್ರಾರ್ಥನೆ ನೆರವೇರಿಸಿದರು. ಅಧಿಕ ಸಂಖ್ಯೆಯ ಭಕ್ತರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.